ಹೈದರಾಬಾದ್ : ಬಾಲಿವುಡ್ ತಾರೆ ಅರ್ಜುನ್ ಕಪೂರ್ ತಮ್ಮ ಪಾರ್ಟ್ನರ್ ಮಲೈಕಾ ಅರೋರಾ ಕ್ಲಿಕ್ ಮಾಡಿದ ತಮ್ಮ ಹುಟ್ಟುಹಬ್ಬದ ಚಿತ್ರವನ್ನು ಹಂಚಿಕೊಂಡಿದ್ದಾರೆ. ಅರ್ಜುನ್ ಈ ಫೋಟೋಗಾಗಿ ಮಲೈಕಾಗೆ ಫೊಟೋ ಕ್ರೆಡಿಟ್ ನೀಡಿದ್ದು, ಅವಳು ನನ್ನನ್ನು ಸುಂದರವಾಗಿ ಕಾಣುವಂತೆ ಮಾಡಿದ್ದಾಳೆ ಎಂದು ಹೇಳಿದ್ದಾರೆ.
- " class="align-text-top noRightClick twitterSection" data="
">
ಅರ್ಜುನ್ ಕಪೂರ್ ಜೂನ್ 26 ರಂದು ತಮ್ಮ ಜನ್ಮದಿನ ಆಚರಿಸಿಕೊಂಡಿದ್ದು, ತನ್ನ ಗೆಳೆಯರಿಗಾಗಿ ಅವರು ಅದ್ದೂರಿ ಪಾರ್ಟಿ ಆಯೋಜಿಸಿದ್ದರು. ಇದರಲ್ಲಿ ಅವರ ಸಹೋದರಿಯರಾದ ಅನ್ಶುಲಾ ಕಪೂರ್, ಜಾನ್ವಿ ಕಪೂರ್ ಮತ್ತು ಖುಷಿ ಕಪೂರ್ ಕೂಡ ಭಾಗವಹಿಸಿದ್ದರು.
- " class="align-text-top noRightClick twitterSection" data="
">
ಮಲೈಕಾ ಕ್ಲಿಕ್ ಮಾಡಿದ ಚಿತ್ರವನ್ನು ಹಂಚಿಕೊಂಡ ಅರ್ಜುನ್, ಕಳೆದ ಒಂದು ವರ್ಷದಲ್ಲಿ ಆಕೆ ನಾನು ದಣಿದಾಗ ಹಾಗೂ ಗೊಂದಲಕ್ಕೊಳಗಾದ ನನ್ನೊಂದಿಗಿದ್ದಳು. ಜೀವನವು ಒಡ್ಡುವ ಸವಾಲುಗಳನ್ನು ಎದುರಿಸಲು ಸಿದ್ಧವಾಗುವ ವ್ಯಕ್ತಿಯಾಗಿ ಈಗ ವಿಕಸನಗೊಂಡಿದ್ದೇನೆ. ಇದಕ್ಕೆ ಮಲೈಕಾನೇ ಕಾರಣ ಎಂದು ಅರ್ಜುನ್ ಬರೆದಿದ್ದಾರೆ.
ನನ್ನನ್ನು ನಂಬಿದ, ನನ್ನನ್ನು ಬೆಂಬಲಿಸಿದ ಮತ್ತು ನನ್ನ ಬಗ್ಗೆ ಕಾಳಜಿವಹಿಸಿದ ಎಲ್ಲರನ್ನೂ ನಾನು ಸ್ಮರಿಸುತ್ತೇನೆ. ನನ್ನ ಸ್ನೇಹಿತರು ಮತ್ತು ಕುಟುಂಬಕ್ಕೆ ನನ್ನೊಂದಿಗೆ ನಿಂತಿದ್ದಕ್ಕಾಗಿ ಧನ್ಯವಾದಗಳು ಎಂದು ಅವರು ಬರೆದಿದ್ದಾರೆ.