ETV Bharat / sitara

ನನ್ನ ತಂದೆಯ ವರ್ಚಸ್ಸಿನಿಂದ ಬಂದ ಅವಕಾಶವಲ್ಲ: 'ತಡಪ್‌' ಬಗ್ಗೆ ಅಹಾನ್ ಶೆಟ್ಟಿ ಮಾತು - ಬಾಲಿವುಡ್​ ನಟನ ಸಂದರ್ಶನ

ಅಹಾನ್ ಶೆಟ್ಟಿ (Bollywood actor Ahan Shetty) 2018ರಲ್ಲಿ ಬಿಡುಗಡೆಯಾದ ಟಾಲಿವುಡ್​ನ ರೊಮ್ಯಾಂಟಿಕ್ ಹಾಗೂ ಆ್ಯಕ್ಷನ್ ಸಿನಿಮಾ 'RX100' ಎಂಬ ರಿಮೇಕ್ ಚಿತ್ರದೊಂದಿಗೆ ಬಾಲಿವುಡ್ ಪ್ರವೇಶ ಮಾಡುತ್ತಿದ್ದಾರೆ.

Ahan Shetty on debut film: Got Tadap because of talent, not because of my father
ಅಹಾನ್ ಶೆಟ್ಟಿ
author img

By

Published : Nov 22, 2021, 4:39 PM IST

ಮುಂಬೈ (ಮಹಾರಾಷ್ಟ್ರ): ಬಾಲಿವುಡ್​ ನಟ ಸುನೀಲ್ ಶೆಟ್ಟಿ (Sunil Shetty) ಪುತ್ರ ಅಹಾನ್ ಶೆಟ್ಟಿ (Ahan Shetty) ತಮ್ಮ ಚೊಚ್ಚಲ ಚಿತ್ರ 'ತಡಪ್'ಗಾಗಿ (Tadap) ಬಣ್ಣದ ಜಗತ್ತಿಗೆ ಕಾಲಿಡುತ್ತಿದ್ದು, ತಾವು ಅನುಭವಿಸಿದ ಕಷ್ಟ ಹಾಗೂ ಪಟ್ಟ ಪರಿಶ್ರಮದ ಬಗ್ಗೆ ಹೆಮ್ಮೆಯಿಂದ ಮಾತನಾಡಿದ್ದಾರೆ.

ಸಂದರ್ಶನವೊಂದರಲ್ಲಿ ತಮ್ಮ ಸಿನಿಮಾ ವೃತ್ತಿಜೀವನದ ಬಗ್ಗೆ ಮನಬಿಚ್ಚಿ ಮಾತನಾಡಿದ ಅವರು, ತಡಪ್ ನನ್ನ ಮೊದಲ ಚಿತ್ರ. ಈ ಚಿತ್ರಕ್ಕಾಗಿ ಕಳೆದ ಹಲವು ದಿನಗಳಿಂದ ನಾನು ತೆಗೆದುಕೊಂಡ ಕಠಿಣ ನಿರ್ಧಾರಗಳು ಅಷ್ಟಿಷ್ಟಲ್ಲ. ನನ್ನ ಪರಿಶ್ರಮದ ಆಧಾರ ಮೇಲೆಯೇ ಈ ಚಿತ್ರ ನನ್ನನ್ನು ಹುಡುಕಿಕೊಂಡು ಬಂತು. ಇದು ನನ್ನ ಪ್ರತಿಭೆಗೆ ಸಿಕ್ಕ ಪ್ರತಿಫಲ ಎಂದರು.

ಸ್ಟಾರ್​ ನಟನ ಪುತ್ರನೆಂಬ ಕಾರಣಕ್ಕೆ ಅವಕಾಶಗಳು ಹುಡುಕಿಕೊಂಡು ಬರುತ್ತವೆ ಅನ್ನೋದು ಸುಳ್ಳು. ನಮ್ಮ ಪರಿಶ್ರಮ ನಮ್ಮನ್ನು ಕಾಪಾಡುತ್ತದೆ. ಇದಕ್ಕೆ ಉದಾಹರಣೆ ನಾನೇ. ಸಿನಿಮಾಗಾಗಿಯೇ ನಾನು 12 ರಿಂದ 13 ವರ್ಷಗಳಿಂದ ನಟನೆ, ಆ್ಯಕ್ಷನ್, ಡ್ಯಾನ್ಸ್, ಹಾಡುಗಾರಿಕೆ, ಗಿಟಾರ್ ನುಡಿಸುವಿಕೆ ಇತ್ಯಾದಿಗಳಲ್ಲಿ ತರಬೇತಿ ಪಡೆಯುತ್ತಿದ್ದೇನೆ.

ಚಿತ್ರ ನಿರ್ಮಾಪಕ ಸಾಜಿದ್ ನಾಡಿಯಾಡ್ವಾಲಾ (Sajid Nadiadwala) ನನ್ನ ತಂದೆಯ ಸ್ನೇಹಿತರು. ನನ್ನ ಆ್ಯಕ್ಷನ್ ಮತ್ತು ಡ್ಯಾನ್ಸ್ ವಿಡಿಯೋಗಳನ್ನು ನೋಡಿ ನನಗೊಂದು ದಿನ ಕರೆ ಮಾಡಿ ಚಿತ್ರದ ಬಗ್ಗೆ ಹೇಳಿದರು. ಹಾಗೆಯೇ ಆಡಿಷನ್ ಕೊಟ್ಟೆ. ಆದರೆ, ಸಿನಿಮಾಗಾಗಿ ಇನ್ನೂ ಪಳಗಬೇಕಿತ್ತು ಎಂದು ವಿವರಿಸಿದರು.

  • " class="align-text-top noRightClick twitterSection" data="">

ಹಾಗಾಗಿ, ಸಾಕಷ್ಟು ತರಬೇತಿ ತೆಗೆದುಕೊಂಡೆ. ಸ್ಟಾರ್​ ನಟನ ಪುತ್ರ ಎಂದು ಹೇಳಿ ಅವಕಾಶ ಗಿಟ್ಟಿಸಿಕೊಳ್ಳುವುದು ನನಗೆ ಇಷ್ಟವಿಲ್ಲ. ಇದು ನನ್ನ ತಂದೆಯ ವರ್ಚಸ್ಸಿನಿಂದ ಬಂದ ಅವಕಾಶವೂ ಅಲ್ಲ. ಆದರೆ, ಅವರಿಂದ ಎಷ್ಟೋ ವಿಷಯಗಳನ್ನು ಕಲಿತಿದ್ದೇನೆ ಎಂದು ತಮ್ಮನ್ನು ಹುಡುಕಿಕೊಂಡು ಬಂದ ಅವಕಾಶದ ಬಗ್ಗೆ ಹರ್ಷ ವ್ಯಕ್ತಪಡಿಸಿದರು.

ಅಹಾನ್ ಶೆಟ್ಟಿ 2018ರಲ್ಲಿ ಬಿಡುಗಡೆಯಾದ ಟಾಲಿವುಡ್​ನ ರೊಮ್ಯಾಂಟಿಕ್ ಹಾಗೂ ಆ್ಯಕ್ಷನ್ ಸಿನಿಮಾ 'RX100' ಎಂಬ ರಿಮೇಕ್ ಚಿತ್ರದೊಂದಿಗೆ ಬಾಲಿವುಡ್ ಪ್ರವೇಶ ಮಾಡುತ್ತಿದ್ದು ಮಿಲನ್ ಲುಥ್ರಿಯಾ (Milan Luthria) ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ.

11ನೇ ವಯಸ್ಸಿನಲ್ಲೇ ನಟನಾಗಲು ಬಯಸಿದ್ದ ಅಹಾನ್ ತಾವು ಅಂದುಕೊಂಡಂತೆ ಬಾಲಿವುಡ್‌ನಲ್ಲಿ ಕಾಲೂರುತ್ತಿದ್ದಾರೆ. ಹಾಗಾಗಿ, ಚಿತ್ರದ ಬಗ್ಗೆ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದಾರೆ. 2018ರಲ್ಲಿ RX 100ರ ಹಕ್ಕು ಪಡೆದ ಈ ಚಿತ್ರತಂಡ ಅಹಾನ್ ಶೆಟ್ಟಿಯವರನ್ನು ಬಾಲಿವುಡ್​ಗೆ ಪರಿಚಯಿಸಲು ತುದಿಗಾಲಲ್ಲಿ ನಿಂತಿದೆ. ತಡಪ್ ಡಿಸೆಂಬರ್‌ 3ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.