ETV Bharat / sitara

ಸುಶಾಂತ್​​​ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ನೀಡುವಂತೆ ಅಂಕಿತಾ, ಕೃತಿ ಸನನ್ ಮನವಿ - ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣ

ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಾಗಿನಿಂದ ಸ್ವಜನ ಪಕ್ಷಪಾತದ ಬಗ್ಗೆ ಮತ್ತೊಂದೆಡೆ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಬೇಕೆಂಬ ಒತ್ತಾಯ ಕೇಳಿಬರುತ್ತಿದೆ. ಅಂಕಿತಾ ಲೋಖಂಡೆ ಹಾಗೂ ಕೃತಿ ಸನನ್ ಇಬ್ಬರೂ ಇದೀಗ ಮತ್ತೆ ಈ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡುವಂತೆ ತಮ್ಮ ಇನ್ಸ್​ಟಾಗ್ರಾಮ್ ಮೂಲಕ ಮನವಿ ಮಾಡಿದ್ದಾರೆ.

Sushant Singh Rajput death case
ಸುಶಾಂತ್​​​ ಆತ್ಮಹತ್ಯೆ ಪ್ರಕರಣ
author img

By

Published : Aug 14, 2020, 1:26 PM IST

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡುವಂತೆ ಸುಶಾಂತ್ ಮಾಜಿ ಪ್ರೇಯಸಿ ಅಂಕಿತಾ ಲೋಖಂಡೆ ಹಾಗೂ ಸ್ನೇಹಿತೆ ಕೃತಿ ಸನನ್​​​ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ತಮ್ಮ ಇನ್ಸ್​ಟಾಗ್ರಾಮ್​​ನಲ್ಲಿ ವಿಡಿಯೋ ಸಂದೇಶವೊಂದನ್ನು ಹಂಚಿಕೊಂಡಿರುವ ಅಂಕಿತಾ ಲೋಖಂಡೆ, ಕೈಯಲ್ಲಿ Justice for Sushant #CBI for SSR ಎಂದು ಬರೆದಿರುವ ಪೇಪರ್ ಹಿಡಿದು ಸುಶಾಂತ್​​​ ಏಕೆ ಆ ನಿರ್ಧಾರ ಕೈಗೊಂಡರು, ಅವರ ಆತ್ಮಹತ್ಯೆ ಹಿಂದೆ ಯಾರ ಕೈವಾಡವಿದೆ ಎಂದು ಇಡೀ ದೇಶವೇ ತಿಳಿಯಲು ಬಯಸುತ್ತಿದೆ ಆದ್ದರಿಂದ ಸುಶಾಂತ್ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕೆಂದು ಮನವಿ ಮಾಡಿದ್ದಾರೆ.

Kriti Sanon
ಕೃತಿ ಸನನ್ ಇನ್ಸ್​​​ಟಾಗ್ರಾಮ್ ಸ್ಟೋರಿ

ಮತ್ತೊಂದೆಡೆ ಕೃತಿ ಸನನ್ ಕೂಡಾ ತಮ್ಮ ಇನ್ಸ್​ಟಾಗ್ರಾಮ್​​ ಸ್ಟೇಟಸ್​​​​ನಲ್ಲಿ ಯಾವುದೇ ರಾಜಕೀಯ ಒತ್ತಡಗಳಿಗೆ ಮಣಿಯದೆ ಈ ಪ್ರಕರಣವವನ್ನು ಸಿಬಿಐ ತನಿಖೆಗೆ ನೀಡಿ ಸುಶಾಂತ್ ಸಾವಿಗೆ ನ್ಯಾಯ ಒದಗಿಸಿಕೊಡಬೇಕೆಂದು ಮನವಿ ಮಾಡಿದ್ದಾರೆ. ಶೀಘ್ರವೇ ಸುಶಾಂತ್ ಸಾವಿಗೆ ನ್ಯಾಯ ದೊರೆಯಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಸುಶಾಂತ್ ಕುಟುಂಬ, ಸ್ನೇಹಿತರು, ಅಭಿಮಾನಿಗಳು ಹಾಗೂ ಆತನನ್ನು ಇಷ್ಟಪಡುವ ಎಲ್ಲರೂ ಇದನ್ನು ಬಯಸುತ್ತಿದ್ದಾರೆ ಎಂದು ಕೃತಿ ಸನನ್ ಮನವಿ ಮಾಡಿದ್ದಾರೆ.

ಇದಕ್ಕೂ ಮುನ್ನ ನಟಿ ಕಂಗನಾ ರಣಾವತ್ ಕೂಡಾ ಸುಶಾಂತ್ ಪ್ರಕರಣವನ್ನು ಸಿಬಿಐಗೆ ನೀಡಬೇಕೆಂದು ವಿಡಿಯೋ ಮೂಲಕ ಮನವಿ ಮಾಡಿದ್ದರು. ಮುಂಬೈನ ಬಾಂದ್ರಾ ಅಪಾರ್ಟ್​ಮೆಂಟ್​​​​ನಲ್ಲಿ ಜೂನ್ 14 ರಂದು ಸುಶಾಂತ್ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.