ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಯಾ ಚಕ್ರವರ್ತಿ, ಸಹೋದರ ಶೋವಿಕ್ ಹಾಗೂ ತಂದೆ ಇಂದ್ರಜಿತ್ ಅವರೊಂದಿಗೆ ನಗರದ ಇಡಿ ಕಚೇರಿಯಲ್ಲಿ ವಿಚಾರಣಗೆ ಹಾಜರಾಗಿದ್ದಾರೆ.
ನಟಿ ರಿಯಾ ಚಕ್ರವರ್ತಿ ವಿರುದ್ಧ ದಾಖಲಾದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತಮ್ಮ ಹೇಳಿಕೆ ದಾಖಲಿಸಲು ಜಾರಿ ನಿರ್ದೇಶನಾಲಯ(ಇಡಿ)ಕಚೇರಿಗೆ ವಿಚಾರಣೆಗೆ ಬಂದಿದ್ದಾರೆ.
ಇನ್ನೊಂದೆಡೆ ಸುಶಾಂತ್ ಸಿಂಗ್ ಅವರ ಸಾವಿನ ಪ್ರಕರಣದಲ್ಲಿ ವಿಚಾರಣೆಗಾಗಿ ಶ್ರುತಿ ಮೋದಿ ಕೂಡಾ ಇಡಿ ಕಚೇರಿಗೆ ಬಂದಿದ್ದಾರೆ. ಶ್ರುತಿ ಮೋದಿ ಸುಶಾಂತ್ ಅವರ ಮಾಜಿ ಬ್ಯುಸಿನೆಸ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು.
ಸುಶಾಂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಯಾ ಚಕ್ರವರ್ತಿ, ಇಂದ್ರಜಿತ್ ಚಕ್ರವರ್ತಿ, ಸಂಧ್ಯಾ ಚಕ್ರವರ್ತಿ, ಶೋಯಿಕ್ ಚಕ್ರವರ್ತಿ, ಸ್ಯಾಮ್ಯುಯೆಲ್ ಮಿರಾಂಡಾ, ಶ್ರುತಿ ಮೋದಿ ಮತ್ತು ಇತರ ಆರು ಆರೋಪಿಗಳ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ಎಫ್ಐಆರ್ ದಾಖಲಿಸಿದೆ. ನಟನ ತಂದೆ ಕೆ ಕೆ ಸಿಂಗ್ ಸಲ್ಲಿಸಿದ ಎಫ್‌ಐಆರ್‌ನಲ್ಲಿ ರಿಯಾ ವಿರುದ್ಧ ಆತ್ಮಹತ್ಯೆ ಮತ್ತು ಮನಿ ಲಾಂಡ್‌ರಿಂಗ್ ಆರೋಪ ಹೊರಿಸಿದ್ದರು.