ETV Bharat / sitara

ಕೂದಲು ಉದುರಿ ಬೊಕ್ಕ ತಲೆಯಾಗಿದೆ..ಇನ್ನು ಮದುವೆ ಯಾಕಾಗಬೇಕು ಅಂತಿದ್ದಾರೆ ಅರ್ಜುನ್​​ ಕಪೂರ್ - undefined

ಪ್ರೀತಿಯ ವಿಷಯದಲ್ಲಿ ಸಂತೋಷವಾಗಿದ್ದೇನೆ. ವೃತ್ತಿಜೀವನದಲ್ಲಿ, ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿದಂತೆ ನನ್ನ ಜೀವನ ಪ್ರಶಾಂತವಾಗಿದೆ. ಈಗ ಹೊಟ್ಟೆ ತುಂಬಾ ತಿನ್ನುತ್ತಿದ್ದೇನೆ, ಕಣ್ತುಂಬಾ ನಿದ್ರಿಸುತ್ತಿದ್ದೇನೆ. ಜೀವನದಲ್ಲಿ ಇದಕ್ಕಿಂತ ಬೇರೆ ಇನ್ನೇನು ಬೇಕು ಎಂದು ಪ್ರಶ್ನಿಸುತ್ತಿದ್ದಾರೆ ಅರ್ಜುನ್ ಕಪೂರ್​​​​​.

ಅರ್ಜುನ್​​ ಕಪೂರ್
author img

By

Published : May 8, 2019, 4:46 PM IST

ಮದುವೆ ಆಗದೆ ನನಗೆ ಬೊಕ್ಕ ತಲೆ ಬಂದಿದೆ..ಇನ್ನು ಮದುವೆ ಆಗಿ ಏನು ಪ್ರಯೋಜನ ಎನ್ನುವ ಮೂಲಕ ಬಾಲಿವುಡ್ ನಟ ಅರ್ಜುನ್ ಕಪೂರ್ ಅಭಿಮಾನಿಗೆ ನಿರಾಶೆ ಮೂಡಿಸಿದ್ದಾರೆ .

maliak,arjun
ಮಲೈಕಾ ಅರೋರ, ಅರ್ಜುನ್​​ ಕಪೂರ್

ನಾನು ಮಲೈಕಾ ಅರೋರ ಇಬ್ಬರೂ ಮದುವೆಯಾಗಲು ಹೊರಟಿದ್ದೇವೆ ಎಂದು ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ ಅದೆಲ್ಲಾ ಏನೂ ಇಲ್ಲ. ಈ ಬಗ್ಗೆ ಎಷ್ಟು ಸ್ಪಷ್ಟನೆ ನೀಡಿದರೂ ಯಾರೂ ಇದನ್ನು ಒಪ್ಪುತ್ತಿಲ್ಲ. ಪದೇ ಪದೇ ಇದೇ ಪ್ರಶ್ನೆ ಉದ್ಭವವಾಗುತ್ತಿದೆ. ಸಾಧಾರಣವಾಗಿ ಪುರುಷರಿಗೆ ಮದುವೆಯಾದ ನಂತರ ಕೂದಲು ಉದುರಿ ಬೊಕ್ಕ ತಲೆಯಾಗುತ್ತದೆ ಎನ್ನುತ್ತಾರೆ. ಆದರೆ ನನಗೆ ಮದುವೆಗೆ ಮುನ್ನವೇ ಬೊಕ್ಕ ತಲೆ ಬಂದಿದೆ. ಇನ್ನು ಮದುವೆ ಆಗಿ ಏನು ಪ್ರಯೋಜನ ಸ್ವಾಮಿ ಎಂದು ಅರ್ಜುನ್ ಪ್ರಶ್ನಿಸಿದ್ದಾರೆ.

arjun
ಅರ್ಜುನ್​​ ಕಪೂರ್

ಆದರೆ ಅರ್ಜುನ್ ಮಾತನಾಡಿರುವಂತೆ ಅವರಿಗೂ ನಿಜವಾಗಿ ಕೂದಲು ಉದುರಿಲ್ಲ. ಅಶುತೋಷ್​ ಗೋವರ್ಕರ್ ಅವರ ನಿರ್ದೇಶನದಲ್ಲಿ ಅರ್ಜುನ್ ಮುಂದಿನ ಸಿನಿಮಾ 'ಪಾಣಿಪತ್​​​​​'ನಲ್ಲಿ ಅರ್ಜುನ್​​​​​ ತಲೆ ಕೂದಲನ್ನು ತೆಗೆಸಲಿದ್ದಾರೆ. ಈ ಬಗ್ಗೆ ಅವರು ಹೇಳಿಕೊಂಡಿದ್ದಾರೆ. ಆದರೆ ತಮ್ಮ ಮದುವೆ ವಿಚಾರವಾಗಿ ಕೂಡಾ ಮಾತನಾಡಿದ ಅರ್ಜುನ್​, ಈಗಲೇ ನನಗೆ ಮದುವೆ ಏಕೆ..? ಪ್ರೀತಿಯಲ್ಲಿ ಸಂತೋಷವಾಗಿದ್ದೇನೆ. ವೃತ್ತಿಜೀವನದಲ್ಲಿ, ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿದಂತೆ ನನ್ನ ಜೀವನ ಪ್ರಶಾಂತವಾಗಿದೆ. ಈಗ ಹೊಟ್ಟೆ ತುಂಬಾ ತಿನ್ನುತ್ತಿದ್ದೇನೆ. ಕಣ್ತುಂಬಾ ನಿದ್ರಿಸುತ್ತಿದ್ದೇನೆ. ಜೀವನದಲ್ಲಿ ಇದಕ್ಕಿಂತ ಬೇರೆ ಇನ್ನೇನು ಬೇಕು ಎನ್ನುತ್ತಾರೆ ಅರ್ಜುನ್​. ಸದ್ಯಕ್ಕೆ ಅರ್ಜುನ್ ಕಪೂರ್ 'ಪಾಣಿಪತ್​' 'ಇಂಡಿಯಾಸ್ ಮೋಸ್ಟ್​ ವಾಂಟೆಡ್​​' ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ.

Intro:Body:

aruju kapoor

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.