ETV Bharat / sitara

'ಪ್ಯಾರ್ ತೋ ಹೋನಾ ಹಿ ಥಾ'... ವಿವಾಹ ವಾರ್ಷಿಕೋತ್ಸವಕ್ಕೆ ಕಾಜೋಲ್‌ಗೆ ಅಜಯ್ ದೇವಗನ್ ಸ್ಪೆಷಲ್​ ವಿಶ್​ - ಅಜಯ್ ದೇವಗನ್ ಇನ್​​ಸ್ಟಾಗ್ರಾಮ್ ಪೋಸ್ಟ್​

ಪ್ರೀತಿ ಆಗಲೇ ಬೇಕಿತ್ತು, ಪ್ರೀತಿ ಎಂದಿಗೂ ಇದೆ ಎಂದು ಹೇಳುತ್ತಾ 1999ರಲ್ಲಿ ತೆರೆಕಂಡ 'ಪ್ಯಾರ್ ತೋ ಹೋನಾ ಹಿ ಥಾ' ಸಿನಿಮಾವನ್ನು ಮತ್ತೆ ನೆನಪಿಸಿ ಪತ್ನಿ ಕಾಜೋಲ್‌ಗೆ ಅಜಯ್ ದೇವಗನ್ ಸ್ಪೆಷಲ್​ ಆಗಿ ವಿಶ್​ ಮಾಡಿದ್ದಾರೆ.

ಕಾಜೋಲ್‌ ಅಜಯ್ ದೇವಗನ್ ವಿವಾಹ ವಾರ್ಷಿಕೋತ್ಸವ
ಕಾಜೋಲ್‌ ಅಜಯ್ ದೇವಗನ್ ವಿವಾಹ ವಾರ್ಷಿಕೋತ್ಸವ
author img

By

Published : Feb 24, 2022, 8:59 PM IST

ಬಾಲಿವುಡ್​ ಸ್ಟಾರ್​ ದಂಪತಿಯಾದ ನಟಿ ಕಾಜೋಲ್‌ ಹಾಗೂ ನಟ ಅಜಯ್ ದೇವಗನ್ ವೈವಾಹಿಕ ಜೀವನಕ್ಕೆ ಕಾಲಿಟ್ಟು ಇಂದಿಗೆ 23 ವರ್ಷಗಳು ಸಂದಿವೆ. ವಿವಾಹ ವಾರ್ಷಿಕೋತ್ಸವದಂದು ಪತ್ನಿ ಕಾಜೋಲ್​ಗೆ ಅಜಯ್​ ವಿಶೇಷ ರೀತಿಯಲ್ಲಿ ಶುಭಕೋರಿದ್ದಾರೆ.

"1999 - ಪ್ಯಾರ್ ತೋ ಹೋನಾ ಹಿ ಥಾ (ಪ್ರೀತಿ ಆಗಲೇ ಬೇಕಿತ್ತು). 2022 - ಪ್ರೀತಿ ಎಂದಿಗೂ ಇದೆ. ವಾರ್ಷಿಕೋತ್ಸವದ ಶುಭಾಶಯಗಳು ಕಾಜೋಲ್​" ಎಂದು ತಮ್ಮ ಇನ್​​ಸ್ಟಾಗ್ರಾಮ್​ ಖಾತೆಯಲ್ಲಿ ಅಜಯ್ ದೇವಗನ್ ಬರೆದುಕೊಂಡಿದ್ದಾರೆ. ಕಾಫಿ ವಿತ್ ಕರಣ್‌ ಸೆಲೆಬ್ರಿಟಿ ಚಾಟ್ ಶೋನಲ್ಲಿ "ಅವಳು ಇನ್ನೂ ನನ್ನೊಂದಿಗಿದ್ದಾಳೆ ಎಂದು ನನಗೆ ಆಶ್ಚರ್ಯವಾಗುತ್ತದೆ" ಎಂದು ಹೇಳಿರುವ ವಿಡಿಯೋ ತುಣುಕನ್ನ ಶೇರ್ ಮಾಡಿದ್ದಾರೆ.

'ಪ್ಯಾರ್ ತೋ ಹೋನಾ ಹಿ ಥಾ' ಎಂಬ ಸಾಲು ಹಾಗೂ 1999 ಇಸವಿ - ಇವು ಕಾಜೋಲ್​ ಹಾಗೂ ಅಜಯ್​ ಜೀವನದಲ್ಲಿ ಬಹಳ ಮುಖ್ಯವಾಗಿದೆ. ಏಕೆಂದರೆ 'ಪ್ಯಾರ್ ತೋ ಹೋನಾ ಹಿ ಥಾ' - ಇದು 1999ರಲ್ಲಿ ತೆರೆಕಂಡ ಸಿನಿಮಾ ಹೆಸರು. ಈ ಚಿತ್ರದಲ್ಲಿ ಕಾಜೋಲ್​ ಹಾಗೂ ಅಜಯ್​ ರೊಮ್ಯಾನ್ಸ್​ ಮಾಡಿದ್ದರು. ಅಷ್ಟರಲ್ಲಾಗಲೇ ಪ್ರೇಮದ ಬಲೆಯಲ್ಲಿ ಬಿದ್ದಿದ್ದ ಅವರು ಅದೇ ವರ್ಷ ಮದುವೆಯಾಗಿದ್ದರು.

ಕಾಜೋಲ್‌ ಅಜಯ್ ದೇವಗನ್ ವಿವಾಹ ವಾರ್ಷಿಕೋತ್ಸವ
'ಪ್ಯಾರ್ ತೋ ಹೋನಾ ಹಿ ಥಾ' ಸಿನಿಮಾ ದೃಶ್ಯದ ಫೋಟೋ

ಇದನ್ನೂ ಓದಿ: ಮುಂದೆ ತಪ್ಪು ಮಾಡೋಲ್ಲ ಅಂದಿದ್ದ ರಚಿತಾ ರಾಮ್‌: ಲಿಪ್​​​​​​ಲಾಕ್ ಸೀನ್​​ ನೋಡಿ ದಂಗಾದ ಫ್ಯಾನ್ಸ್

ಇದೇ ಸಿನಿಮಾ ಟೈಟಲ್​ ಇಟ್ಟುಕೊಂಡು ಈ ವರ್ಷ ರೀಲ್​ ಮಾತ್ರವಲ್ಲದೇ ರಿಯಲ್​ನಲ್ಲೂ ಸಂಗಾತಿಯಾಗಿರುವ ಕಾಜೋಲ್​ಗೆ ಅಜಯ್​ ವಿಶ್​ ಮಾಡಿದ್ದಾರೆ. ಸದ್ಯ ಈ ದಂಪತಿಗೆ ಓರ್ವ ಮಗಳು ಹಾಗೂ ಒಬ್ಬ ಮಗನಿದ್ದಾನೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.