ಹೈದರಾಬಾದ್ (ತೆಲಂಗಾಣ): ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಅಭಿನಯದ ಜುಂಡ್ ಚಿತ್ರದ ಟ್ರೈಲರ್ ಅನ್ನು ಇಂದು ಬಿಡುಗಡೆ ಮಾಡಲಾಗಿದೆ. ಚಿತ್ರದಲ್ಲಿ ಬಚ್ಚನ್ ಬೀದಿ ಮಕ್ಕಳಿಂದ ರಾಷ್ಟ್ರೀಯ ಫುಟ್ಬಾಲ್ ತಂಡವನ್ನು ರಚಿಸಲು ಪ್ರೇರೇಪಿಸುವ ಕೋಚ್ ಆಗಿ ನಟಿಸಿದ್ದಾರೆ.
ನಾಗ್ಪುರದ ಸಾಮಾಜಿಕ ಕಾರ್ಯಕರ್ತ, ಸ್ಲಂ ಸಾಕರ್ ಸಂಸ್ಥೆಯ ಸಂಸ್ಥಾಪಕ ವಿಜಯ್ ಬರ್ಸೆ ಅವರ ಜೀವನವನ್ನು ಆಧರಿಸಿದ ಚಿತ್ರ ಇದಾಗಿದೆ. ಅಮಿತಾಭ್ ಬಚ್ಚನ್ ಸೇರಿದಂತೆ ಸೈರಾಟ್ ಖ್ಯಾತಿಯ ಆಕಾಶ್ ಥೋಸರ್ ಮತ್ತು ರಿಂಕು ರಾಜ್ಗುರು ಕೂಡ ನಟಿಸಿದ್ದಾರೆ.
- " class="align-text-top noRightClick twitterSection" data="">
ಚಿತ್ರವನ್ನು ನಾಗರಾಜ ಮಂಜುಳೆ ಬರೆದು ನಿರ್ದೇಶಿಸಿದ್ದಾರೆ. ಪ್ರಾಧ್ಯಾಪಕರಾಗಿದ್ದ ಅಮಿತಾಭ್ ಬಚ್ಚನ್ ಆ ಹುದ್ದೆಯ ನಿವೃತ್ತಿ ಬಳಿಕ ಸ್ಲಂ ಮಕ್ಕಳ ಅಭ್ಯುದಯಕ್ಕಾಗಿ ಏನೆಲ್ಲ ಕಷ್ಟ-ನಷ್ಟ, ನೋವು-ನಲಿವು ಅನುಭವಿಸುತ್ತಾರೆ ಅನ್ನೋದನ್ನ ಚಿತ್ರದಲ್ಲಿ ತೋರಿಸಲಾಗಿದೆ.
ಅನಾಥ ಮಕ್ಕಳಿಗೆ ಮಾರ್ಗದರ್ಶನ ನೀಡಿ ಒಂದು ಅದ್ಭುತ ಫುಟ್ಬಾಲ್ ತಂಡವನ್ನು ರಚಿಸುವುದು ಮತ್ತು ಅವರನ್ನು ಬೆಳಕಿಗೆ ತರುವುದು ಚಿತ್ರದ ಪ್ರಧಾನ ಕಥೆಯಾಗಿದೆ.
ಇದನ್ನು ಟಿ ಸಿರೀಸ್, ತಾಂಡವ್ ಫಿಲಮ್ಸ್ ಎಂಟರ್ಟೈನ್ಮೆಂಟ್ ಪ್ರವೈಟ್ ಲಿಮಿಟೆಡ್ ಮತ್ತು ಆತ್ಪಾಟ್ ಫಿಲಮ್ಸ್ ಬ್ಯಾನರ್ ಅಡಿಯಲ್ಲಿ ಭೂಷಣ್ ಕುಮಾರ್, ಕ್ರಿಶನ್ ಕುಮಾರ್, ರಾಜ್ ಹಿರೇಮಠ, ಸವಿತಾ ಹಿರೇಮಠ್, ನಾಗರಾಜ ಮಂಜುಳೆ, ಗಾರ್ಗೀ ಕುಲಕರ್ಣಿ ಮತ್ತು ಮೀನು ಅರೋರಾ ನಿರ್ಮಿಸಿದ್ದಾರೆ.
ಚಲನಚಿತ್ರವನ್ನು ಈ ಹಿಂದೆ ಸೆಪ್ಟೆಂಬರ್ 2020ರಲ್ಲಿ ಬಿಡುಗಡೆ ಮಾಡಲು ಯೋಜಿಸಲಾಗಿತ್ತು. ಆದರೆ, COVID-19 ಸಾಂಕ್ರಾಮಿಕ ರೋಗದಿಂದಾಗಿ ಎರಡು ಬಾರಿ ಮುಂದೂಡಲಾಗಿತ್ತು. ಇದೀಗ ಜುಂಡ್ ಮಾರ್ಚ್ 4, 2022ರಂದು ದೇಶಾದ್ಯಂತ ಬಿಡುಗಡೆಯಾಗಲಿದೆ.