ETV Bharat / sitara

ಲಾಕ್​ಡೌನ್​ನಿಂದ ಕಂಗೆಟ್ಟ ರೈತರಿಗೆ 'ಸೂಪರ್' ಆಫರ್ ನೀಡಿದ ನಟ ಉಪೇಂದ್ರ

ಕೊರೊನಾ ಲಾಕ್‌ಡೌನ್‌ನಿಂದಾಗಿ ಬೆಳೆದ ಬೆಳೆಯನ್ನು ಮಾರಾಟ ಮಾಡಲು ಆಗದೆ ಎಷ್ಟೋ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ದಾನಿಗಳು ನೀಡಿರುವ ಹಣದಲ್ಲಿ ರೈತರಿಂದ ನೇರವಾಗಿ ತರಕಾರಿಗಳನ್ನು ಖರೀದಿ ಮಾಡಿ, ಅದನ್ನು ದಿನಸಿ ಕಿಟ್‌ಗಳ ಜೊತೆಗೆ ವಿತರಿಸುತ್ತೇವೆ ಎಂದು ಉಪೇಂದ್ರ ಟ್ವೀಟ್ ಮಾಡಿದ್ದಾರೆ.

actor Upendra
ನಟ ಉಪೇಂದ್ರ
author img

By

Published : May 15, 2021, 8:01 PM IST

ಬೆಂಗಳೂರು: ಕೊರೊನಾದಿಂದ ಕನ್ನಡ ಚಿತ್ರರಂಗ ಸ್ಥಗಿತ ಆಗಿರುವ ಕಾರಣ, ಸಿನಿಮಾ ಕಾರ್ಮಿಕರು ಸೇರಿದಂತೆ ಸಾಕಷ್ಟು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಇಂಥ ಸಮಯದಲ್ಲಿ ಕಳೆದ ಒಂದು ವಾರದಿಂದ, ರಿಯಲ್ ಸ್ಟಾರ್ ಉಪೇಂದ್ರ ಅವರು ಚಿತ್ರರಂಗದ ಸ್ನೇಹಿತರು ಹಾಗೂ ದಾನಿಗಳ ಸಹಾಯದಿಂದ, ಕಷ್ಟದಲ್ಲಿರುವ ಕಾರ್ಮಿಕರ ಕುಟುಂಬಗಳಿಗೆ ಆಹಾರ ಧಾನ್ಯದ ಕಿಟ್​ಗಳನ್ನು ನೀಡುತ್ತಿದ್ದಾರೆ‌. ಇದೀಗ ಸಿನಿಮಾ‌ ಕಾರ್ಮಿಕರ ಬಳಿಕ, ಉಪೇಂದ್ರ ರೈತರಿಗೂ ನೆರವಾಗಲು ನಿರ್ಧರಿಸಿದ್ದಾರೆ.

actor Upendra
ನಟ ಉಪೇಂದ್ರ

ಓದಿ: 75 ಪೈಸೆಗೂ ಮಾರಾಟವಾಗದ ಕೆಜಿ ಟೊಮ್ಯಾಟೊ.. ಬೀದಿಪಾಲಾಗಿದೆ ರೈತನ ಬದುಕು

ಲಾಕ್‌ಡೌನ್‌ನಿಂದಾಗಿ ಬೆಳೆದ ಬೆಳೆ ವ್ಯಾಪಾರವಾಗದೆ ಸಂಕಷ್ಟದಲ್ಲಿರುವ ರೈತರ ಬೆಳೆಯನ್ನು ಖರೀದಿ ಮಾಡಿ, ಅವಶ್ಯವಿರುವವರಿಗೆ ಹಂಚಲು ನಟ ಉಪೇಂದ್ರ ಮನಸ್ಸು ಮಾಡಿದ್ದಾರೆ. ಕೊರೊನಾ ಸಂಕಷ್ಟದಲ್ಲಿರುವವರಿಗೆ ಸಹಕಾರಿಯಾಗುವಂತೆ ದಿನಸಿ ಕಿಟ್‌ಗಳನ್ನು ಉಪೇಂದ್ರ ವಿತರಿಸುತ್ತಿದ್ದಾರೆ. ಇದರ ಜೊತೆಗೆ ರೈತಾಪಿ ವರ್ಗಕ್ಕೂ ಸಹಾಯವಾಗಲಿ ಎಂದು ರೈತರಿಂದ ನೇರವಾಗಿ ಬೆಳೆ ಖರೀದಿ ಮಾಡಿ, ಅದನ್ನು ದಿನಸಿ ಕಿಟ್‌ ಮೂಲಕ ವಿತರಿಸಲು ಉಪೇಂದ್ರ ಪ್ಲಾನ್ ಮಾಡಿದ್ದಾರೆ.

ದಾನಿಗಳು ನೀಡಿರುವ ಹಣದಲ್ಲಿ ರೈತರಿಂದ ನೇರವಾಗಿ ತರಕಾರಿಗಳನ್ನು ಖರೀದಿ ಮಾಡಿ, ಅದನ್ನು ದಿನಸಿ ಕಿಟ್‌ಗಳ ಜೊತೆಗೆ ವಿತರಿಸುತ್ತೇವೆ ಎಂದು ಉಪೇಂದ್ರ ಟ್ವೀಟ್ ಮಾಡಿದ್ದಾರೆ.

actor Upendra
ನಟ ಉಪೇಂದ್ರ

ಓದಿ: ಕೊರೊನಾವನ್ನು ಎಲ್ಲರೂ ಧೈರ್ಯವಾಗಿ ಎದುರಿಸಬೇಕು: ರಿಯಲ್ ಸ್ಟಾರ್ ಉಪೇಂದ್ರ!

ಹಾಗೇ ಬೆಳೆದ ಬೆಳೆ ವ್ಯಾಪಾರವಾಗದೇ ಸಂಕಷ್ಟದಲ್ಲಿರುವ ರೈತರ ಗಮನಕ್ಕೆ, ನಮಗೆ ಅವಶ್ಯಕತೆ ಇರುವ ಬೆಳೆಯನ್ನು ನಿಮ್ಮ ಬಳಿ ಸೂಕ್ತ ಬೆಲೆಗೆ ಕೊಂಡು ಬೇಕಿರುವವರಿಗೆ ಹಂಚುತ್ತೇವೆ ಎಂದು ಟ್ವಿಟ್ಟರ್‌ನಲ್ಲಿ ಉಪೇಂದ್ರ ಬರೆದುಕೊಂಡಿದ್ದಾರೆ. ಜೊತೆಗೆ ಸಂಪರ್ಕಕ್ಕಾಗಿ ಮೊಬೈಲ್ ಸಂಖ್ಯೆಯನ್ನೂ ಹಂಚಿಕೊಂಡಿದ್ದಾರೆ. ನೀವು ಬೆಳೆದ ಬೆಳೆ ಯಾವುದು, ಆ ಬೆಳೆ ಎಷ್ಟು ಕೆಜಿ/ ಕ್ವಿಂಟಾಲ್ ಇದೆ. ಅದರ ಅಂತಿಮ ಬೆಲೆ ಎಷ್ಟು, ಅದನ್ನು ಬೆಂಗಳೂರಿಗೆ ಸಾಗಿಸಲು ಸಾರಿಗೆ ವೆಚ್ಚ ಎಷ್ಟು, ವಿವರಗಳನ್ನು ದಯವಿಟ್ಟು ಕಳಿಸಿಕೊಡಿ ಎಂದು ಉಪೇಂದ್ರ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಕೇಳಿಕೊಂಡಿದ್ದಾರೆ. ಕನ್ನಡ ಚಿತ್ರರಂಗದ ಬುದ್ದಿವಂತ ನಟ ಹಾಗೂ ನಿರ್ದೇಶಕ ಅಂತಾ ಕರೆಯಿಸಿಕೊಂಡಿರುವ ಉಪೇಂದ್ರ ಆಲೋಚನೆಗೆ ಎಲ್ಲಾ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.