ಮುಂಬೈ: ಕಳೆದ 2 ವರ್ಷಗಳಿಂದ ಭಾರತೀಯ ಚಿತ್ರರಂಗದಲ್ಲಿ ಸದ್ದು ಮಾಡುತ್ತಿರುವ ವಿಚಾರ ಎಂದರೆ ಕಾಸ್ಟಿಂಗ್ ಕೌಚ್. ಸ್ಯಾಂಡಲ್ವುಡ್ನಲ್ಲಿ ಕೂಡಾ ಈ ವಿಚಾರ ಸಾಕಷ್ಟು ಸದ್ದು ಮಾಡಿತ್ತು. ಈಗ ಈ ವಿವಾದ ತಣ್ಣಗಾಗಿದ್ದರೂ ಅಲ್ಲೋ ಇಲ್ಲೋ ಎಂಬಂತೆ ಕೆಲವು ನಟಿಯರು ಮತ್ತೆ ಇದೇ ವಿಚಾರವಾಗಿ ಮಾತನಾಡುತ್ತಿದ್ದಾರೆ.
- " class="align-text-top noRightClick twitterSection" data="
">
ಬಾಲಿವುಡ್ ನಟಿ ಅದಿತಿ ರಾವ್ ಹೈದರಿ ಕೂಡಾ ಕಾಸ್ಟಿಂಗ್ ಕೌಚ್ ಬಗ್ಗೆ ಇತ್ತೀಚೆಗೆ ಮಾತನಾಡಿದ್ದಾರೆ. ಕಾಸ್ಟಿಂಗ್ ಕೌಚ್ ಎನ್ನುವುದು ಇಂದು ನಿನ್ನೆಯ ವಿಚಾರವಲ್ಲ. ದಶಕಗಳಿಂದಲೂ ಇದು ನಡೆದುಕೊಂಡು ಬಂದಿದೆ. ನನಗೆ ಮಾತ್ರವಲ್ಲ ಚಿತ್ರರಂಗದಲ್ಲಿ ಬಹುತೇಕ ಎಲ್ಲರಿಗೂ ಈ ಅನುಭವ ಆಗಿರುತ್ತದೆ. ಆದರೆ ಕೆಲವರು ಇದನ್ನು ಧೈರ್ಯವಾಗಿ ಎದುರಿಸಿ ಈ ತೊಂದರೆಯಿಂದ ಹೊರಬಂದಿದ್ದಾರೆ. ಆದರೆ ಮತ್ತೆ ಕೆಲವರು ಇದರ ವಿರುದ್ಧ ಧ್ವನಿ ಎತ್ತದೆ ಸುಮ್ಮನಿದ್ದಾರೆ.
ಕೆಲವರು ಆ ಸಮಸ್ಯೆಯಿಂದ ಹೊರ ಬಂದರೂ ಕೂಡಾ ಒಂದಲ್ಲಾ ಒಂದು ರೀತಿಯಲ್ಲಿ ಹಿಂಸೆ ಅನುಭವಿಸುತ್ತಿರುತ್ತಾರೆ. ನಾನೂ ಕೂಡಾ ಸುಮಾರು 8 ತಿಂಗಳ ಕಾಲ ಏನೂ ಕೆಲಸ ಇಲ್ಲದೆ ಈ ಸಮಸ್ಯೆ ಅನುಭವಿಸಿದ್ದೇನೆ ಎಂದು ಅದಿತಿ ಹೇಳಿಕೊಂಡಿದ್ದಾರೆ.
- " class="align-text-top noRightClick twitterSection" data="
">
ಅದಿತಿ ಕರಿಯರ್ ವಿಚಾರಕ್ಕೆ ಬರುವುದಾದರೆ ಅವರ 'ದಿ ಟ್ರೈನ್' ಸಿನಿಮಾ ಬಿಡುಗಡೆಯಾಗಬೇಕಿದೆ. ಪರಿಣಿತಿ ಛೋಪ್ರಾ, ಕೀರ್ತಿ ಕಲ್ಹಾರಿ ಕೂಡಾ ಚಿತ್ರದಲ್ಲಿ ಅಭಿನಯಿಸಿದ್ದು ಈ ಥ್ರಿಲ್ಲರ್ ಚಿತ್ರವನ್ನು ರಿಭು ದಾಸ್ಗುಪ್ತಾ ನಿರ್ದೇಶಿಸಿದ್ದಾರೆ. ರಿಲಾಯನ್ಸ್ ಎಂಟರ್ಟೈನ್ಮೆಂಟ್ ಈ ಚಿತ್ರವನ್ನು ನಿರ್ಮಿಸಿದೆ.
2016 ರಲ್ಲಿ ಬಿಡುಗಡೆಯಾದ 'ದಿ ಟ್ರೈನ್' ಹಾಲಿವುಡ್ ಚಿತ್ರದ ರೀಮೇಕ್ ಆಗಿದೆ. ಈ ಚಿತ್ರಕ್ಕೆ ಅಸಲಿ ಚಿತ್ರದ ಟೈಟಲ್ ಬಳಸಿಕೊಳ್ಳಲಾಗಿದೆ. ಈ ಹಾಲಿವುಡ್ ಚಿತ್ರ ಕೂಡಾ ಬ್ರಿಟಿಷ್ ಲೇಖಕ ಪೌಲ್ ಹಾಕಿನ್ಸ್ ಬರೆದ 'ದಿ ಟ್ರೈನ್' ಪುಸ್ತಕ ಆಧರಿಸಿ ತಯಾರಿಸಿದ ಸಿನಿಮಾವಾಗಿದೆ.