ಹೈದರಾಬಾದ್: ಬಾಲಿವುಡ್ ಸ್ಟಾರ್ ಅರ್ಜುನ್ ಕಪೂರ್ ತಮ್ಮ ಬದುಕಿನಲ್ಲಿ ತುಂಬಾ ಸ್ಪೆಷಲ್ ಎನಿಸಿರುವ ವ್ಯಕ್ತಿಯನ್ನು 'ಶಾಶ್ವತವಾಗಿ' ತಮ್ಮ ಜೊತೆ ಉಳಿಸಿಕೊಳ್ಳಲು ಟ್ಯಾಟೂ ಮೊರೆ ಹೋಗಿದ್ದಾರೆ. ಹೌದು, ತಾವು ಹೊಸ ಟ್ಯಾಟೂ ಹಾಕಿಸಿಕೊಳ್ಳುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿರುವ ಅರ್ಜುನ್ ಇನ್ಸ್ಟಾ ರೀಲ್ನಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಸಹೋದರಿಯ ಹೆಸರಲ್ಲಿ ಟ್ಯಾಟೂ ಹಾಕಿಸಿಕೊಂಡು ಸೋದರತ್ವ ಮೆರೆದಿದ್ದಾರೆ.
ಅರ್ಜುನ್ 'ಎ' ಅಕ್ಷರವನ್ನು ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಇದು ಅವರ ಮತ್ತು ಅವರ ಸಹೋದರಿ ಅನ್ಶುಲಾ ಕಪೂರ್ ಅವರ ಹೆಸರಿನ ಆರಂಭದ ಅಕ್ಷರವಾಗಿದೆ. ನಾನು ಈ ಟ್ಯಾಟೂವನ್ನು ಅನ್ಶುಲಾ, ಸಂದೀಪ್, ಪಿಂಕಿ ಫರಾರ್ ಗೆ ಸಮರ್ಪಿಸುತ್ತಿದ್ದೇನೆ ಎಂದು ನಟ ಅರ್ಜುನ್ ಕಪೂರ್ ಬರೆದುಕೊಂಡಿದ್ದಾರೆ. She is the Ace up my sleeve @anshulakapoor ಮತ್ತು " ನಾನು A ಅಕ್ಷರದಿಂದ ಶಾಶ್ವತವಾಗಿ ನಿನ್ನನ್ನು ಜೊತೆಗಿರಿಸಿಕೊಳ್ಳುತ್ತೇನೆ ಎಂದು ಸಹೋದರ ಅರ್ಜುನ್ ಬರೆದಿದ್ದಾರೆ.
ಅರ್ಜುನ್ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಅಕ್ಕ ಅನ್ಶುಲಾ, "ಲವ್ ಯು" ಎಂದು ಬರೆದಿದ್ದಾರೆ. ಅರ್ಜುನ್ ಪೋಸ್ಟ್ ಅನ್ನು ಆಯುಷ್ಮಾನ್ ಖುರಾನಾ, ಟೈಗರ್ ಶ್ರಾಫ್, ಕೃತಿ ಕರಬಂದ, ಆನಂದ್ ಅಹುಜಾ ಮತ್ತು ಇನ್ನಿತರ ಬಾಲಿವುಡ್ ನಟ-ನಟಿಯರು ಲವ್ ಸಿಂಬಲ್ ನೀಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅರ್ಜುನ್ ಇತ್ತೀಚೆಗೆ ಡಿಜಿಟಲ್ ರೂಪದಲ್ಲಿ ಬಿಡುಗಡೆಯಾದ 'ಸರ್ದಾರ್ ಕಾ ಗ್ರ್ಯಾಂಡ್ಸನ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಪ್ರಸ್ತುತ ಭೂತ್ ಪೊಲೀಸ್ ಮತ್ತು ಏಕ್ ವಿಲನ್ ರಿಟರ್ನ್ಸ್ ಎಂಬ ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.