ಮುಂಬೈ: ಬಾಲಿವುಟ್ ನಟಿ ಆಲಿಯಾ ಭಟ್ 28 ನೇ ವರ್ಷಕ್ಕೆ ಕಾಲಿಟ್ಟಿದ್ದು, ತಮ್ಮ ಹುಟ್ಟುಹಬ್ಬವನ್ನು ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸಂಭ್ರಮದಿಂದ ಆಚರಿಸಿಕೊಂಡಿದ್ದಾರೆ.
ನಿರ್ಮಾಪಕ ಕರಣ್ ಜೋಹರ್ ಅವರು ಬಾಂದ್ರಾದಲ್ಲಿರುವ ನಿವಾಸದಲ್ಲಿ ಆಲಿಯಾ ಹುಟ್ಟುಹಬ್ಬಕ್ಕಾಗಿ ವಿಶೇಷವಾಗಿ ಪಾರ್ಟಿ ಆಯೋಜಿಸಿದ್ದರು. ಇನ್ನು ಬರ್ತ್ ಡೇ ಪಾರ್ಟಿಗೆ ನಟಿ ಮಲೈಕಾ ಅರೋರಾ, ಅರ್ಜುನ್ ಕಪೂರ್, ಆಲಿಯಾ ಸಹೋದರಿ ಶಾಹೀನ್ ಭಟ್ ಮತ್ತು ನಿರ್ದೇಶಕ ಶಕುನ್ ಬಾತ್ರಾ, ದೀಪಿಕಾ ಪಡುಕೋಣೆ, ಆದಿತ್ಯಾ ರಾಯ್ ಸೇರಿದಂತೆ ಬಾಲಿವುಡ್ ನಟ-ನಟಿಯರ ದಂಡೆ ಹರಿದು ಬಂದಿತ್ತು.
ಸದ್ಯ ಆಲಿಯಾ ಭಟ್ ಸಂಜಯ್ ಲೀಲಾ ಭಂಸಾಲಿ ನಿರ್ದೇಶಿಸುತ್ತಿರುವ ಗಂಗುಬಾಯಿ ಕಥಿಯಾವಾಡಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಈ ಸಿನಿಮಾ ತನ್ನ ಟ್ರೈಲರ್ ಮೂಲಕ ಸಾಕಷ್ಟು ನಿರೀಕ್ಷೆಯನ್ನು ಹುಟ್ಟಿಸಿದೆ. ಚಿತ್ರ ಜುಲೈ 30 ರಂದು ಬಿಡುಗಡೆಯಾಗಲಿದೆ.