ETV Bharat / sitara

ರಣಬೀರ್ ಕಪೂರ್ ಜೊತೆ ಮದುವೆ ; ಇದು ಯಾರ ವ್ಯವಹಾರವೂ ಅಲ್ಲ ಎಂದು ಆಲಿಯಾ ಭಟ್! - ಬಾಲಿವುಡ್​ ನಟಿ ಆಲಿಯಾ ಭಟ್ ಸಿನಿ ಜರ್ನಿ

ನಟ ರಣಬೀರ್ ಕಪೂರ್ ಅವರೊಂದಿಗೆ ರಿಲೇಶನ್​ಶಿಪ್​​ ಇಟ್ಟುಕೊಂಡಿರುವ ನಟಿ ಆಲಿಯಾ ಭಟ್​ ತಮ್ಮ ಖಾಸಗಿ ಜೀವನ ಸೇರಿದಂತೆ ಸಿನಿ ಜರ್ನಿ ಬಗ್ಗೆ ಮಾತನಾಡಿದ್ದಾರೆ. ಅವರ ನಟನೆಯ ಗಂಗೂಬಾಯಿ ಕಥಿಯಾವಾಡಿ ಬಿಡುಗಡೆಯಾದ ಮೊದಲ ವಾರಾಂತ್ಯದಲ್ಲಿಯೇ 38.5 ಕೋಟಿ ಗಳಿಸಿ ದಾಖಲೆ ಬರೆದಿದೆ..

Alia Bhatt on marriage with Ranbir Kapoor: 'It's nobody's business'
ಆಲಿಯಾ ಭಟ್
author img

By

Published : Feb 28, 2022, 7:14 PM IST

ಹೊಸದಿಲ್ಲಿ : ಗಂಗೂಬಾಯಿ ಕಥಿಯಾವಾಡಿ ಚಿತ್ರದ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಬಾಲಿವುಡ್​ ನಟಿ ಆಲಿಯಾ ಭಟ್ ತಮ್ಮ ಖಾಸಗಿ ಜೀವನ ಬಗ್ಗೆ ಮಾತನಾಡುವ ಮೂಲಕ ಸುದ್ದಿಯಾಗಿದ್ದಾರೆ.

ಸಂದರ್ಶನವೊಂದರಲ್ಲಿ ಸೆಲೆಬ್ರಿಟಿಗಳ ಜೀವನದ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಬಯಸುವ ಜನರ ಬಗ್ಗೆ ಅವರು ಮಾತನಾಡುತ್ತಾ, ನನ್ನ ಜೀವನದಲ್ಲಿ ಸಾರ್ವಜನಿಕ ಹಿತಾಸಕ್ತಿಯನ್ನು ನೆನೆಪಿಸಿಕೊಂಡರೆ ನನಗೆ ಉಸಿರುಗಟ್ಟುವಂತಾಗುತ್ತದೆ. ನಾನು ಯಾವಾಗ ಮದುವೆಯಾಗುತ್ತೇನೆ ಎಂಬ ವಿವರಗಳನ್ನು ನೀಡಲು ನನ್ನಿಂದ ಸಾಧ್ಯವಿಲ್ಲ ಎಂದು ತಮ್ಮ ಮದುವೆ ಪ್ರಸ್ತಾಪದ ಬಗ್ಗೆ ತಾವೇ ಗುಟ್ಟು ಬಿಟ್ಟುಕೊಟ್ಟರು.

ಸಾರ್ವಜನಿಕ ವ್ಯಕ್ತಿಯಾಗಿರುವುದು ಸುಲಭವಲ್ಲ. ನೀವು ಸಾರ್ವಜನಿಕ ವ್ಯಕ್ತಿಯಾಗಲು ಬಯಸಿದರೆ ನಿಮ್ಮ ಜೀವನವು ಸಹ ಸಾರ್ವಜನಿಕವಾಗುತ್ತದೆ. ಅದಕ್ಕಾಗಿಯೇ ನಾನಷ್ಟೇ ಅಲ್ಲ, ಪ್ರತಿಯೊಬ್ಬ ವ್ಯಕ್ತಿ ತನ್ನ ವೈಯಕ್ತಿಕ ಜೀವನವನ್ನು ರಕ್ಷಿಸಲು ಪ್ರಯತ್ನಿಸುತ್ತಿರುತ್ತಾನೆ. ಹಾಗೆಯೇ, ನಾನು ಸಹ ನನ್ನ ಖಾಸಗಿ ಜೀವನವನ್ನು ಕಾಪಾಡಲು ಇಷ್ಟಪಡುತ್ತೇನೆ ಎಂದಿದ್ದಾರೆ.

ನಾನು ಯಾವಾಗ ಮದುವೆಯಾಗುತ್ತೇನೆ ಎಂಬ ವಿವರಗಳನ್ನು ನೀಡಲು ಆಗುವುದಿಲ್ಲ. ಊಟದಿಂದ ಹಿಡಿದು ನನ್ನ ಖಾಸಗಿ ಜೀವನದ ಬಗ್ಗೆ ಜನರ ಬಾಯಲ್ಲಿ ಸಾಕಷ್ಟು ಊಹಾಪೋಹಗಳು ಹರಿದಾಡುತ್ತಿವೆ. ಇದನ್ನೇ ದೊಡ್ಡದಾಗಿ ಮಾಡಲು ನನ್ನಿಂದ ಸಾಧ್ಯವಿಲ್ಲ ಎಂದು ತಮ್ಮ ಹಾಗೂ ತಮ್ಮ ಬಾಯ್​ಫ್ರೆಂಡ್​ ನಡುವಿನ ಸಂಬಂಧವನ್ನು ಇದೇ ವೇದಿಕೆಯಲ್ಲಿ ಮಗದೊಮ್ಮೆ ಬಹಿರಂಗಪಡಿಸಿದರು.

ನಾನು ಓರ್ವ ನಿರ್ಮಾಪಕರ ಮಗಳಾಗಿರಬಹುದು. ಆದರೆ, ನಾನೀಗ ಓರ್ವ ನಟಿಯಾಗಿ ಹೊರಹೊಮ್ಮಿದ್ದೇನೆ ಎಂದು ಹೇಳಲು ಖುಷಿಯಾಗುತ್ತದೆ. ಆರಂಭದಲ್ಲಿದ್ದ ಅಳುಕು ಈಗ ಇಲ್ಲ. ನನ್ನ ತಲೆಯ ಮೇಲೆ ಈಗ ಯಾವುದೇ ಒತ್ತಡವಿಲ್ಲ. ಪ್ರತಿ ಸಿನಿಮಾ ವಿಭಿನ್ನತೆಯಿಂದ ಕೂಡಿರಬೇಕು ಅನ್ನೋದು ನನ್ನ ಆಸೆ ಎಂದು ತಾವು ಬೆಳೆದು ಬಂದ ಹಾದಿ ಮತ್ತು ತಮ್ಮ ಮುಂದಿನ ಗುರಿ ಬಗ್ಗೆ ಹೇಳಿಕೊಂಡರು.

ಭಾರತೀಯ ಚಿತ್ರರಂಗದ ಬಹುಬೇಡಿಕೆಯ ನಟಿಯಾಗಿ ಆಲಿಯಾ ಅವರ ಕೈಯಲ್ಲಿ ಸದ್ಯ ಹಲವು ಚಿತ್ರಗಳಿವೆ. ಇತ್ತೀಚೆಗೆ ಬಿಡುಗಡೆಯಾದ ಗಂಗೂಬಾಯಿ ಅವರ ಜೀವನಚರಿತ್ರೆಯಾಧಾರಿತ ಗಂಗೂಬಾಯಿ ಕಥಿಯಾವಾಡಿ ಚಿತ್ರವು ಬಾಕ್ಸ್​ ಆಫೀಸ್‌ನಲ್ಲಿ ಭಾರಿ ಸದ್ದು ಮಾಡುತ್ತಿದೆ. ಬಿಡುಗಡೆಯಾದ ಮೊದಲ ವಾರಾಂತ್ಯದಲ್ಲಿಯೇ ₹38.5 ಕೋಟಿ ಗಳಿಸಿ ದಾಖಲೆ ಬರೆದಿದೆ.

2012ರಲ್ಲಿ ಕರಣ್ ಜೋಹರ್ ನಿರ್ದೇಶನದ ಸ್ಟೂಡೆಂಟ್ ಆಫ್ ದಿ ಇಯರ್‌ನೊಂದಿಗೆ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ಆಲಿಯಾ, ಚಿತ್ರತ್ರರಂಗಕ್ಕೆ ಬಂದು ಒಂದು ದಶಕವನ್ನು ಪೂರ್ಣಗೊಳಿಸಲು ಸಿದ್ಧರಾಗಿದ್ದಾರೆ. ಹೈವೇ, ಹಮ್ಟೀ ಶರ್ಮಾ ಕೀ ದುಲ್ಹನಿಯಾ, ಉಡ್ತಾ ಪಂಜಾಬ್, ಡಿಯರ್ ಜಿಂದ್ಗೀ, ಭದ್ರಿನಾಥ್ ಕೀ ದುಲ್ಹನಿಯಾ, ರಾಜಿ, ಗಲ್ಲಿ ಬಾಯ್ ಸೇರಿದಂತೆ ಹಲವು ಹಿಟ್​ ಚಿತ್ರಗಳನ್ನು ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.