ಟಾಲಿವುಡ್ ಸೂಪರ್ ಸ್ಟಾರ್ ಪ್ರಭಾಸ್ ತಮಗೆ ಎದುರಾಗಿದ್ದ ಭಾಷೆ ಸಮಸ್ಯೆಯಿಂದ ಪಾರಾಗಿದ್ದಾರೆ. ಈ ನಟನ ಬುದ್ಧಿವಂತಿಕೆ ಎಲ್ಲರಿಂದ ಮೆಚ್ಚುಗೆ ಪಡಿದಿದೆ.
ಬಹುನಿರೀಕ್ಷಿತ ಸಾಹೋ ಚಿತ್ರದ ಹಿಂದಿ ವರ್ಷನ್ಗೆ ಡಾರ್ಲಿಂಗ್ ಪ್ರಭಾಸ್ ಅವರೇ ಡಬ್ ಮಾಡಿದ್ದಾರೆ. ಇದು ಅವರ ಹಿಂದಿ ಭಾಷೆಯ ಅಭಿಮಾನಿಗಳ ಪ್ರಶಂಸೆಗೆ ಕಾರಣವಾಗಿದೆ.
ಕಳೆದ ಎರಡು ದಿನಗಳ ಹಿಂದೆ ಸಾಹೋ ಚಿತ್ರದ ಟ್ರೇಲರ್ ರಿಲೀಸ್ ಬಳಿಕ ಮಾಧ್ಯಮಗೋಷ್ಟಿಯಲ್ಲಿ ಮಾತನಾಡುತ್ತಿದ್ದ ಅವರು, 'ನಾನು ಹಿಂದಿಯಲ್ಲಿ ಬರೆಯುತ್ತೇನೆ ಹಾಗೂ ಓದುತ್ತೇನೆ. ಆದರೆ, ಸ್ಪಷ್ಟವಾಗಿ ಮಾತಾಡುವುದು ನನಗೆ ಕಷ್ಟ' ಎಂದರು. ಈ ವೇಳೆ ಸೌತ್ ಇಂಡಿಯಾ ಅಭಿಮಾನಿಗಳಿಗಾಗಿ ಹಿಂದಿಯಲ್ಲಿಯೇ ಮಾತಾಡುವಂತೆ ಒತ್ತಾಯಿಸಲಾಯಿತು. ತಮಗೆ ಎದುರಾದ ಈ ಗಂಡಾಂತರದಿಂದ ಎಸ್ಕೇಪ್ ಆಗಲು ಪ್ರಭಾಸ್ ಪ್ರಯತ್ನಿಸಿದರು. ಆದರೆ, ಮಾಧ್ಯಮದವರು ಬಿಡಲಿಲ್ಲ. ಈ ವೇಳೆ ತಮ್ಮ ಬುದ್ಧಿವಂತಿಕೆ ಉಪಯೋಗಿಸಿದ ಈ ಬಾಹುಬಲಿ 'ಜೈ ಹಿಂದ್' ಎಂದು ಕೂಗಿದರು.
ಟಾಲಿವುಡ್ ರೆಬೆಲ್ನ ಸಮಯಪ್ರಜ್ಞೆ ಹಾಗೂ ಜಾಣತನದ ಉತ್ತರಕ್ಕೆ ಕಾರ್ಯಕ್ರಮದಲ್ಲಿದ್ದವರ ಮುಖದಲ್ಲಿ ನಗೆ ಮೂಡಿಸಿತು. ಜತೆಗೆ ಅಲ್ಲಿದ್ದವರೆಲ್ಲೂ ಪ್ರಭಾಸ್ ಅವರ ಈ ರಿಯಾಕ್ಷನ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಾಹೋ, ಬಾಹುಬಲಿ ನಂತರ ಪ್ರಭಾಸ್ ನಟಿಸುತ್ತಿರುವ ಬಹುನಿರೀಕ್ಷಿತ ಸಿನಿಮಾ. ಬಾಲಿವುಡ್ ನಟಿ ಶ್ರದ್ಧಾ ಕಪೂರ್ ನಟಿಸಿರುವ ಈ ಚಿತ್ರ ಇದೇ ತಿಂಗಳ 30 ರಂದು ದೇಶಾದ್ಯಂತ ಬಿಡುಗಡೆಯಾಗುತ್ತಿದೆ.