ETV Bharat / sitara

2021- ಕಾನೂನಾತ್ಮಕ ಸಮಸ್ಯೆಗೆ ಸಿಲುಕಿದ ಬಾಲಿವುಡ್​ ನಟ-ನಟಿಯರಿವರು! - ಜಾಕ್ವೆಲಿನ್​ ಫರ್ನಾಂಡೀಸ್​

ಬಾಲಿವುಡ್​ನಲ್ಲಿ ಎಷ್ಟು ಬೇಗ ಹೆಸರು ಗಳಿಸುತ್ತಾರೋ, ಅಷ್ಟೇ ಬೇಗ ವಿವಾದಕ್ಕೂ ಸಿಲುಕುತ್ತಾರೆ. ಇನ್ನೂ ಕೆಲವರು ನಾನಾ ಕಾರಣಗಳಿಂದ ಕಾನೂನಿನ ಸಮಸ್ಯೆಗೂ ಒಳಗಾಗುತ್ತಾರೆ. 2021ನೇ ವರ್ಷ ಬಾಲಿವುಡ್​ನಲ್ಲಿ ಯಾವೆಲ್ಲಾ ತಾರೆಯರು ವಿವಾದ ಮತ್ತು ಕಾನೂನಾತ್ಮಕ ಶಿಕ್ಷೆಗೆ ಒಳಗಾಗಿದ್ದಾರೆ ಎಂಬುದನ್ನು ಒಮ್ಮೆ ಮೆಲುಕು ಹಾಕೋಣ

legal action
ಬಾಲಿವುಡ್​ ನಟ-ನಟಿಯರಿವರು
author img

By

Published : Dec 20, 2021, 8:32 PM IST

ಹೈದರಾಬಾದ್: ಬಾಲಿವುಡ್​ನಲ್ಲಿ ಎಷ್ಟು ಬೇಗ ಹೆಸರು ಗಳಿಸುತ್ತಾರೋ, ಅಷ್ಟೇ ಬೇಗ ವಿವಾದಕ್ಕೂ ಸಿಲುಕುತ್ತಾರೆ. ಇನ್ನೂ ಕೆಲವರು ನಾನಾ ಕಾರಣಗಳಿಂದ ಕಾನೂನಿನ ಸಮಸ್ಯೆಗೂ ಒಳಗಾಗುತ್ತಾರೆ. 2021ನೇ ವರ್ಷ ಬಾಲಿವುಡ್​ನಲ್ಲಿ ಯಾವೆಲ್ಲಾ ತಾರೆಯರು ವಿವಾದ ಮತ್ತು ಕಾನೂನಾತ್ಮಕ ಶಿಕ್ಷೆಗೆ ಒಳಗಾಗಿದ್ದಾರೆ ಎಂಬುದನ್ನು ಮೆಲುಕು ಹಾಕೋದಾದರೆ,

ಐಶ್ವರ್ಯಾ ರೈ
ಐಶ್ವರ್ಯಾ ರೈ

ಐಶ್ವರ್ಯಾ ರೈಗೆ 'ಪನಾಮಾ' ಎಫೆಕ್ಟ್​

ವಿದೇಶದಲ್ಲಿ ಖಾತೆ ಹೊಂದಿರುವ ಆರೋಪ ಹೊತ್ತಿರುವ ಹಲವು ರಾಜಕಾರಣಿಗಳು ಹಾಗೂ ನಟ, ನಟಿಯರ ಹೆಸರುಗಳನ್ನು ಪನಾಮಾ ಪೇಪರ್ಸ್​ ಬಹಿರಂಗ ಮಾಡಿತ್ತು. ಇದರಲ್ಲಿ ನಟಿ, ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಬಚ್ಚನ್ ಅವರು ಭಾಗಿಯಾಗಿದ್ದಾರೆ ಎಂಬ ಆರೋಪದ ಮೇರೆಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿತ್ತು.

ಎರಡು ಬಾರಿ ವಿಚಾರಣೆಗೆ ಹಾಜರಾಗದ ಐಶ್ವರ್ಯಾಗೆ ಇ.ಡಿ. ಡಿ.20 ರಂದು ವಿಚಾರಣೆಗೆ ಹಾಜರಾಗುವಂತೆ ಮತ್ತೆ ನೋಟಿಸ್​ ನೀಡಿತ್ತು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ಮುಂದೆ ಐಶ್ವರ್ಯಾ ಹಾಜರಾಗಿ ವಿಚಾರಣೆ ಎದುರಿಸಿದ್ದರು. ಇದಲ್ಲದೇ ಪ್ರಕರಣದಲ್ಲಿ ಐಶ್ವರ್ಯಾ ರೈ ಅವರ ಮಾವ, ಬಾಲಿವುಡ್​ ಸೂಪರ್​ಸ್ಟಾರ್​ ಅಮಿತಾಬ್​ ಬಚ್ಚನ್​ ಅವರ ಹೆಸರೂ ಕೇಳಿ ಬಂದಿದೆ.

ಜಾಕ್ವೆಲಿನ್​ ಫರ್ನಾಂಡೀಸ್​
ಜಾಕ್ವೆಲಿನ್​ ಫರ್ನಾಂಡಿಸ್​

ಜಾಕ್ವೆಲಿನ್ ಫರ್ನಾಂಡಿಸ್​ಗೆ 'ದುಬಾರಿ'ಯಾದ ಕಾರು

ಬಾಲಿವುಡ್​ನ ಮತ್ತೊಂದು ಪ್ರಕರಣವೆಂದರೆ, ಬೆಂಗಳೂರು ಮೂಲದ ವಂಚಕ ಸುಕೇಶ್​ ಚಂದ್ರಶೇಖರ್​ ಅವರಿಂದ ದುಬಾರಿ ಉಡುಗೊರೆ ಹಾಗೂ ಕಾರು ಪಡೆದ ಆರೋಪ ಜಾಕ್ವೆಲಿನ್​ ಫರ್ನಾಂಡೀಸ್​ ಅವರ ಮೇಲಿದೆ. ಸುಕೇಶ್​ 200 ಕೋಟಿ ರೂಪಾಯಿ ವಂಚನೆ ಆರೋಪ ಹೊತ್ತಿದ್ದಾರೆ.

ಇವರಿಂದ ಹಣದ ಸಹಾಯವನ್ನು ಪಡೆದ ಕಾರಣ ಜಾಕ್ವೆಲಿನ್​ ಅವರನ್ನು ಜಾರಿ ನಿರ್ದೇಶನಾಲಯ ವಿಚಾರಣೆ ನಡೆಸುತ್ತಿದೆ. ಇದೇ ವೇಳೆ, ನಟಿ ಜಾಕ್ವೆಲಿನ್ ತಮ್ಮ ಮೇಲಿನ ಆರೋಪವನ್ನು ನಿರಾಕರಿಸಿದ್ದಾರೆ. ಜಾಕ್ವೆಲಿನ್‌ಗೆ 1.80 ಲಕ್ಷ ಡಾಲರ್​ ನೀಡಿದ್ದೆ ಎಂದು ಸುಕೇಶ್​ ಅಧಿಕಾರಿಗಳಿಗೆ ಹೇಳಿದ್ದಾನೆ ಎನ್ನಲಾಗಿದೆ.

ನೋರಾ ಫತೇಹಿ
ನೋರಾ ಫತೇಹಿ

ನೋರಾ ಫತೇಹಿಗೂ ಸುಕೇಶ್​ ಕಾಟ

ಸುಕೇಶ್ ಚಂದ್ರಶೇಖರ್ ವಂಚನೆ ಪ್ರಕರಣದಲ್ಲಿ ಬಾಲಿವುಡ್​ನ ಸೂಪರ್​ ಡ್ಯಾನ್ಸರ್ ನೋರಾ ಫತೇಹಿ ಅವರ ಹೆಸರೂ ಸೇರಿಕೊಂಡಿದೆ. ಇ.ಡಿ. ನೋರಾ ಫತೇಹಿಯನ್ನು ಹಲವು ಬಾರಿ ವಿಚಾರಣೆಗಾಗಿ ಕಚೇರಿಗೆ ಕರೆದಿದೆ. ನೋರಾಗೆ ಸುಕೇಶ್​ ಕೋಟ್ಯಂತರ ಮೌಲ್ಯದ ಕಾರನ್ನು ಉಡುಗೊರೆಯಾಗಿ ನೀಡಿದ್ದ ಎಂಬ ಆರೋಪ ಇದೆ. ಇದು ನಟಿಯನ್ನು ಈ ವರ್ಷ ಬಾಧಿಸಿದ ಕಹಿ ನೆನಪಾಗಿದೆ.

ಶಿಲ್ಪಾ ಶೆಟ್ಟಿ
ಶಿಲ್ಪಾ ಶೆಟ್ಟಿ

ಶಿಲ್ಪಾ ಶೆಟ್ಟಿಗೆ ಪತಿಯಿಂದಲೇ ಶಾಕ್​

ಈ ವರ್ಷ ನಟಿ ಶಿಲ್ಪಾ ಶೆಟ್ಟಿಗೆ ದೊಡ್ಡ ಆಘಾತವೇ ನೀಡಿದೆ. ಜುಲೈ 19 ರಂದು ಮುಂಬೈ ಪೊಲೀಸರು ದಾಳಿ ನಡೆಸಿ ಶಿಲ್ಪಾ ಅವರ ಪತಿ, ಉದ್ಯಮಿಯಾದ ರಾಜ್ ಕುಂದ್ರಾರನ್ನು ಅಶ್ಲೀಲ ಚಿತ್ರಗಳ ನಿರ್ಮಾಣ, ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕ ಪ್ರಸಾರ ಮಾಡಿದ ಆರೋಪದ ಮೇಲೆ ಬಂಧಿಸಲಾಗಿತ್ತು. ಈ ಪ್ರಕರಣದಲ್ಲಿ ರಾಜ್ ಕುಂದ್ರಾ 2 ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕಾಯಿತು. ಇದೀಗ ಜಾಮೀನು ಪಡೆದಿದ್ದಾರೆ. ಇದರಿಂದಾಗಿ ಶಿಲ್ಪಾ ಶೆಟ್ಟಿಗೆ ಈ ವರ್ಷ ಸಿಹಿಗಿಂತ ಕಹಿಯೇ ಹೆಚ್ಚಾಗಿದೆ.

ಆರ್ಯನ್​ ಖಾನ್​
ಆರ್ಯನ್​ ಖಾನ್​

ಶಾರೂಖ್​ ಖಾನ್​ಗೆ ಮಗನಿಂದಲೇ ಅವ ಮರ್ಯಾದೆ

ಬಾಲಿವುಡ್​ನಲ್ಲಿ ಈ ವರ್ಷ ಅತಿ ಹೆಚ್ಚು ವಿವಾದ ಸೃಷ್ಟಿ ಮಾಡಿದ ವಿಷಯವೆಂದರೆ ಅದು ಶಾರೂಖ್​ ಖಾನ್​ ಅವರ ಪುತ್ರ ಆರ್ಯನ್​ ಖಾನ್​ರ ಡ್ರಗ್​​ ಕೇಸ್​. ಅಕ್ಟೋಬರ್ 2 ರಂದು ಮುಂಬೈನಿಂದ ಗೋವಾಗೆ ಹೋಗುತ್ತಿದ್ದ ಹಡಗಿನಲ್ಲಿ ನಡೆಯುತ್ತಿದ್ದ ಡ್ರಗ್ಸ್ ಪಾರ್ಟಿಯ ಮೇಲೆ ದಾಳಿ ಮಾಡಿದ ಎನ್‌ಸಿಬಿ ಅಧಿಕಾರಿಗಳು ಶಾರುಖ್ ಖಾನ್ ಅವರ ಮಗ ಆರ್ಯನ್ ಖಾನ್ ಸೇರಿದಂತೆ 9 ಜನರನ್ನು ಬಂಧಿಸಿತ್ತು.

ಈ ಪ್ರಕರಣದಲ್ಲಿ ಆರ್ಯನ್ ಖಾನ್ ಸುಮಾರು 20 ದಿನಗಳ ಕಾಲ ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿ ಕಳೆಯುವಂತಾಗಿತ್ತು. ಬಾಲಿವುಡ್​ನಲ್ಲಿ ತಮ್ಮ ಶ್ರಮದಿಂದಲೇ ಕೋಟೆ ಕಟ್ಟಿ ಮೆರೆದಿದ್ದ ಶಾರೂಖ್​ಗೆ ಮಗನೇ ಕಳಂಕವಾಗಿ ಪರಿಣಮಿಸಿದ್ದು ಮಾತ್ರ ವಿಪರ್ಯಾಸ.

ಇದನ್ನೂ ಓದಿ: ಜಾಕ್ವೆಲಿನ್​ಗಾಗಿ 500 ಕೋಟಿ ರೂ. ಬಜೆಟ್​ ಸಿನಿಮಾ ಮಾಡಲು ಹೊರಟಿದ್ದ ವಂಚಕ ಸುಖೇಶ್

ಇದನ್ನೂ ಓದಿ: ವಿಕ್ಕಿ ಜತೆಗಿನ ರೊಮ್ಯಾಂಟಿಕ್​ ಫೋಟೋ ಹಂಚಿಕೊಂಡ ಕತ್ರಿನಾ ಕೈಫ್​

ಇದನ್ನೂ ಓದಿ: ಫೋಟೋಗಾಗಿ ಕಪಿಲ್​ದೇವ್​ ಹಿಂದೆ ಓಡಿದ್ದ ಕಿಚ್ಚ ಸುದೀಪ್​..'83' ಸಿನಿಮಾ ಪ್ರಮೋಷನ್​ನಲ್ಲಿ​ ಬಾಲ್ಯದ ನೆನಪು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.