ಮುಂಬೈ : '83' ಚಿತ್ರದ ಗೆಲುವಿನ ಗುಂಗಿನಲ್ಲಿರುವ ಬಾಲಿವುಡ್ ಕ್ಯೂಟ್ ಜೋಡಿ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ರಜಾ ದಿನಗಳನ್ನು ಕಳೆಯಲು ಹಾಗೂ ಹೊಸ ವರ್ಷಾಚರಣೆಗೆ ವಿದೇಶಕ್ಕೆ ತೆರಳಿದ್ದಾರೆ.
ಸೋಮವಾರ ಮುಂಬೈ ವಿಮಾನ ನಿಲ್ದಾಣದಿಂದ ವಿದೇಶಕ್ಕೆ ಹಾರುವ ಮುನ್ನ ಈ ಜೋಡಿ ಫೋಟೋಗೆ ಪೋಸ್ ನೀಡಿದರು. ರಣವೀರ್ ಕಂದು ಬಣ್ಣದ ಜಾಕೆಟ್, ದಪ್ಪನಾದ ಸನ್ಗ್ಲಾಸ್ ಮತ್ತು ಬ್ಲ್ಯಾಕ್ ಹಾಟ್ ನಲ್ಲಿ ಮಿಂಚಿದರೆ, ದೀಪಿಕಾ ಬಿಳಿ ಟಾಪ್ ಮತ್ತು ಮ್ಯೂಟ್ ಬ್ರೌನ್ ಪ್ಯಾಂಟ್‌ನಲ್ಲಿ ಕಾಣಿಸಿಕೊಂಡರು.
ಜೊತೆಯಾಗೆ ಪೋಸ್ ನೀಡಿದ ಈ ಜೋಡಿ, ನಂತರ ಮುಂಬೈನಿಂದ ಬಾಲಿವುಡ್ ಸೆಲೆಬ್ರಿಟಿಗಳ ನೆಚ್ಚಿನ ರಜಾ ತಾಣವಾದ ಮಾಲ್ಡೀವ್ಸ್‌ಗೆ ತೆರಳಿದ್ದಾರೆ ಎಂದು ತಿಳಿದುಬಂದಿದೆ.