ETV Bharat / sitara

ಹಾಲಿವುಡ್ ನಿರ್ದೇಶಕ ಅಲೆನ್ ಪಾರ್ಕರ್ ನಿಧನಕ್ಕೆ ಸಂತಾಪ ಸೂಚಿಸಿದ ಬಾಲಿವುಡ್ ಗಣ್ಯರು - ಶೂಟ್ ದಿ ಮೂನ್ ಚಿತ್ರದ ನಿರ್ದೇಶಕ

ಬಹಳ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಖ್ಯಾತ ಹಾಲಿವುಡ್ ನಿರ್ದೇಶಕ ಅಲೆನ್ ಪಾರ್ಕರ್ ನಿನ್ನೆ ನಿಧನರಾಗಿದ್ದಾರೆ. ಹಾಲಿವುಡ್, ಬಾಲಿವುಡ್ ಚಿತ್ರರಂಗ ಸೇರಿದಂತೆ ಗಣ್ಯರು ಪಾರ್ಕರ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

alan parker death
ಅಲೆನ್ ಪಾರ್ಕರ್ ನಿಧನ
author img

By

Published : Aug 1, 2020, 3:07 PM IST

ಈ ವರ್ಷ ಚಿತ್ರರಂಗದ ಅನೇಕ ಗಣ್ಯರು ನಿಧನರಾಗಿರುವುದು ಬೇಸರದ ಸಂಗತಿಯಾಗಿದೆ. ನಿನ್ನೆ ಹಾಲಿವುಡ್​ ಚಿತ್ರರಂಗದ ಖ್ಯಾತ ನಿರ್ದೇಶಕ ಅಲೆನ್ ಪಾರ್ಕರ್ ಅವರನ್ನು ಕಳೆದುಕೊಂಡಿದೆ. ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಹಾಗೂ ಮಧುರ್ ಭಂಡಾರ್ಕರ್ ಅಲೆನ್ ಪಾರ್ಕರ್ ನಿಧನಕ್ಕೆ ತಮ್ಮ ಸೋಷಿಯಲ್ ಮೀಡಿಯಾ ಮೂಲಕ ಸಂತಾಪ ಸೂಚಿಸಿದ್ದಾರೆ.

  • Alan Parker 💔

    — Anurag Kashyap (@anuragkashyap72) July 31, 2020 ." class="align-text-top noRightClick twitterSection" data=" ."> .

ಅಲೆನ್ ಪಾರ್ಕರ್ ನಿಧನದ ಸುದ್ದಿಯನ್ನು ನಿನ್ನೆ ಬ್ರಿಟಿಷ್ ಫಿಲ್ಮ್ ಇನ್ಸ್ಟಿಟ್ಯೂಟ್​​ ದೃಢಪಡಿಸಿತ್ತು. ಅನೇಕ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ 76 ವರ್ಷದ ಅಲೆನ್ ಪಾರ್ಕರ್ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆ ಅನುರಾಗ್ ಕಶ್ಯಪ್, ಅಲೆನ್ ಪಾರ್ಕರ್ ನಿಧನದ ಸುದ್ದಿ ಕೇಳಿ ನಿಜಕ್ಕೂ ಆಘಾತವಾಯ್ತು ಎಂದು ಟ್ವೀಟ್ ಮಾಡಿದ್ದರು.

ನಂತರ ಮಧುರ್ ಭಂಡಾರ್ಕರ್ ಕೂಡಾ ಪಾರ್ಕರ್ ನಿಧನಕ್ಕೆ ಸಂತಾಪ ಸೂಚಿಸಿದ್ದರು. ಅಲೆನ್ ಪಾರ್ಕರ್ ಆತ್ಮಕ್ಕೆ ಶಾಂತಿ ದೊರೆಯಲಿ. ಸಿನಿಮಾ ಮಾಡುವವರಿಗೆ ನೀವು ದೊಡ್ಡ ಸ್ಪೂರ್ತಿ. ಚಿತ್ರರಂಗಕ್ಕೆ ಅದ್ಭುತ ಸಿನಿಮಾಗಳನ್ನು ನೀಡಿದ ನಿಮಗೆ ಧನ್ಯವಾಗಳು. ನಿಮ್ಮ ಸಿನಿಮಾ ಎಂದಿಗೂ ನಮ್ಮ ಮನಸ್ಸಿನಲ್ಲಿ ನೆನಪಿನಲ್ಲಿ ಉಳಿಯಲಿದೆ ಎಂದು ಮಧುರ್ ಭಂಡಾರ್ಕರ್ ಪೋಸ್ಟ್​​​​​​ನಲ್ಲಿ ಬರೆದುಕೊಂಡಿದ್ದಾರೆ.

  • RIP Alan Parker 💔💔 🙏 One of my favorite Filmmaker, you been such a great inspiration for filmmakers Globally, thank you for the wonderful films sir, Your films are gonna live forever. 🙏🎞📽🎥🎬 pic.twitter.com/5vtY0sgn53

    — Madhur Bhandarkar (@imbhandarkar) July 31, 2020 " class="align-text-top noRightClick twitterSection" data=" ">

ಮಿಡ್​​ನೈಟ್ ಎಕ್ಸ್​​​ಪ್ರೆಸ್​, ಶೂಟ್ ದಿ ಮೂನ್, ಏಂಜಲ್ ಹಾರ್ಟ್, ಲೈಫ್ ಆಫ್ ಡೇವಿಡ್​​ ಗೇಲ್​ ನಂತರ ಅನೇಕ ಸೂಪರ್ ಹಿಟ್ ಚಿತ್ರಗಳನ್ನು ಅಲೆನ್ ಪಾರ್ಕರ್ ನಿರ್ದೇಶಿಸಿದ್ದರು. ಮಿಡ್​​ನೈಟ್ ಎಕ್ಸ್​​​​ಪ್ರೆಸ್​​​​​ ಹಾಗೂ ಮಿಸ್ಸಿಸ್ಸಿಪ್ಪಿ ಬರ್ನಿಂಗ್ ಚಿತ್ರಗಳ ನಿರ್ದೇಶನಕ್ಕಾಗಿ ಆಸ್ಕರ್​​​ ಬೆಸ್ಟ್ ಡೈರೆಕ್ಟರ್​ ವಿಭಾಗಕ್ಕೆ ಅಲೆನ್ ಪಾರ್ಕರ್ ಹೆಸರು ಎರಡು ಬಾರಿ ನಾಮಿನೇಟ್ ಆಗಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.