ಹೈದರಾಬಾದ್ : ಕೋವಿಡ್ ಸೋಂಕಿನಿಂದ ಆಸ್ಪತ್ರೆ ಸೇರಿದ್ದ ಬಾಲಿವುಡ್ ನಟ ಅಕ್ಷಯ್ ಕುಮಾರ್ ಚೇತರಿಸಿಕೊಂಡಿರುವುದಾಗಿ ಅವರ ಪತ್ನಿ ಟ್ವಿಂಕಲ್ ಖನ್ನಾ ತಿಳಿಸಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಫೋಟೋ ಒಂದನ್ನು ಹಂಚಿಕೊಂಡಿರುವ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ.
- " class="align-text-top noRightClick twitterSection" data="
">
ಕೋವಿಡ್ ದೃಢಪಟ್ಟ ಬಳಿಕ ಏಪ್ರಿಲ್ 4 ರಂದು ಅಕ್ಷಯ್ ಕುಮಾರ್ ಆಸ್ಪತ್ರೆಗೆ ದಾಖಲಾಗಿದ್ದರು. ಮುಂಜಾಗೃತ ಕ್ರಮವಾಗಿ ಆಸ್ಪತ್ರೆಗೆ ದಾಖಲಾಗಿರುವುದಾಗಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳಿಗೆ ತಿಳಿಸಿದ್ದರು.
- — Akshay Kumar (@akshaykumar) April 5, 2021 " class="align-text-top noRightClick twitterSection" data="
— Akshay Kumar (@akshaykumar) April 5, 2021
">— Akshay Kumar (@akshaykumar) April 5, 2021
ಕೋವಿಡ್ ಸೋಂಕು ದೃಢಪಡುವ ಮೊದಲು ರಾಮ ಸೇತು ಚಿತ್ರದ ಚಿತ್ರೀಕರಣದಲ್ಲಿ ಅಕ್ಷಯ್ ತೊಡಗಿಸಿಕೊಂಡಿದ್ದರು. ಅಕ್ಷಯ್ ಜೊತೆ ಚಿತ್ರೀಕರಣದಲ್ಲಿ ತೊಡಗಿದ್ದ 45 ಮಂದಿ ಕೂಡ ಕೋವಿಡ್ಗೆ ತುತ್ತಾಗಿದ್ದರು. ಹಾಗಾಗಿ, ಸಿನಿಮಾ ಚಿತ್ರೀಕರಣವನ್ನು ಮುಂದೂಡಲಾಗಿತ್ತು.
ಓದಿ : ನಮ್ಮ ತಂದೆ ಇಲ್ಲ ಎಂಬ ಕೊರಗು ನನ್ನಲ್ಲಿ ಬಂದಿಲ್ಲ : ಪುನೀತ್ ರಾಜ್‍ಕುಮಾರ್
ರಾಮ ಸೇತು ಹೊರತುಪಡಿಸಿ ಅಕ್ಷಯ್ ಕುಮಾರ್ ಅವರ ಇತರ ಚಿತ್ರಗಳಾದ ಹೌಸ್ಫುಲ್ 5, ಬಚ್ಚನ್ ಪಾಂಡೆ, ಅತ್ರಂಗಿ ರೆ, ಬೆಲ್ ಬಾಟಮ್ ಮತ್ತು ಸೂರ್ಯವಂಶಿ ಚಿತ್ರ ಶೂಟಿಂಗ್ ಪೂರ್ತಿಗೊಳಿಸಿದೆ.