ಹೈದರಾಬಾದ್ (ತೆಲಂಗಾಣ) : ಬಾಲಿವುಡ್ ನಟರಾದ ಸಂಜಯ್ ಕಪೂರ್ ಮತ್ತು ಡಿಸೈನರ್ ಮಹೀಪ್ ಕಪೂರ್ ಅವರ ಪುತ್ರಿಯಾದ ಶನಾಯಾ ಕಪೂರ್ ಅವರು ತಮ್ಮ ಚೊಚ್ಚಲ ಚಿತ್ರದ ಚಿತ್ರೀಕರಣವನ್ನು ಪ್ರಾರಂಭಿಸುವ ಮೊದಲೇ ಹೊಸ ಕಾರನ್ನು ಖರೀದಿಸಿದ್ದಾರೆ. 80 ಲಕ್ಷ ರೂಪಾಯಿ ಮೌಲ್ಯದ ಆಡಿ ಕ್ಯೂ7 ಅನ್ನು ಶನಾಯಾ ಕಪೂರ್ ಖರೀದಿಸಿದ್ದು, ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್ ನಿರ್ಮಿಸುತ್ತಿರುವ ಮುಂಬರುವ ಚಿತ್ರದೊಂದಿಗೆ ಬಾಲಿವುಡ್ಗೆ ಪಾದಾರ್ಪಣೆ ಮಾಡಲಿದ್ದಾರೆ.
ಕರಣ್ ಜೋಹರ್ ನಿರ್ಮಾಣದ 'ಬೇಧಡಕ್' ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಲು ಶನಾಯಾ ಸಜ್ಜಾಗಿದ್ದಾರೆ. ಚಿತ್ರವು ಇನ್ನೂ ಸೆಟ್ಟೇರಬೇಕಿದ್ದು, ಅದಕ್ಕೂ ಮೊದಲೇ ಶನಾಯಾ ಹೊಚ್ಚ ಹೊಸ ಐಷಾರಾಮಿ ಕಾರನ್ನು ಮನೆಗೆ ತಂದಿದ್ದಾರೆ. ಮುಂಬೈ ವೆಸ್ಟ್ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶನಾಯಾ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಫೋಟೋಗಳಲ್ಲಿ ಹೊಚ್ಚ ಹೊಸ ಕಪ್ಪು ಬಣ್ಣದ ಕಾರಿನೊಂದಿಗೆ, ಬಿಳಿ ಬಣ್ಣದ ಉಡುಗೆ ಧರಿಸಿ, ಶನಾಯಾ ತನ್ನ ಪೋಷಕರೊಂದಿಗೆ ನಿಂತಿದ್ದಾರೆ.
ಈ ಮೊದಲೇ ಹೇಳಿದಂತೆ ಶನಾಯಾ ಕಪೂರ್ ಬೇಧಡಕ್ ಚಿತ್ರದಲ್ಲಿ ನಟಿಸಲು ಸಿದ್ಧರಾಗಿದ್ದಾರೆ. ಈ ಸಿನಿಮಾವನ್ನು ಶಶಾಂಕ್ ಖೈತಾನ್ ನಿರ್ದೇಶಿಸಿದ್ದಾರೆ. ಶನಾಯಾ ಜೊತೆಗೆ ಲಕ್ಷ್ಯ ಮತ್ತು ಗುರ್ಫತೆ ಪಿರ್ಜಾದಾ ಎಂಬ ಇನ್ನಿಬ್ಬರು ನಟರು ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾ ತ್ರಿಕೋನ ಪ್ರೇಮಕಥೆ ಹೊಂದಿದೆ ಎಂದು ಹೇಳಲಾಗುತ್ತಿದೆ. ಶನಾಯಾ ಅವರು ಸುಮಾರು ಒಂದು ವರ್ಷದಿಂದ ಈ ಸಿನಿಮಾಗೆ ತಯಾರಿ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: RRR ಪ್ರಚಾರಕ್ಕಾಗಿ ಕರ್ನಾಟಕದ ಬಳಿಕ ವಾರಣಾಸಿಗೆ ಜಂಪ್.. ಸಿನಿಮಾ ಯಶಸ್ಸಿಗೆ ಕಾಶಿ ವಿಶ್ವನಾಥ್ನಿಗೆ ಮೊರೆ ಹೋದ ಚಿತ್ರ ತಂಡ!