ETV Bharat / sitara

ಮುಂಬೈ ಪೊಲೀಸರ ಕಾರ್ಯಕ್ಕೆ ಕೃತಜ್ಞತೆ ಸಲ್ಲಿಸಿದ ಬಾಲಿವುಡ್ ಗಣ್ಯರು - B Town expressed gratitude to Mumbai police

ಹಗಲು-ಇರುಳು ಎನ್ನದೆ ತಮ್ಮ ಕುಟುಂಬದಿಂದ ದೂರ ಉಳಿದು ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಮುಂಬೈ ಪೊಲೀಸರಿಗೆ ಬಿ ಟೌನ್ ಮಂದಿ ಕೃತಜ್ಞತೆ ಸಲ್ಲಿಸಿದ್ಧಾರೆ. ತಮ್ಮ ಕಾರ್ಯ ವೈಖರಿ ಬಗ್ಗೆ ತಯಾರಾದ ವಿಡಿಯೋವೊಂದನ್ನು ಮುಂಬೈ ಪೊಲೀಸ್ ಅಫಿಷಿಯಲ್ ಟ್ವಿಟ್ಟರ್​​ನಲ್ಲಿ ಷೇರ್ ಮಾಢಲಾಗಿತ್ತು.

Mumbai police
ಮುಂಬೈ ಪೊಲೀಸರಿಗೆ ಕೃತಜ್ಞತೆ
author img

By

Published : Apr 9, 2020, 10:27 PM IST

ಜನ ಸಾಮಾನ್ಯರು ಮನೆಯಿಂದ ಹೊರಬಾರದೆ ಕೊರೊನಾ ವೈರಸ್​​​​ನಿಂದ ತಮ್ಮನ್ನು ಕಾಪಾಡಿಕೊಳ್ಳುತ್ತಿದ್ದರೆ, ವೈದ್ಯರು, ಆರೋಗ್ಯ ಸಿಬ್ಬಂದಿ, ಪೌರ ಕಾರ್ಮಿಕರು, ಸರ್ಕಾರಿ ನೌಕರರು, ಪೊಲೀಸರು, ಮಾಧ್ಯಮದವರು ಮಾತ್ರ ಪ್ರತಿದಿನ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ.

  • Dear Mumbai Police, you are known as one of the BEST in the world. Your contribution to the COVID-19 pandemic is unparalleled. Singham will wear his Khakee and stand beside you whenever you ask. Jai Hind, Jai Maharashtra 🙏@CPMumbaiPolice @MumbaiPolice

    — Ajay Devgn (@ajaydevgn) April 9, 2020 " class="align-text-top noRightClick twitterSection" data=" ">

ಈ ನಡುವೆ ಜನರನ್ನು ಹೊರ ಬಾರದಂತೆ ಜಾಗೃತಿ ಮೂಡಿಸುವಲ್ಲಿ ಪೊಲೀಸರು ಭಾರೀ ಶ್ರಮ ಪಡುತ್ತಿದ್ಧಾರೆ. ಈ ಕಾರಣ ಬಾಲಿವುಡ್ ಸ್ಟಾರ್​​​​​ಗಳು ಸೇರಿದಂತೆ ಬಹಳಷ್ಟು ಗಣ್ಯರು ಪೊಲೀಸರ ಕಾರ್ಯವನ್ನು ಶ್ಲಾಘಿಸಿದ್ದಾರೆ. 'ತಮ್ಮ ವೈಯಕ್ತಿಕ ಕೆಲಸಗಳನ್ನು ಬದಿಗಿಟ್ಟು ಜನರಿಗಾಗಿ ಪೊಲೀಸರು ಹೇಗೆ ಕೆಲಸ ಮಾಡುತ್ತಿದ್ದಾರೆ ಎಂಬ ವಿಡಿಯೋವೊಂದನ್ನು ಮುಂಬೈ ಪೊಲೀಸ್ ಅಫಿಷಿಯಲ್ ಟ್ವಿಟ್ಟರ್​​​​ನಲ್ಲಿ ಶೇರ್ ಮಾಡಲಾಗಿತ್ತು.

  • This is the time to show our gratitude to the ones who are working selflessly and tirelessly to keep us safe. Despite being away from their families and loved ones, they work with their spirits high to protect us. And for that, we are very grateful @mumbaipolice. Thank you!

    — Karan Johar (@karanjohar) April 9, 2020 " class="align-text-top noRightClick twitterSection" data=" ">

ಇದಕ್ಕೆ ರೀ ಟ್ವೀಟ್ ಮಾಡಿರುವ ಬಾಲಿವುಡ್ ಸಿಂಗಂ ಅಜಯ್ ದೇವಗನ್​​ 'ಪ್ರಿಯ ಮುಂಬೈ ಪೊಲೀಸರೇ ಜಗತ್ತಿನಲ್ಲೇ ನೀವು ಬಹಳ ಶ್ರೇಷ್ಠ, ಕೊರೊನಾ ವಿರುದ್ಧ ಹೋರಾಡುತ್ತಿರುವ ನಿಮ್ಮ ಕೆಲಸವನ್ನು ನಿಜಕ್ಕೂ ವರ್ಣಿಸಲು ಸಾಧ್ಯವಿಲ್ಲ' ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ನಿಮಗೆ ಬೇಕು ಎನಿಸಿದಲ್ಲಿ ಸಿಂಗಂ ಕೂಡಾ ಖಾಕಿ ತೊಟ್ಟು ನಿಮ್ಮೊಂದಿಗೆ ನಿಲ್ಲುತ್ತಾನೆ' ಎಂದು ಬರೆದುಕೊಂಡಿದ್ಧಾರೆ.

ದಣಿವಿಲ್ಲದೆ, ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಪೊಲೀಸರಿಗೆ ಕೃತಜ್ಞತೆ ಸಲ್ಲಿಸಲು ಇದು ಸರಿಯಾದ ಸಮಯ ಎಂದು ಕರಣ್ ಜೋಹರ್ ರೀ ಟ್ವೀಟ್ ಮಾಡಿದ್ಧಾರೆ. ನಮ್ಮನ್ನು ಕಾಪಾಡಲು ತಮ್ಮ ಕುಟುಂಬದಿಂದ ಪ್ರೀತಿಪಾತ್ರರಿಂದ ದೂರವಿದ್ದು ಕರ್ತವ್ಯ ನಿಭಾಯಿಸುತ್ತಿದ್ಧಾರೆ. ಮುಂಬೈ ಪೊಲೀಸರೇ ನೀವು ನಿಜಕ್ಕೂ ಗ್ರೇಟ್​, ನಿಮಗೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

  • This is the time to heartily thank our Mumbai Police, who leaving their families at homes are working with their high spirit and untiring efforts for our security and safety..
    Thank you Mumbai Police
    Love you Mumbai Police @MumbaiPolice

    — Anil Kapoor (@AnilKapoor) April 9, 2020 " class="align-text-top noRightClick twitterSection" data=" ">

ಮಾಧುರಿ ದೀಕ್ಷಿತ್ ಕೂಡಾ ಟ್ವೀಟ್ ಮಾಡಿ ' ತಮ್ಮವರಿಂದ ದೂರ ಇದ್ದು ನಮ್ಮನ್ನು ರಕ್ಷಿಸಲು ಹಗಲು, ಇರುಳು ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಮುಂಬೈ ಪೊಲೀಸರಿಗೆ ನನ್ನ ನಮನಗಳು ಎಂದು ಧನ್ಯವಾದ ತಿಳಿಸಿದ್ದಾರೆ. ಅಷ್ಟೇ ಅಲ್ಲ, ಪೊಲೀಸರು ನಮಗಾಗಿ ಇಷ್ಟೆಲ್ಲಾ ಕಷ್ಟಪಡುವಾಗ ನಾವು ಮನೆಯಲ್ಲೇ ಇದ್ದು ಅವರಿಗೆ ಗೌರವ ನೀಡಬೇಕು' ಎಂದು ಜನರ ಬಳಿ ಮನವಿ ಮಾಡಿದ್ದಾರೆ.

  • यह घर से बाहर हैं, ताकि हम घरों में सुरक्षित रहें।
    शुक्रिया मुंबई की पुलिस फोर्स को 🙏🏻 https://t.co/UlwfPdnZtW

    — Hrithik Roshan (@iHrithik) April 9, 2020 " class="align-text-top noRightClick twitterSection" data=" ">

ಅನಿಲ್ ಕಪೂರ್, ಹೃತಿಕ್ ರೋಷನ್, ಅಭಿಷೇಕ್ ಬಚ್ಚನ್​, ಶಾಹಿದ್ ಕಪೂರ್, ಅರ್ಜುನ್ ಕಪೂರ್, ಜಾಕಿ ಶ್ರಾಫ್ ಹಾಗೂ ಇನ್ನಿತರರು ಕೂಡಾ ಮುಂಬೈ ಪೊಲೀಸರಿಗೆ ಧನ್ಯವಾದ ತಿಳಿಸಿದ್ಧಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.