ETV Bharat / sitara

ಮತ್ತೆ ಹಾಲಿವುಡ್​ಗೆ ಹಾರಿದ ಅಲಿ ಫಜಲ್‌.. ಗೆರಾರ್ಡ್ ಬಟ್ಲರ್ ಜೊತೆ 'ಕಂದಹಾರ್' ಸಿನಿಮಾ - ಡೆತ್​ ಆನ್​​ ದಿ ನೈಲ್

ಈಗಾಗಲೇ 'ಫ್ಯೂರಿಯಸ್ 7', 'ವಿಕ್ಟೋರಿಯಾ ಮತ್ತು ಅಬ್ದುಲ್' ಹಾಗೂ 'ಡೆತ್​ ಆನ್​​ ದಿ ನೈಲ್' ಎಂಬ ಹಾಲಿವುಡ್​ ಸಿನಿಮಾಗಳಲ್ಲಿ ನಟಿಸಿರುವ ಬಾಲಿವುಡ್​ ನಟ ಅಲಿ ಫಜಲ್​ ಇದೀಗ ಮತ್ತೊಂದು ಅಂತಾರಾಷ್ಟ್ರೀಯ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ali fazal
ಅಲಿ ಫಜಲ್‌
author img

By

Published : Dec 3, 2021, 4:41 PM IST

ಮುಂಬೈ (ಮಹಾರಾಷ್ಟ್ರ): ಬಾಲಿವುಡ್​ ನಟ ಅಲಿ ಫಜಲ್‌ ಅವರು ಮತ್ತೊಂದು ಹಾಲಿವುಡ್​ ಸಿನಿಮಾದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಜನಪ್ರಿಯ ಸ್ಕಾಟಿಷ್ ನಟ ಗೆರಾರ್ಡ್ ಬಟ್ಲರ್ ಜೊತೆ 'ಕಂದಹಾರ್' ಎಂಬ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಈಗಾಗಲೇ 'ಏಂಜೆಲ್ ಹ್ಯಾಸ್ ಫಾಲನ್' ಮತ್ತು 'ಫೆಲೋನ್' ಸೇರಿದಂತೆ ಹಿಟ್​ ಸಿನಿಮಾಗಳನ್ನು ನೀಡಿದ್ದ ರಿಕ್ ರೋಮನ್ ವಾ ಅವರು 'ಕಂದಹಾರ್' ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಅಫ್ಘಾನಿಸ್ತಾನದ ಡಿಫೆನ್ಸ್ ಇಂಟೆಲಿಜೆನ್ಸ್ ಏಜೆನ್ಸಿಯಲ್ಲಿ ಮಾಜಿ ಮಿಲಿಟರಿ ಗುಪ್ತಚರ ಅಧಿಕಾರಿ ಮಿಚೆಲ್ ಲಾಫೋರ್ಚುನ್ ಅವರ ಅನುಭವಗಳನ್ನು ಆಧರಿಸಿದ ಕಥೆ ಇದಾಗಿದೆ. ಶೀಘ್ರದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದೆ.

ali fazal
ಅಲಿ ಫಜಲ್‌

ಇದನ್ನೂ ಓದಿ: 'ಸೆಕ್ಸ್‌ & ಫುಡ್ ಈ ಎರಡರಲ್ಲಿ ನಿಮಗಿಷ್ಟ ಯಾವುದು?' ನಟಿ ಸಮಂತಾ ಉತ್ತರಿಸಿದ ಹಳೆ ವಿಡಿಯೋ ವೈರಲ್‌

ನಟ ಅಲಿ ಫಜಲ್‌ ಅವರು ಈಗಾಗಲೇ 'ಫ್ಯೂರಿಯಸ್ 7', 'ವಿಕ್ಟೋರಿಯಾ ಮತ್ತು ಅಬ್ದುಲ್' ಹಾಗೂ 'ಡೆತ್​ ಆನ್​​ ದಿ ನೈಲ್' ಎಂಬ ಹಾಲಿವುಡ್​ ಸಿನಿಮಾಗಳಲ್ಲಿ ನಟಿಸಿದ್ದಾರೆ. ​​'ಡೆತ್​ ಆನ್​​ ದಿ ನೈಲ್' ಸಿನಿಮಾವು ಮುಂದಿನ ವರ್ಷ ಫೆಬ್ರವರಿ 11ರಂದು ತೆರೆ ಕಾಣಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.