ನವದೆಹಲಿ:ಅಕ್ರಮ ಹಣ ವರ್ಗಾವಣೆ ಕೇಸ್ನಲ್ಲಿ ಇಡಿ ವಿಚಾರಣೆಗೆ ಹಾಜರಾದ ಬಳಿಕ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಸಾಮಾಜಿಕ ಜಾಲತಾಣದಲ್ಲಿ ರಹಸ್ಯ ಅಡಿಬರಹದ ಜೊತೆ ಆಲ್ ಸ್ಮೈಲ್ಸ್ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದಾರೆ.
ಇನ್ಸ್ಟಾಗ್ರಾಮ್ ಖಾತೆಯಲ್ಲಿ ಎರಡು ಫೋಟೋಗಳನ್ನು ಈ ಬಾಲಿವುಡ್ ನಟಿ ಹಂಚಿಕೊಂಡಿದ್ದಾರೆ. ಮೊದಲನೇ ಫೋಟೋದಲ್ಲಿ ಕ್ಯಾಮರಾಗೆ ಪೋಸ್ ನೀಡುತ್ತಿರುವುದು ಮತ್ತು ಇನ್ನೊಂದರಲ್ಲಿ ಅವರು ತಮ್ಮ ಮಿಲಿಯನ್ ಡಾಲರ್ ಸ್ಮೈಲ್ ಅನ್ನು ಹೊರಹಾಕಿದ್ದಾರೆ.
ಪ್ರಸ್ತುತ ಅಕ್ಟೋಬರ್ 24 ರವರೆಗೆ ಇಡಿ ರಿಮಾಂಡ್ನಲ್ಲಿರುವ ಉದ್ಯಮಿಗಳಿಗೆ 200 ಕೋಟಿ ರೂ. ವಂಚಿಸಿದ ಆರೋಪಿ ಸುಕೇಶ್ ಚಂದ್ರಶೇಖರ್ ಜೊತೆ ಸಂಪರ್ಕದಲ್ಲಿ ಇದ್ದರು ಎಂಬ ಕಾರಣಕ್ಕೆ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಸಹ ಇಡಿ ವಿಚಾರಣೆ ಎದುರಿಸುತ್ತಿದ್ದಾರೆ. ಇಡಿ ವಿಚಾರಣೆ ಎದುರಿಸಿ ಬಂದ ಬಳಿಕ ಈ ಪೋಸ್ಟ್ ಹಂಚಿಕೊಂಡಿದ್ದಾರೆ.
- " class="align-text-top noRightClick twitterSection" data="
">
ಜಾಕ್ವೆಲಿನ್ಗೆ ಕೋಟಿಗಟ್ಟಲೆ ಬೆಲೆ ಬಾಳುವ ಗಿಫ್ಟ್ ನೀಡಿರುವುದಾಗಿ ಜಾಕ್ವೆಲಿನ್ ಮುಂದೆಯೇ ಸುಕೇಶ್ ಇಡಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ. ಇಡಿ ಕಸ್ಟಡಿಯಲ್ಲಿರುವ ಸುಕೇಶ್ ಚಂದ್ರಶೇಖರ್, ಲೀನಾ ಮರಿಯಾ ಪಾಲ್ ಅವರೊಂದಿಗೂ ಜಾಕ್ವೆಲಿನ್ ಮುಖಾಮುಖಿಯಾಗಿದ್ದಾರೆ.
ಜಾಕ್ವೆಲಿನ್ ಸೆಪ್ಟೆಂಬರ್ 25, ಅಕ್ಟೋಬರ್ 15, 16, ಮತ್ತು 18 ರಂದು ನಾಲ್ಕು ಸಮನ್ಸ್ಗಳನ್ನು ತಿರಸ್ಕರಿಸಿ ಕೊನೆಗೂ ಬುಧವಾರ ತನಿಖೆಗೆ ಹಾಜರಾಗಿದ್ದರು. EDಗೆ ಸೀಮಿತ ಸಮಯವಿದೆ ಮತ್ತು ವಂಚಕ ಸುಕೇಶ್ ಮತ್ತು ಲೀನಾ ಅವರ ಬಂಧನ ಅಕ್ಟೋಬರ್ 24 ರಂದು ಕೊನೆಗೊಳ್ಳಲಿದೆ ಎಂದು ಕಠಿಣ ಸಂದೇಶ ಕಳುಹಿಸಿದ ನಂತರ ಜಾಕ್ವೆಲಿನ್ ವಿಚಾರಣೆಗೆ ಹಾಜರಾದರು ಎಂದು ಮೂಲಗಳು ತಿಳಿಸಿವೆ.