ETV Bharat / sitara

ಬರೋಬ್ಬರಿ 4 ವರ್ಷದ ಬಳಿಕ ಬ್ರಹ್ಮಾಸ್ತ್ರ ಚಿತ್ರೀಕರಣ ಪೂರ್ಣಗೊಳಿಸಿದ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ - Ayan mukerjee

ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಬ್ರಹ್ಮಾಸ್ತ್ರ ಚಿತ್ರದ ಶೂಟಿಂಗ್ ಮುಗಿಸಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಚಿತ್ರ ನಿರ್ಮಾಣವಾಗುತ್ತಿತ್ತು. ಈಗ ಚಿತ್ರದ ಶೂಟಿಂಗ್ ಕಾಶಿಯಲ್ಲಿ ಮುಗಿದಿದೆ. ಸೆಪ್ಟಂಬರ್​ 9 ರಂದು ಬ್ರಹ್ಮಾಸ್ತ್ರ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ದೇಶಕ ಅಯನ್ ಬರೆದುಕೊಂಡಿದ್ದಾರೆ. ಚಿತ್ರೀಕರಣದ ಕೆಲವು ಸ್ಪಾಟ್​ ವಿಡಿಯೋ ಮತ್ತು ಫೋಟೋಗಳು ಜಾಲತಾಣದಲ್ಲಿ ವೈರಲ್​ ಆಗುತ್ತಿವೆ.

Alia bhatt and Ranbir kapoor visited kashi temple after completing brahmastra
ಬ್ರಹ್ಮಾಸ್ತ್ರ ಚಿತ್ರೀಕರಣ ಪೂರ್ಣಗೊಳಿಸಿದ ಕ್ಷಣ
author img

By

Published : Mar 29, 2022, 5:35 PM IST

Updated : Mar 29, 2022, 5:43 PM IST

ಹೈದರಾಬಾದ್ : ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಜೋಡಿಯಾಗಿ ನಟಿಸಿರುವ ಮೊದಲ ಚಿತ್ರ 'ಬ್ರಹ್ಮಾಸ್ತ್ರ' ಬರೋಬ್ಬರಿ ನಾಲ್ಕು ವರ್ಷಗಳ ನಂತರ ಪೂರ್ಣಗೊಂಡಿತು. ಇತ್ತೀಚೆಗಷ್ಟೇ ಚಿತ್ರದ ಮೊದಲ ಭಾಗದ ಕೊನೆಯ ಶೆಡ್ಯೂಲ್​ ಅನ್ನು ಕಾಶಿಯಲ್ಲಿ (ವಾರಣಾಸಿ) ಚಿತ್ರೀಕರಣ ಮಾಡುವ ಮೂಲಕ ಪೂರ್ಣಗೊಳಿಸಲಾಯಿತು. ಚಿತ್ರದ ನಿರ್ದೇಶಕ ಅಯಾನ್ ಮುಖರ್ಜಿ, ನಟಿ ಆಲಿಯಾ ಭಟ್ ಮತ್ತು ನಟ ರಣಬೀರ್ ಸಿಂಗ್ ಶೂಟಿಂಗ್ ಮುಗಿಸಿ ಕಾಶಿ ದೇವಸ್ಥಾನಕ್ಕೆ ಭೇಟಿ ನೀಡಿದರು.

Alia bhatt and Ranbir kapoor visited kashi temple after completing brahmastra
ಬ್ರಹ್ಮಾಸ್ತ್ರ ಚಿತ್ರೀಕರಣ ಪೂರ್ಣಗೊಳಿಸಿದ ಕ್ಷಣ

ಭೇಟಿ ಮಾಡಿರುವ ಸಾಕ್ಷಿಯಾಗಿ ಮೂವರೂ ತಮ್ಮ ತಮ್ಮ ಇನ್‌ಸ್ಟಾಗ್ರಾಮ್ ಖಾತೆಗಳಲ್ಲಿ ಅಲ್ಲಿಯ ಸುಂದರ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಕಳೆದ ಐದು ವರ್ಷದ ಹಿಂದೆ ಅಂದ್ರೆ 2018ರಲ್ಲಿ ಚಿತ್ರದ ಚಿತ್ರೀಕರಣವನ್ನು ಆರಂಭ ಮಾಡಲಾಗಿತ್ತು. ಇತ್ತೀಚೆಗೆ ವಾರಣಾಸಿಯ ಬೀದಿ ಮತ್ತು ನದಿಯ ದಡದಲ್ಲಿ ಚಿತ್ರದ ಚಿತ್ರೀಕರಣವನ್ನು ನಡೆಸುವ ಮೂಲಕ ಪೂರ್ಣಗೊಳಿಸಲಾಯಿತು. ನಿರ್ಮಾಪಕ ಕರಣ್ ಜೋಹರ್ 'ಬ್ರಹ್ಮಾಸ್ತ್ರ'ಕ್ಕೆ ಹಣ ಹೂಡಿದ್ದು, ಚಿತ್ರದ ಬಿಡುಗಡೆಗಾಗಿ ಕಾಯುತ್ತಿದ್ದಾರೆ.

ಚಿತ್ರದ ಶೂಟಿಂಗ್ ಮುಗಿದ ನಂತರ ಅಯಾನ್, ರಣಬೀರ್ ಮತ್ತು ಆಲಿಯಾ ಕಾಶಿಯ ದೇವಸ್ಥಾನಕ್ಕೆ ಭೇಟಿ ನೀಡಿದರು. ಭೇಟಿ ಬಳಿಕ ತಮ್ಮ ತಮ್ಮ ಇನ್‌ಸ್ಟಾಗ್ರಾಮ್ ಖಾತೆಗಳಲ್ಲಿ ಅಲ್ಲಿಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಚಿತ್ರೀಕರಣವು ಯಶಸ್ವಿಯಾಗಿ ಪೂರ್ಣಗೊಂಡಿದ್ದ ಹಿನ್ನೆಲೆ ಸೆಲೆಬ್ರಿಟಿಗಳಿಗೆ ಹೂವಿನ ಹಾರವನ್ನು ಹಾಕಿದ್ದನ್ನು ಫೋಟೋದಲ್ಲಿ ಗಮನಿಸಹಬುದು. ಒಂದು ಫೋಟೋದಲ್ಲಿ ವಧು-ವರರಂತೆ ಕಾಣುವ ರಣಬೀರ್ ಕೈಜೋಡಿಸಿ ನಿಂತಿದ್ದರೆ, ಆಲಿಯಾ-ಅಯಾನ್ ನಗುತ್ತಿರುವುದನ್ನು ಕಾಣಬಹುದು.

ಈ ಫೋಟೋ ಹಂಚಿಕೊಂಡಿಕೊಂಡಿರುವ ನಿರ್ದೇಶಕ ಅಯನ್, ಅಂತಿಮವಾಗಿ ಚಿತ್ರದ ಶೂಟಿಂಗ್ ಪೂರ್ಣಗೊಂಡಿದೆ. ನಾಲ್ಕು ವರ್ಷಗಳ ನಂತರ ನಾವು ಅಂತಿಮವಾಗಿ ನಮ್ಮ ಕೊನೆಯ ದೃಶ್ಯವನ್ನು ಚಿತ್ರೀಕರಿಸಿದ್ದೇವೆ. ಶಿವನ ಚೈತನ್ಯ ತುಂಬಿದ ವಾರಣಾಸಿಯಲ್ಲಿ ಶಿವನ ಭಾಗ ಒಂದರ ಚಿತ್ರೀಕರಣವನ್ನು ನಾವು ಪೂರ್ಣಗೊಳಿಸಿದ್ದೇವೆ. ಅತ್ಯಂತ ಪವಿತ್ರವಾದ ಕಾಶಿ ವಿಶ್ವನಾಥ ದೇವಾಲಯದಲ್ಲಿ ಚಿತ್ರೀಕರಣ ಪೂರ್ಣಗೊಂಡಿದ್ದು ಖುಷಿ ತಂದಿದೆ. ದೇವರ ಆಶೀರ್ವಾದಿಂದ ಸೆ. 9ರಂದು ಬ್ರಹ್ಮಾಸ್ತ್ರ ಬಿಡುಗಡೆಯಾಗಲಿದೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಆಸ್ಕರ್ ಪ್ರಶಸ್ತಿ ಇತಿಹಾಸದಲ್ಲಿ ಕಪ್ಪು ಚುಕ್ಕೆಯಾದ ಕಪಾಳಮೋಕ್ಷ ಘಟನೆ: ಕಂಗನಾ ಪ್ರತಿಕ್ರಿಯೆ ಹೀಗಿದೆ..

ವಾರಣಾಸಿಯ ಕೆಲವು ಫೋಟೋಗಳನ್ನು ಹಂಚಿಕೊಂಡಿರುವ ಆಲಿಯಾ ಭಟ್​, 'ನಾವು 2018 ರಲ್ಲಿ ಈ ಚಿತ್ರದ ಚಿತ್ರೀಕರಣವನ್ನು ಪ್ರಾರಂಭಿಸಿದ್ದೆವು. ಈಗ ಬ್ರಹ್ಮಾಸ್ತ್ರ ಮೊದಲ ಭಾಗದ ಚಿತ್ರೀಕರಣ ಪೂರ್ಣಗೊಂಡಿದೆ. ಥಿಯೇಟರ್‌ಗಳಲ್ಲಿ ನಾವು-ನೀವು ಮತ್ತೆ ಭೇಟಿ ಆಗೋಣ ಎಂದು ಚಿತ್ರದ ಬಿಡುಗಡೆಯ ದಿನಾಂಕವನ್ನು ಬರೆದುಕೊಂಡಿದ್ದಾರೆ. 'ಬ್ರಹ್ಮಾಸ್ತ್ರ'ದಲ್ಲಿ ಬಾಲಿವುಡ್​ ಸೂಪರ್​​ ಸ್ಟಾರ್​​ ಅಮಿತಾಬ್ ಬಚ್ಚನ್, ನಾಗಾರ್ಜುನ ಮತ್ತು ಮೌನಿ ರಾಯ್ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Last Updated : Mar 29, 2022, 5:43 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.