ಹೈದರಾಬಾದ್: ಜಾನ್ ಅಬ್ರಹಾಂ, ದಿಶಾ ಪಟಾನಿ, ಅರ್ಜುನ್ ಕಪೂರ್ ಮತ್ತು ತಾರಾ ಸುತಾರಿಯಾ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿರುವ 'ಏಕ್ ವಿಲನ್ ರಿಟರ್ನ್ಸ್' ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಿದೆ. ಈ ವಿಷಯವನ್ನು ದಿಶಾ ಮತ್ತು ಚಿತ್ರದ ನಿರ್ಮಾಪಕರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
- " class="align-text-top noRightClick twitterSection" data="
">
ದಿಶಾ ಇನ್ಸ್ಟಾಗ್ರಾಮ್ನಲ್ಲಿ ಫೋಟೋವೊಂದನ್ನು ಪೋಸ್ಟ್ ಮಾಡಿದ್ದಾರೆ. ಚಿತ್ರದಲ್ಲಿ ಅವರು ಕ್ಯಾಮೆರಾಗೆ ಹಿಂಭಾಗದಿಂದ ಪೋಸ್ ಕೊಟ್ಟಿದ್ದು, ಕಪ್ಪು ಜಾಕೆಟ್ ಮೇಲೆ "ಏಕ್ ವಿಲನ್ ರಿಟರ್ನ್ಸ್" ಎಂದು ಬರೆಯಲಾಗಿದೆ. ಈ ಫೋಟೋಗೆ ದಿಶಾ "ಇಲ್ಲಿ ನಾವು #ekvillainreturns @mohitsuri alaBalajimotionpictures ಗೆ ಹೋಗುತ್ತೇವೆ" ಎಂದು ಶೀರ್ಷಿಕೆ ನೀಡಿದ್ದಾರೆ. ಇದಕ್ಕೆ ಟೈಗರ್ ಶ್ರಾಫ್ "ಆಲ್ ದಿ ಬೆಸ್ಟ್ ವಿಲನ್" ಎಂದು ಹೇಳುವ ಮೂಲಕ ಹಾರೈಸಿದ್ದಾರೆ.
ಟೈಗರ್ ಸಹೋದರಿ ಕೃಷ್ಣ ಶ್ರಾಫ್ ಕೂಡ ಹೀಗೆ ಪ್ರತಿಕ್ರಿಯಿಸಿದ್ದಾರೆ: "ವೂಹೂ! ಆಲ್ ದಿ ಬೆಸ್ಟ್, ಮೈ ಡಿಯರ್ಸ್, ನೀವು ಇದನ್ನು ಯಶಸ್ವಿಯಾಗಿ ಮಾಡಿ" ಎಂದು ಹಾರೈಸಿದ್ದಾರೆ.
ಓದಿ:ಮನುಷ್ಯರಿಗಿಂತ ಪ್ರಾಣಿಗಳ ಜೊತೆ ಹೆಚ್ಚು ಹಾಯಾಗಿರುತ್ತೇನೆ: ನಟಿ ಅದಾ ಶರ್ಮಾ
ಕಳೆದ ವರ್ಷದ ಆರಂಭದಲ್ಲಿ, ಏಕ್ ವಿಲನ್ ರಿಟರ್ನ್ಸ್ ಚಿತ್ರಕ್ಕಾಗಿ ಆದಿತ್ಯ ರಾಯ್ ಕಪೂರ್, ತಾರಾ ಸುತಾರಿಯಾ ಎದುರು ಜೋಡಿಯಾಗಿದ್ದಾರೆ ಎಂದು ಮಾಧ್ಯಮ ವರದಿಗಳು ಮಾಡಿದ್ದವು. ಆದರೆ, ಈಗ ಆಶಿಕಿ 2 ನಟನ ಬದಲಿಗೆ ಇಶಾಕ್ಜಾದೆ ನಟ ಅರ್ಜುನ್ ಕಪೂರ್ರನ್ನು ನೇಮಿಸಿಕೊಳ್ಳಲಾಗಿದೆ.
-
And it begins...😈#EkVillainReturns@ektarkapoor #BhushanKumar @mohit11481 #ShobhaKapoor @RuchikaaKapoor @arjunk26 @DishPatani @TaraSutaria @amul_mohan @balajimotionpic @TSeries #BalajiMotionPictures pic.twitter.com/WXsHuWxEht
— John Abraham (@TheJohnAbraham) March 1, 2021 " class="align-text-top noRightClick twitterSection" data="
">And it begins...😈#EkVillainReturns@ektarkapoor #BhushanKumar @mohit11481 #ShobhaKapoor @RuchikaaKapoor @arjunk26 @DishPatani @TaraSutaria @amul_mohan @balajimotionpic @TSeries #BalajiMotionPictures pic.twitter.com/WXsHuWxEht
— John Abraham (@TheJohnAbraham) March 1, 2021And it begins...😈#EkVillainReturns@ektarkapoor #BhushanKumar @mohit11481 #ShobhaKapoor @RuchikaaKapoor @arjunk26 @DishPatani @TaraSutaria @amul_mohan @balajimotionpic @TSeries #BalajiMotionPictures pic.twitter.com/WXsHuWxEht
— John Abraham (@TheJohnAbraham) March 1, 2021
ಸಿದ್ಧಾರ್ಥ್ ಮಲ್ಹೋತ್ರಾ, ಶ್ರದ್ಧಾ ಕಪೂರ್ ಮತ್ತು ರಿತೇಶ ದೇಶಮುಖ ಅಭಿನಯದ 2014ರ ಏಕ್ ವಿಲಿಯನ್ ಚಿತ್ರದ ಮುಂದುವರೆದ ಭಾಗವಾಗಿದೆ. ಮೋಹಿತ್ ಸೂರಿ ನಿರ್ದೇಶನದ ಈ ಚಿತ್ರ ಮುಂದಿನ ವರ್ಷ ಫೆಬ್ರವರಿ 11 ರಂದು ಬಿಡುಗಡೆಯಾಗಲಿದೆ.