ETV Bharat / sitara

100 ಕೋಟಿ ಕ್ಲಬ್​ಗೆ ಸೇರಿದ ಗಂಗೂಬಾಯಿ ಕಥಿಯಾವಾಡಿ.. ರೊಮೇನಿಯಾದಲ್ಲಿ ಬರ್ಗರ್​ ತಿನ್ನುತ್ತಲೇ ಧನ್ಯವಾದ ಅರ್ಪಿಸಿದ ಆಲಿಯಾ

ಭಾರತೀಯ ಚಲನಚಿತ್ರ ವಿಮರ್ಶಕ ಮತ್ತು ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ್ ಬುಧವಾರ ಈ ಚಿತ್ರದ ಕಲೆಕ್ಷನ್​ ಬಗ್ಗೆ ಹೇಳಿದ್ದಾರೆ. ಸಾಂಕ್ರಾಮಿಕ ರೋಗದ ನಂತರ 100 ಕೋಟಿ ಮಾರ್ಕ್ ಅನ್ನು ಸಾಧಿಸಿದ ನಾಲ್ಕನೇ ಹಿಂದಿ ಚಿತ್ರ ಎಂದು ಟ್ವೀಟ್​ ಮೂಲಕ ಮಾಹಿತಿ ನೀಡಿದರು..

gangubai kathiawadi 100cr club  gangubai kathiawadi box office  alia bhatt reacts to gangubai kathiawadi box office  alia bhatt latest news  ರೋಮಾನಿಯಾದಲ್ಲಿ ಬರ್ಗರ್​ ತಿನ್ನತ್ತಲೇ ಧನ್ಯವಾದ ಅರ್ಪಿಸಿದ ಆಲಿಯಾ  100 ಕೋಟಿ ಕ್ಲಬ್​ಗೆ ಸೇರಿದ ಗಂಗೂಬಾಯಿ ಕಥಿಯಾವಾಡಿ ಚಿತ್ರ  ಗಂಗೂಬಾಯಿ ಕಥಿಯಾವಾಡಿ ಚಿತ್ರದ ಕಲೆಕ್ಷನ್​ ಗಂಗೂಬಾಯಿ ಕಥಿಯಾವಾಡಿ ಚಿತ್ರದ ಸುದ್ದಿ
ರೋಮಾನಿಯಾದಲ್ಲಿ ಬರ್ಗರ್​ ತಿನ್ನತ್ತಲೇ ಧನ್ಯವಾದ ಅರ್ಪಿಸಿದ ಆಲಿಯಾ
author img

By

Published : Mar 11, 2022, 2:21 PM IST

Updated : Mar 11, 2022, 2:31 PM IST

ಮುಂಬೈ (ಮಹಾರಾಷ್ಟ್ರ): ಆಲಿಯಾ ಭಟ್ ಅಭಿನಯದ ಗಂಗೂಬಾಯಿ ಕಥಿಯಾವಾಡಿ ಚಿತ್ರ ಇತ್ತೀಚೆಗಷ್ಟೇ ಬಿಡುಗಡೆಯಾಗಿ ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ 100 ಕೋಟಿ ರೂಪಾಯಿಗಳ ಕ್ಲಬ್‌ ಸೇರಿದೆ.

ಸಂಜಯ್ ಲೀಲಾ ಬನ್ಸಾಲಿ ನಿರ್ಮಿಸಿದ ಈ ಚಿತ್ರ ಫೆಬ್ರವರಿ 25 ರಂದು ಬಿಡುಗಡೆಯಾಗಿತ್ತು. ಕೊರೊನಾ-19 ಸಾಂಕ್ರಾಮಿಕ ಪ್ರಾರಂಭವಾದ ಮೇಲೆ ಬಾಲಿವುಡ್‌ನಲ್ಲಿ 3ನೇ ಅತಿದೊಡ್ಡ ಓಪನಿಂಗ್​ ಪಡೆದ ಚಿತ್ರ ಎಂಬ ಹೆಗ್ಗಳಿಕೆಯೂ ಈ ಚಿತ್ರಕ್ಕೆ ಸಿಕ್ಕಿದೆ.

ಗುರುವಾರ ತನ್ನ ಇನ್‌ಸ್ಟಾಗ್ರಾಮ್ ಹ್ಯಾಂಡಲ್​ನಲ್ಲಿ ಆಲಿಯಾ, ಪ್ರೇಕ್ಷಕರ ಪ್ರೀತಿಗೆ ಧನ್ಯವಾದ ಹೇಳಿದ್ದಾರೆ. ನಟಿ ತನ್ನ ರೊಮೇನಿಯಾ ಪ್ರವಾಸದ ಥ್ರೋಬ್ಯಾಕ್ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಆಲಿಯಾ ಸಸ್ಯಾಹಾರಿ ಬರ್ಗರ್ ತಿನ್ನುತ್ತಾ ಆನಂದಿಸುತ್ತಿರುವುದನ್ನು ಕಾಣಬಹುದು.

ಓದಿ: ಮಾನವನಿಗೆ ಪ್ರಾಣಿಗಳ ಅಂಗಗಳ ಕಸಿ ಮಾಡುವ ತಂತ್ರಜ್ಞಾನ ಸಂಪೂರ್ಣ ಯಶಸ್ವಿಯಾಗುವುದು ಸಾಧ್ಯವೇ?

ಭಾರತೀಯ ಚಲನಚಿತ್ರ ವಿಮರ್ಶಕ ಮತ್ತು ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ್ ಬುಧವಾರ ಈ ಚಿತ್ರದ ಕಲೆಕ್ಷನ್​ ಬಗ್ಗೆ ಹೇಳಿದ್ದಾರೆ. ಸಾಂಕ್ರಾಮಿಕ ರೋಗದ ನಂತರ 100 ಕೋಟಿ ಮಾರ್ಕ್ ಅನ್ನು ಸಾಧಿಸಿದ ನಾಲ್ಕನೇ ಹಿಂದಿ ಚಿತ್ರ ಎಂದು ಟ್ವೀಟ್​ ಮೂಲಕ ಮಾಹಿತಿ ನೀಡಿದರು.

ಗಂಗೂಬಾಯಿ ಕಥಿಯಾವಾಡಿ ಚಿತ್ರದ ಕಥೆ ಮಾರಾಟವಾದ ಹುಡುಗಿಯ ಸುತ್ತ ಸುತ್ತುತ್ತದೆ. ಅವಳು ಹೇಗೆ ಭೂಗತ ಮತ್ತು ಕಾಮಾಟಿಪುರದ ರೆಡ್-ಲೈಟ್ ಏರಿಯಾಗೆ ಬರುತ್ತಾಳೆ. ಅಲ್ಲಿ ಆಕೆ ಹೇಗೆ ಪ್ರಸಿದ್ಧಿಯಾಗುತ್ತಾಳೆ ಎಂಬುದು ಈ ಚಿತ್ರದ ಕಥೆ. ಇದರಲ್ಲಿ ಸೂಪರ್ ಸ್ಟಾರ್ ಅಜಯ್ ದೇವಗನ್ ಕೂಡ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾರೆ.

Last Updated : Mar 11, 2022, 2:31 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.