ETV Bharat / sitara

ಮಾ.14ಕ್ಕೆ 'RRR' ಸಿನಿಮಾದಿಂದ ಮತ್ತೊಂದು ಹಾಡು ರಿಲೀಸ್​ - ರಾಜಮೌಳಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ಆರ್​​ಆರ್​ಆರ್' ಸಿನಿಮಾ

ಎಸ್. ಎಸ್. ರಾಜಮೌಳಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ಆರ್​​ಆರ್​ಆರ್' ಸಿನಿಮಾಗಾಗಿ ಚಿತ್ರರಸಿಕರು ಕಾತರದಿಂದ ಎದುರು ನೋಡುತ್ತಿದ್ದಾರೆ. ಬಾಹುಬಲಿ ಸಿನಿಮಾ ಬಳಿಕ ರಾಜಮೌಳಿ ನಿರ್ದೇಶಿಸುತ್ತಿರುವ ಸಿನಿಮಾ ಇದಾಗಿದ್ದು, ಭಾರಿ ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಇದೀಗ ಮಾ.14ಕ್ಕೆ ಈ ಸಿನಿಮಾದ ಮತ್ತೊಂದು ಹಾಡು ಬಿಡುಗಡೆಯಾಗಲಿದೆ.

'RRR' is a movie directed by Rajamouli
ಮಾರ್ಚ್ 14ಕ್ಕೆ ಎತ್ತುವ ಜಂಡಾ ಸಾಂಗ್ ರಿಲೀಸ್
author img

By

Published : Mar 10, 2022, 7:54 PM IST

ಆರ್​ಆರ್​ಆರ್​ ಸಿನಿಮಾದಲ್ಲಿ ಜೂ. ಎನ್​​ಟಿಆರ್ ಮತ್ತು ರಾಮ್ ಚರಣ್ ಮುಖ್ಯಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಬಾಲಿವುಡ್ ನಟರಾದ ಅಜಯ್ ದೇವಗನ್, ಆಲಿಯಾ ಭಟ್ ಸೇರಿದಂತೆ ಹಲವು ಪ್ರಮುಖ ನಟರು ಸಹ ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಎಲ್ಲವೂ ಅಂದುಕೊಂಡಂತೆ ಆಗಿದ್ದರೇ ಇಷ್ಟರಲ್ಲಾಗಲೇ ತ್ರಿಬಲ್ ಆರ್ ಸಿನಿಮಾ ಬೆಳ್ಳಿಪರದೆಯ ಮೇಲೆ ರಾರಾಜಿಸಬೇಕಿತ್ತು. ಆದ್ರೆ ಕೊರೊನಾ ಕಾರಣದಿಂದ ರಿಲೀಸ್ ದಿನಾಂಕ ಪೋಸ್ಟ್ ಪೋನ್ ಮಾಡಲಾಗಿತ್ತು. ಹೀಗಾಗಿ ಎರಡು ಮುಹೂರ್ತ ಅನೌನ್ಸ್ ಮಾಡಿದ್ದ ರಾಜಮೌಳಿ, ಆ ಎರಡು ದಿನಗಳನ್ನು ಬಿಟ್ಟು ಮಾರ್ಚ್ 25ಕ್ಕೆ ಅದ್ಧೂರಿಯಾಗಿ ತೆರೆಗೆ ಬರೋದಾಗಿ ಅನೌನ್ಸ್ ಮಾಡಿದ್ದಾರೆ. ಹೊಸ ದಿನಾಂಕ ಘೋಷಣೆ ಬಳಿಕ ರಾಜಮೌಳಿ ಟೀಂ ಪ್ರಮೋಷನ್ ಬಗ್ಗೆ ಯಾವುದೇ ಗುಟ್ಟುಬಿಟ್ಟುಕೊಟ್ಟಿರಲಿಲ್ಲ. ಈಗ ಮತ್ತೆ ಪ್ರಮೋಷನ್ ಕಹಳೆ ಮೊಳಗಿಸಲು ಆರ್​ಆರ್​ಆರ್ ಟೀಂ ಸಜ್ಜಾಗಿದೆ.

'RRR' is a movie directed by Rajamouli
ಮಾರ್ಚ್ 14ಕ್ಕೆ ಎತ್ತುವ ಜಂಡಾ ಸಾಂಗ್ ರಿಲೀಸ್

ಮಾರ್ಚ್ 14ಕ್ಕೆ ಎತ್ತುವ ಜಂಡಾ ಸಾಂಗ್ ರಿಲೀಸ್: ಖ್ಯಾತ ಸಂಗೀತ ನಿರ್ದೇಶಕ ಎಂ.ಎಂ. ಕೀರವಾಣಿ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿರುವ ದೋಸ್ತಿ, ಹಳ್ಳಿನಾಟು ಹಾಡುಗಳು ಸಿನಿಮಾ ಮೇಲಿನ ಕ್ರೇಜ್ ಹೆಚ್ಚಿಸಿದ್ದವು. ಇದೀಗ ತ್ರಿಬಲ್ ಆರ್ ಅಂಗಳದಿಂದ ಮತ್ತೊಂದು ಹಾಡು ಬಿಡುಗಡೆ ಮಾಡಲು ಮುಹೂರ್ತ ಫಿಕ್ಸ್ ಆಗಿದೆ. ಮಾರ್ಚ್ 14ರಂದು ಎತ್ತುವ ಜಂಡಾ ಹಾಡು ರಿಲೀಸ್ ಮಾಡುವ ಮೂಲಕ ಆರ್​ಆರ್ ಆರ್​ ಸಿನಿಮಾದ ಪ್ರಚಾರಕ್ಕೆ ಮತ್ತೆ ರಾಜಮೌಳಿ ಕಹಳೆ ಮೊಳಗಿಸಲಿದ್ದಾರೆ.

ಇದನ್ನೂ ಓದಿ: ಜೈಪುರದಲ್ಲಿ ಜಂಗಲ್ ಸಫಾರಿ ಆನಂದಿಸಿದ ಮುನ್ನಾಭಾಯ್​, ನಟಿ ರವೀನಾ ಟಂಡನ್

ಡಿವಿವಿ ಎಂಟರ್‌ಟೈನ್ಮೆಂಟ್ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ಆರ್​ಆರ್​ಆರ್ ಸಿನಿಮಾಗೆ ವಿ. ವಿಜಯೇಂದ್ರ ಪ್ರಸಾದ್ ಕಥೆ ಮತ್ತು ಶ್ರೀಕರ್ ಪ್ರಸಾದ್ ಸಂಕಲನವಿದೆ. ಕನ್ನಡ, ತೆಲುಗು, ಮಲಯಾಳಂ, ತಮಿಳು ಹಾಗೂ ಹಿಂದಿಯಲ್ಲಿ ರಿಲೀಸ್ ಆಗಲಿರುವ 'ಆರ್‌ಆರ್‌ಆರ್‌' ಚಿತ್ರವು ಇಂಗ್ಲಿಷ್, ಪೋರ್ಚುಗೀಸ್, ಕೊರಿಯನ್, ಟರ್ಕಿಷ್, ಸ್ಪ್ಯಾನಿಶ್‌ ಭಾಷೆಗಳಿಗೆ ಡಬ್ ಆಗಲಿದೆ. ಬಿಗ್‌ ಬಜೆಟ್‌ನಲ್ಲಿ ತಯಾರಾದ ಈ ಚಿತ್ರಕ್ಕೆ ಎಂ.ಎಂ. ಕೀರವಾಣಿ ಸಂಗೀತ ಸಂಯೋಜಿಸಿದ್ದಾರೆ. ಮಾರ್ಚ್ 25ರಂದು ವಿಶ್ವದಾದ್ಯಂತ 'ಆರ್‌ಆರ್‌ಆರ್‌' ಬಿಡುಗಡೆಯಾಗಲಿದೆ. ಸ್ಯಾಂಡಲ್‌ವುಡ್‌ನಲ್ಲಿ ಸಿನಿಮಾ ವಿತರಣೆ ಹಾಗೂ ನಿರ್ಮಾಣದ ಪ್ರತಿಷ್ಠಿತ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ ಹೌಸ್ ಆರ್​ಆರ್​ಆರ್ ಸಿನಿಮಾವನ್ನು ಕರ್ನಾಟಕಲ್ಲಿ ಹಂಚಿಕೆ ಮಾಡಲಿದೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.