ಮುಂಬೈ: ತನ್ನ ಇತ್ತೀಚಿನ ಬಿಡುಗಡೆಯಾದ ಸರ್ದಾರ್ ಕಾ ಗ್ರಾಂಡ್ಸನ್ ಸಿನಿಮಾ ಪ್ರಚಾರ ಸಂದರ್ಶನದಲ್ಲಿ, ಬಾಲಿವುಡ್ ನಟ ಅರ್ಜುನ್ ಕಪೂರ್ ತನಗಿಂತ ವಯಸ್ಸಿನಲ್ಲಿ 12 ವರ್ಷ ದೊಡ್ಡವರಾದ ಮಲೈಕಾ ಅರೋರಾ ಅವರೊಂದಿಗಿನ ಸಂಬಂಧದ ಬಗ್ಗೆ ಮಾತನಾಡಿದ್ದಾರೆ.
- " class="align-text-top noRightClick twitterSection" data="
">
ಈ ಹಿಂದೆ ನಟ ಅರ್ಬಾಜ್ ಖಾನ್ ಜೊತೆ ಮದುವೆಯಾಗಿದ್ದ ಮಲೈಕಾಗೆ 18 ವರ್ಷದ ಮಗನಿದ್ದಾನೆ. ಸದ್ಯ ಅರ್ಬಾಜ್ರಿಂದ ಡಿವೋರ್ಸ್ ಪಡೆದಿರುವ ಮಲೈಕಾ ಅರ್ಜುನ್ ಕಪೂರ್ ಜೊತೆ ಡೇಟಿಂಗ್ನಲ್ಲಿದ್ದಾರೆ ಎಂಬ ಸುದ್ದಿ ಬಾಲಿವುಡ್ನಲ್ಲಿ ಹರಿದಾಡುತ್ತಿತ್ತು. ನಾನು ನನ್ನ ವೈಯಕ್ತಿಕ ಜೀವನದ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ, ಏಕೆಂದರೆ ನೀವು ನಿಮ್ಮ ಸಂಗಾತಿಯನ್ನು ಗೌರವಿಸಬೇಕು ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ 35 ವರ್ಷದ ನಟ ಅರ್ಜುನ್.
- " class="align-text-top noRightClick twitterSection" data="
">
ಇನ್ನು ಅರ್ಜುನ್ ಕಪೂರ್ ಇದೇ ಸಂದರ್ಶನದಲ್ಲಿ ದಿ. ನಟಿ ಶ್ರೀದೇವಿ ಹಾಗೂ ಬೋನಿ ಕಪೂರ್ ಅವರ ಪ್ರೇಮ ಸಂಬಂಧದ ಕುರಿತು ಮಾತನಾಡಿದ್ದಾರೆ. ಪ್ರೀತಿ ಅನ್ನೋದು ಸಂಕೀರ್ಣ ಹಾಗೂ ಜಟಿಲ. ಶ್ರೀದೇವಿ ಅವರೊಂದಿಗಿನ ಅಪ್ಪನ ಪ್ರೀತಿಯ ಸಂಬಂಧವನ್ನು ನಾನು ಗೌರವಿಸುತ್ತೇನೆ ಎಂದಿದ್ದಾರೆ.
- " class="align-text-top noRightClick twitterSection" data="
">
ಒಬ್ಬರನ್ನು ಪ್ರೀತಿಸುತ್ತಿರುವಾಗಲೇ ಮತ್ತೊಬ್ಬರ ಜೊತೆ ಪ್ರೀತಿಯಲ್ಲಿ ಬೀಳುವುದನ್ನು ಅರ್ಥ ಮಾಡಿಕೊಳ್ಳಬೇಕಷ್ಟೆ ಎಂದಿರುವ ಅರ್ಜುನ್ ಕಪೂರ್ ನನ್ನ ತಂದೆ ಮಾಡಿದ್ದು ಸರಿ ಎಂದು ಹೇಳುವುದಿಲ್ಲ. ಅಪ್ಪ ತೆಗೆದುಕೊಂಡ ನಿರ್ಧಾರದಿಂದ ಮಕ್ಕಳಾಗಿದ್ದ ನಮ್ಮ ಮನಸ್ಸಿನ ಮೇಲೆ ಪರಿಣಾಮ ಬೀರಿದೆ. ಅದನ್ನೆಲ್ಲ ಗಮಸಿದಾಗ ಹೀಗೆಲ್ಲ ಆಗುತ್ತದೆ ಎಂದು ಹೇಳಲಾಗುವುದಿಲ್ಲ. ಆದರೆ, ತನ್ನದೇ ಆದ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿರುವ ವಯಸ್ಸಾದ ವ್ಯಕ್ತಿಯ ಸ್ಥಿತಿಯಲ್ಲಿ ನಿಂತು ನೋಡಿದಾಗ ಅವರನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ ಎಂದಿದ್ದಾರೆ ಅರ್ಜುನ್.
ಕೆಲವೊಂದು ವೈಯಕ್ತಿಕ ಕಾರಣಗಳಿಂದ ಶ್ರೀದೇವಿ ಹಾಗೂ ಬೋನಿ ಕಪೂರ್ ಅವರ ಮೊದಲ ಪತ್ನಿ ಮೋನಾ ಶೌರಿ ಹಾಗೂ ಮಕ್ಕಳ ಜೊತೆ ಸಂಬಂಧ ಅಷ್ಟು ಚೆನ್ನಾಗಿರಲಿಲ್ಲ. ಎಂತಹ ಪರಿಸ್ಥಿತಿ ಬಂದರೂ ತಂದೆಯ ಜೊತೆ ಇರುವಂತೆ ಅಮ್ಮ ಹೇಳಿದ್ದರು. ಅಮ್ಮ ಹೇಳಿಕೊಟ್ಟಂತೆ ಒಳ್ಳೆಯ ಮಗನಾಗಿ ನನ್ನ ಕರ್ತವ್ಯ ನಿರ್ವಹಿಸುತ್ತಿದ್ದೇನೆ ಎಂದಿದ್ದಾರೆ.
ಸದ್ಯ ಅರ್ಜುನ್ ಕಪೂರ್ ಹಾರರ್ ಹಾಗೂ ಕಾಮಿಡಿ ಸಿನಿಮಾ ಭೂತ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರಲ್ಲಿ ನಟಿಯರಾಗಿ ಯಾಮಿ ಗೌತಮ್ ಮತ್ತು ಜಾಕ್ವೆಲಿನ್ ಫರ್ನಾಂಡಿಸ್ ಕಾಣಿಸಿಕೊಳ್ಳಲಿದ್ದಾರೆ.