ನವದೆಹಲಿ: ನಟಿ ಆಲಿಯಾ ಭಟ್ ತಮ್ಮ ತಾತನ ಹುಟ್ಟುಹಬ್ಬವನ್ನು ಆಚರಿಸುವ ಮೂಲಕ ಮತ್ತೆ ಸದ್ದು ಮಾಡುತ್ತಿದ್ದಾರೆ. ಆಲಿಯಾ ಭಟ್ ಅವರ ತಾತನಿಗೆ ಈಗ 93 ವರ್ಷ. ಆಲಿಯಾ ಹಾಗೂ ಕುಟುಂಬದವರು ಅವರ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಿದ್ದಾರೆ.
"ನನ್ನ ಸ್ಫೂರ್ತಿಗೆ 93 ವರ್ಷದ ಶುಭಾಶಯ. ಲವ್ ಯು ಗ್ಯಾಂಪ್ಸ್" ಎಂದು ಬರೆದುಕೊಂಡಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಫೋಟೋ ಶೇರ್ ಮಾಡಿರುವ ಆಲಿಯಾ ತನ್ನ ಅಜ್ಜ, ತಾಯಿ ಸೋನಿ ರಜ್ದಾನ್ ಮತ್ತು ಸಹೋದರಿ ಶಾಹೀನ್ ಭಟ್ ಅವರೊಂದಿಗೆ ಪೋಸ್ ನೀಡುತ್ತಿರುವುದನ್ನು ನಾವು ನೋಡಬಹುದು.
ಆಲಿಯಾ ಬಾಯ್ಫ್ರೆಂಡ್, ನಟ ರಣಬೀರ್ ಕಪೂರ್ ಜೊತೆಗೆ ಅವರ ತಾಯಿ ನೀತು ಕಪೂರ್ ಮತ್ತು ಸಹೋದರಿ ರಿಧಿಮಾ ಕಪೂರ್ ಸಾಹ್ನಿ ಕೂಡ ಈ ಸಂದರ್ಭದಲ್ಲಿ ಭಾಗಿಯಾಗಿದ್ದಾರೆ.
ಇದನ್ನು ಓದಿ: ಪಾಪರಾಜಿ ಕ್ಯಾಮರಾ ಕಣ್ಣಿಗೆ ಬಿದ್ದ ಬಾಲಿವುಡ್ ತಾರೆಯರು
ಇನ್ನು ನಟಿ ಆಲಿಯಾ ಅವರು ಸಂಜಯ್ ಲೀಲಾ ಭನ್ಸಾಲಿ ಅವರ 'ಗಂಗುಬಾಯ್ದ ಖತಿಯಾವಾಡಿ', ರಾಮ್ ಚರಣ್ ಮತ್ತು ಜೂನಿಯರ್ ಎನ್ಟಿಆರ್ ಅಭಿನಯದ 'ಆರ್.ಆರ್.ಆರ್' ಹಾಗೂ ರಣಬೀರ್ ಕಪೂರ್-ಅಮಿತಾಬ್ ಬಚ್ಚನ್ ಅಭಿನಯದ 'ಬ್ರಹ್ಮಾಸ್ತ್ರ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ.