ETV Bharat / sitara

46 ವರ್ಷಗಳ ನಂತರ ಮತ್ತೆ ಅದೇ ಲೊಕೇಶನ್​​​ನಲ್ಲಿ ಬಿಗ್​ ಬಿ..! - May day movie shooting

'ದೀವಾರ್' ಸಿನಿಮಾ ಚಿತ್ರೀಕರಣವಾಗಿದ್ದ ಮುಂಬೈ ಹಳೆಯ ಕಟ್ಟಡವೊಂದಕ್ಕೆ ಅಮಿತಾಬ್ ಬಚ್ಚನ್ ಸುಮಾರು 46 ವರ್ಷಗಳ ನಂತರ ಮತ್ತೆ ಚಿತ್ರೀಕರಣಕ್ಕೆ ತೆರಳಿದ್ದಾರೆ. ಪ್ರತಿ ದಿನ ಮುಂಬೈನಲ್ಲೇ ನನ್ನ ಅನೇಕ ಸಿನಿಮಾಗಳ ಚಿತ್ರೀಕರಣ ಜರುಗಿದರೂ ಈ ಸ್ಥಳಕ್ಕೆ ಮತ್ತೆ ವಾಪಸ್ ಬರಲು 46 ವರ್ಷಗಳು ಬೇಕಾಯ್ತು ಎಂದು ಅಮಿತಾಬ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

Amitabh Bachchan
ಅಮಿತಾಬ್ ಬಚ್ಚನ್
author img

By

Published : Feb 12, 2021, 12:36 PM IST

ಒಂದು ಸಿನಿಮಾ ಎಂದರೆ ವಿವಿಧ ಲೊಕೇಶನ್​​​ಗಳಲ್ಲಿ ಚಿತ್ರೀಕರಣವಾಗುತ್ತದೆ. ಕಲಾವಿದರು ಕೂಡಾ ಚಿತ್ರೀಕರಣಕ್ಕಾಗಿ ವಿವಿಧ ಸ್ಥಳಗಳಿಗೆ ಹೋಗಿ ಬರುತ್ತಾರೆ. ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಸುಮಾರು 46 ವರ್ಷಗಳ ಹಿಂದೆ ಹೋಗಿದ್ದ ಲೊಕೇಶನ್​​​ಗೆ ಇದೀಗ ಮತ್ತೆ ಬಂದಿದ್ದಾರಂತೆ. ಆದರೆ ಅದು ವಿದೇಶವಾಗಲಿ, ಬೇರೆ ರಾಜ್ಯವಾಗಲಿ ಅಲ್ಲ. ಆ ಸ್ಥಳ ಮುಂಬೈನಲ್ಲೇ ಇದೆ.

ಇದನ್ನೂ ಓದಿ: ಸಲಗ ಟ್ಯಾಟೂ ಹಾಕಿಸಿದ ಫ್ಯಾನ್​​​ಗೆ ವಿಡಿಯೋ ಕಾಲ್​ ಮಾಡಿದ ದುನಿಯಾ ವಿಜಯ್​​​!

ಅಮಿತಾಬ್ ಬಚ್ಚನ್ ಈಗ 'ಮೇ ಡೇ' ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿ ಇದ್ದಾರೆ. ಚಿತ್ರವನ್ನು ಅಜಯ್ ದೇವಗನ್ ನಿರ್ದೇಶಿಸುತ್ತಿದ್ದು ರಕುಲ್ ಪ್ರೀತ್ ಸಿಂಗ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಮುಂಬೈಗೆ ಸೇರಿದ ಒಂದು ಹಳೆಯ ಕಟ್ಟಡದಲ್ಲಿ ಚಿತ್ರೀಕರಣ ಜರುಗುತ್ತಿದೆ. ಅಮಿತಾಬ್ ಬಚ್ಚನ್ ಅವರ ಬಹುತೇಕ ಸಿನಿಮಾಗಳು ಮುಂಬೈನಲ್ಲೇ ಪ್ರತಿದಿನ ಚಿತ್ರೀಕರಣವಾಗುತ್ತದೆ. ಆದರೆ ಮುಂಬೈನಲ್ಲೇ ಇರುವ ಆ ಸ್ಥಳಕ್ಕೆ ಅಮಿತಾಬ್ 46 ವರ್ಷಗಳ ನಂತರ ಭೇಟಿ ನೀಡಿದ್ದಾರಂತೆ. ಈ ಸ್ಥಳದ ಫೋಟೋಗಳನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಅಮಿತಾಬ್ ಬಚ್ಚನ್, "1975 ರಲ್ಲಿ ಈ ಕಟ್ಟಡದಲ್ಲಿ ನಡೆದ 'ದೀವಾರ್' ಸಿನಿಮಾ ಚಿತ್ರೀಕರಣದಲ್ಲಿ ನಾನು ಭಾಗವಹಿಸಿದ್ದೆ. ಅದೇ ಕಾರಿಡಾರ್, ಅದೇ ಸ್ಥಳ. ಮುಂಬೈನಲ್ಲೇ ಪ್ರತಿದಿನ ಎಷ್ಟೋ ಚಿತ್ರೀಕರಣ ನಡೆಯುತ್ತದೆ. ಆದರೆ ಈ ಸ್ಥಳಕ್ಕೆ ಬರಲು 46 ವರ್ಷಗಳು ಬೇಕಾಯ್ತು. 'ದೀವಾರ್'​​ ಚಿತ್ರದಲ್ಲಿ ರವಿವರ್ಮ ಪಾತ್ರ ಮಾಡಿದ್ದ ಶಶಿಕಪೂರ್, ತನ್ನ ಸಹೋದರ ವಿಜಯ್​​​ನನ್ನು (ಅಮಿತಾಬ್​​) ಶೂಟ್ ಮಾಡುವ ದೃಶ್ಯವನ್ನು ಈ ಸ್ಥಳದಲ್ಲಿ ಚಿತ್ರೀಕರಣ ಮಾಡಲಾಗಿತ್ತು. ಇದೀಗ ಆ ಸ್ಥಳದಲ್ಲಿ ಮೇ ಡೇ ಚಿತ್ರೀಕರಣ ನಡೆಯುತ್ತಿದೆ" ಎಂದು ಅಮಿತಾಬ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡು ಎರಡೂ ಸಿನಿಮಾಗಳ ಫೋಟೋವನ್ನು ಹಂಚಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.