ETV Bharat / sitara

'ಬಾಯ್​ಫ್ರೆಂಡ್'​​ ಕ್ಲಿಕ್ಕಿಸಿದ ಫೋಟೋ ಶೇರ್​ ಮಾಡಿದ ಆಲಿಯಾ ಭಟ್​..

author img

By

Published : Jan 7, 2022, 5:16 PM IST

ತನ್ನ ಪ್ರಿಯತಮ ರಣಬೀರ್ ಕಪೂರ್ ತೆಗೆದ ಫೋಟೋಗಳನ್ನು ನಟಿ ಆಲಿಯಾ ಭಟ್ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್​ ಮಾಡಿ ಅಭಿಮಾನಿಗಳು ಫಿದಾ ಆಗುವಂತೆ ಮಾಡಿದ್ದಾರೆ..

Alia Bhatt is 'casually flexing' boyfriend Ranbir Kapoor's photography skills
'ಬಾಯ್​ಫ್ರೆಂಡ್'​​ ಕ್ಲಿಕ್ಕಿಸಿದ ಫೋಟೋ ಶೇರ್​ ಮಾಡಿದ ಆಲಿಯಾ ಭಟ್

ಬಾಲಿವುಡ್​ನ ಖ್ಯಾತ ತಾರೆಗಳಾದ ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ಪ್ರೀತಿಸುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ರಾಜಸ್ಥಾನದ ರಣಥಂಬೋರ್ ರಾಷ್ಟ್ರೀಯ ಉದ್ಯಾನವನದಲ್ಲಿ ತಮ್ಮ ಹೊಸ ವರ್ಷವನ್ನು ಆಚರಿಸಿದೆ. ರಜೆಯನ್ನ ಎಂಜಾಯ್ ಮಾಡಿದ ಬಳಿಕ ಈ ಜೋಡಿ ಮರಳಿದೆ. ಈ ವೇಳೆ ತಮ್ಮ 'ಬಾಯ್​ಫ್ರೆಂಡ್'​​ ಕ್ಲಿಕ್ಕಿಸಿದ ಫೋಟೋಗಳನ್ನು ಆಲಿಯಾ ಭಟ್ ಹಂಚಿಕೊಂಡಿದ್ದಾರೆ.

alia bhatt ranbir kapoor
ರಣಬೀರ್ ಕಪೂರ್ ಕ್ಲಿಕ್ಕಿಸಿದ ಫೋಟೋ

ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಕೆಲವು ಫೋಟೋಗಳನ್ನು ಪೋಸ್ಟ್ ಮಾಡಿರುವ ಆಲಿಯಾ, 'ನನ್ನ ಬಾಯ್​ಫ್ರೆಂಡ್​ನ ಛಾಯಾಗ್ರಹಣ ಕೌಶಲ್ಯವನ್ನು ಮತ್ತಷ್ಟು ಉತ್ತಮಗೊಳಿಸುತ್ತಿರುವೆ' ಎನ್ನುವ ಅರ್ಥದಲ್ಲಿ ಕ್ಯಾಪ್ಶನ್​ ನೀಡಿದ್ದಾರೆ.

alia bhatt ranbir kapoor
ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್

ನಾಲ್ಕು ವರ್ಷಗಳ ಹಿಂದೆಯೇ ಆಲಿಯಾ-ರಣಬೀರ್​ ನಟನೆಯ ಬಹುನಿರೀಕ್ಷಿತ 'ಬ್ರಹ್ಮಾಸ್ತ್ರ' ಚಿತ್ರದ ಶೂಟಿಂಗ್​ ಆರಂಭವಾಗಿದೆ. ಕಳೆದ ಮೂರು ವರ್ಷಗಳಿಂದ ಇವರಿಬ್ಬರು ಡೇಟಿಂಗ್​ನಲ್ಲಿದ್ದಾರೆ. ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಇವರಿಬ್ಬರು ಜೊತೆಯಾಗಿಯೇ ಕಾಣಿಸಿಕೊಳ್ಳುತ್ತಾರೆ.

ಇದನ್ನೂ ಓದಿ: ''R'' ನಿಮ್ಮ ಲಕ್ಕಿ ಅಕ್ಷರವೇ? ಮಾಧ್ಯಮದವರ ಪ್ರಶ್ನೆಗೆ ನಾಚಿ ನೀರಾದ ಆಲಿಯಾ ಭಟ್

ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಬ್ರಹ್ಮಾಸ್ತ್ರ ಸಿನಿಮಾದಲ್ಲಿ ಅಮಿತಾಭ್ ಬಚ್ಚನ್, ಅಕ್ಕಿನೇನಿ ನಾಗಾರ್ಜುನ ಮತ್ತು ಮೌನಿ ರಾಯ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

alia bhatt ranbir kapoor
ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್

ರಾಜಮೌಳಿ ನಿರ್ದೇಶನದ ಪ್ಯಾನ್​ ಇಂಡಿಯಾ 'ಆರ್​ಆರ್​ಆರ್​' ಸಿನಿಮಾದಲ್ಲಿ ಆಲಿಯಾ ಭಟ್​ ನಟಿಸಿದ್ದು, ಚಿತ್ರದ ಪ್ರಚಾರದ ವೇಳೆ 'R' ಅಕ್ಷರಕ್ಕೂ ರಣಬೀರ್​ಗೂ ಲಿಂಕ್​ಮಾಡಿ ಕೇಳಿದ ಪ್ರಶ್ನೆಗಳಿಗೆ ಆಲಿಯಾ ನಾಚಿಕೊಳ್ಳುತ್ತಾ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದುಂಟು.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.