ಮುಂಬೈ: ಕೊರೊನಾ ಸಾಂಕ್ರಾಮಿಕ ದಿನಗಳಲ್ಲಿನ ಅನುಭವವನ್ನು ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ಪುಸ್ತಕದ ರೂಪದಲ್ಲಿ ವ್ಯಕ್ತಪಡಿಸಿದ್ದು, ಶೀಘ್ರದಲ್ಲೇ ಪುಸ್ತಕ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ.
ಕೋವಿಡ್ ನಮ್ಮ ಜೀವನವನ್ನು ಬದಲಿಸಿದೆ. ಇದು ನಮ್ಮನ್ನು ಸ್ವಯಂ ಅನ್ವೇಷಣೆ, ಇಚ್ಛಾಶಕ್ತಿ, ಸಕಾರಾತ್ಮಕ ಚಿಂತನೆಯ ಬಲದ ಹಾದಿಯಲ್ಲಿ ತಂದಿಟ್ಟಿದೆ. ಲಾಕ್‌ಡೌನ್ ಸಂದರ್ಭದಲ್ಲಿ ನಾನು ಈ ಎಲ್ಲದರ ಬಗ್ಗೆ ಪುಸ್ತಕ ಬರೆಯಲು ಸಾಧ್ಯವಾಯಿತು ಎಂದು ತಮ್ಮ ಟ್ವಿಟರ್ ಮತ್ತು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬರೆದಿರುವ ಅನುಪಮ್ ಖೇರ್, ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ.
-
The #Pandemic has changed our lives forever. It has also put us on the path of self-discovery, willpower, small triumphs & the strength of positive thinking. I managed to write a book about all this in this #Lockdown. More about it very soon. Jai Ho! 🙏🤓 #NewBookAnnouncement pic.twitter.com/6RhfvEQ8lg
— Anupam Kher (@AnupamPKher) November 5, 2020 " class="align-text-top noRightClick twitterSection" data="
">The #Pandemic has changed our lives forever. It has also put us on the path of self-discovery, willpower, small triumphs & the strength of positive thinking. I managed to write a book about all this in this #Lockdown. More about it very soon. Jai Ho! 🙏🤓 #NewBookAnnouncement pic.twitter.com/6RhfvEQ8lg
— Anupam Kher (@AnupamPKher) November 5, 2020The #Pandemic has changed our lives forever. It has also put us on the path of self-discovery, willpower, small triumphs & the strength of positive thinking. I managed to write a book about all this in this #Lockdown. More about it very soon. Jai Ho! 🙏🤓 #NewBookAnnouncement pic.twitter.com/6RhfvEQ8lg
— Anupam Kher (@AnupamPKher) November 5, 2020
ತಮ್ಮ ತಾಯಿ ದುಲಾರಿ ಖೇರ್ ಹಾಗೂ ಸಹೋದರ ರಾಜು ಖೇರ್ ಸೇರಿದಂತೆ ತಮ್ಮ ಕುಟುಂಬ ಸೋಂಕಿಗೆ ಒಳಗಾಗಿದ್ದ ಸಮಯವನ್ನು ಒಳಗೊಂಡಂತೆ ಲಾಕ್‌ಡೌನ್ ಸಮಯದಲ್ಲಿನ ಕೆಲ ಅನುಭವಗಳ ಬಗ್ಗೆ ವಿಡಿಯೋದಲ್ಲಿ ಹೇಳಿದ್ದಾರೆ.
"ನಾನು ಕೋವಿಡ್ ಸಾಂಕ್ರಾಮಿಕ ಮತ್ತು ಲಾಕ್‌ಡೌನ್ ನಡುವೆ ನ್ಯೂಯಾರ್ಕ್ನಿಂದ ಮುಂಬೈಗೆ ಬಂದೆ. ಇಲ್ಲಿ ಅನೇಕ ಏರಿಳಿತಗಳು, ಹೋರಾಟಗಳು, ಜನರು ಒಟ್ಟಿಗೆ ಸೇರುವುದನ್ನು ನೋಡಿದೆ. ನನ್ನ ಕುಟುಂಬ ಅನಾರೋಗ್ಯಕ್ಕೆ ಒಳಗಾಯಿತು. ನಮ್ಮೆಲ್ಲರಿಗೂ ಅನೇಕ ವಿಷಯಗಳ ಬಗ್ಗೆ ಅನುಭವವಾಯಿತು. ಇವುಗಳ ಬಗ್ಗೆ ಎಂದಿಗೂ ಊಹಿಸಿರಲಿಲ್ಲ. ಆರಂಭದಲ್ಲಿ ನಾನು ಭಯಭೀತನಾಗಿದ್ದೆ. ಅಭದ್ರತೆಯ ಭಾವ ಹೊಂದಿದ್ದೆ. ಆದರೆ ಕ್ರಮೇಣ ಸಾಕಷ್ಟು ಒಳ್ಳೆಯ ಸಂಗತಿಗಳು ಅರಿವಿಗೆ ಬಂದವು" ಎಂದು ಖೇರ್ ತಿಳಿಸಿದ್ದಾರೆ.
ಕೇವಲ ನಕಾರಾತ್ಮಕ ವಿಚಾರಗಳನ್ನು ಬಿಟ್ಟು ಕೋವಿಡ್ನಿಂದ ಕಲಿತ ಸಕಾರಾತ್ಮಕ ವಿಷಯಗಳನ್ನು ನಾನು ಪುಸ್ತಕದ ಮೂಲಕ ತಿಳಿಸಲು ಬಯಸಿದ್ದೇನೆ ಎಂದು ಹೇಳಿದ್ದು, ಶೀಘ್ರದಲ್ಲೇ ಈ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಅನೇಕ ತಿಂಗಳ ಬಳಿಕ ಮತ್ತೆ ಅಮೆರಿಕಕ್ಕೆ ತೆರಳಿರುವ ಅನುಪಮ್ ಖೇರ್, 'ನ್ಯೂ ಆಮ್ಸ್ಟರ್‌ಡ್ಯಾಮ್' ಟಿವಿ ಸೀರಿಸ್ ಶೂಟಿಂಗ್ನಲ್ಲಿ ತೊಡಗಿದ್ದಾರೆ.