ಹೈದರಾಬಾದ್ : ತೌಕ್ತೆ ಚಂಡಮಾರುತ ಕಳೆದ ರಾತ್ರಿ ಮಹಾರಾಷ್ಟ್ರದಾದ್ಯಂತ ಅವಾಂತರ ಸೃಷ್ಟಿಸಿದೆ. ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅವರ ಕಚೇರಿಯಲ್ಲಿ ಪ್ರವಾಹ ಉಂಟಾಗಿದೆ. ಈ ವೇಳೆ ಕಚೇರಿಯನ್ನು ಸಿಬ್ಬಂದಿ ರಿಪೇರಿ ಮಾಡಿದ್ದು, ಈ ಬಗ್ಗೆ ಸಿಬ್ಬಂದಿ ಕಾರ್ಯಕ್ಕೆ ಅದ್ಭುತ ಎಂದು ಶ್ಲಾಘಿಸಿದ್ದಾರೆ.
ಕಳೆದ ರಾತ್ರಿ ತೌಕ್ತೆ ಚಂಡಮಾರುತ ನಗರವನ್ನು ಅಪ್ಪಳಿಸಿದ ನಂತರ ಮುಂಬೈನ ಉಪನಗರ ಜುಹುವಿನಲ್ಲಿರುವ ಬಿಗ್ ಬಿ ಕಚೇರಿ ಜನಕ್ ಪ್ರವಾಹಕ್ಕೆ ಸಿಲುಕಿದೆ ಎಂದು ತಿಳಿಸಿದ್ದಾರೆ. "ಚಂಡಮಾರುತದ ಮಧ್ಯೆ ವಿಲಕ್ಷಣವಾದ ಮೌನವಿದೆ. ಜನಕ್ ಕಚೇರಿಯಲ್ಲಿ ಪ್ರವಾಹ ಉಂಟಾಗಿದೆ. ಭಾರಿ ಮಳೆಗೆ ಶೆಡ್ಗಳು ಮತ್ತು ಆಶ್ರಯ ಮನೆಗಳು ಹಾರಿಹೋಗಿವೆ" ಎಂದು ಬರೆದಿದ್ದಾರೆ.
ಮಳೆಯ ನಂತರ ಕಚೇರಿಯನ್ನು ರಿಪೇರಿ ಮಾಡುವಾಗ ಸಿಬ್ಬಂದಿಯೊಂದಿಗೆ ಬಿಗ್ ಬಿ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದು, ಅವರ ಕಾರ್ಯಕ್ಕೆ ಅದ್ಭುತ ಎಂದು ಹೇಳಿದ್ದಾರೆ. "ಇಂತಹ ಪರಿಸ್ಥಿತಿಗಳಲ್ಲಿ ಸಿಬ್ಬಂದಿ ಅದ್ಭುತವಾಗಿ ಕೆಲಸ ಮಾಡಿದ್ದಾರೆ.
ಅವರ ಸಮವಸ್ತ್ರವು ಒದ್ದೆಯಾಗಿದೆ. ಹೀಗಾಗಿ, ವಾರ್ಡ್ರೋಬ್ನಿಂದ ತುರ್ತಾಗಿ ಉಡುಗೆಗಳನ್ನು ನೀಡಿದ್ದೇವೆ. ಈಗ ಇವರು ಹೆಮ್ಮೆಯಿಂದ ಚೆಲ್ಸಿಯಾ ಮತ್ತು ಜೈಪುರ ಪಿಂಕ್ ಪ್ಯಾಂಥರ್ ಬೆಂಬಲಿಗರು " ಎಂದು ಬರೆದಿದ್ದಾರೆ.