ETV Bharat / sitara

ಬೈಕ್​ ಮಾರಿ ಸೈಬರಾಬಾದ್ ಪೊಲೀಸರಿಗೆ ಆಮ್ಲಜನಕ ಸಾಂದ್ರಕ ನೀಡಿದ ನಟ ಹರ್ಷವರ್ಧನ್ ರಾಣೆ - ಸೈಬರಾಬಾದ್ ಪೊಲೀಸ್​

'ಸನಮ್​ ತೇರಿ ಕಸಮ್' ಸಿನಿಮಾ ಖ್ಯಾತಿಯ ನಟ ಹರ್ಷವರ್ಧನ್ ರಾಣೆ, ಕೊರೊನಾ ಎದುರಿಸಲು ಅಗತ್ಯವಿರುವ ಜನರಿಗೆ ಸಹಾಯ ಮಾಡಲು ಆಮ್ಲಜನಕ ಸಾಂದ್ರಕಗಳನ್ನು ಸೈಬರಾಬಾದ್ ಪೊಲೀಸರಿಗೆ ನೀಡಿದ್ದಾರೆ.

Actor Harshvardhan Rane donates oxygen concentrator to Cyberabad police
ಹರ್ಷವರ್ಧನ್ ರಾಣೆ
author img

By

Published : May 13, 2021, 12:36 PM IST

ಹೈದರಾಬಾದ್: ತನ್ನ ರಾಯಲ್ ಎನ್‌ಫೀಲ್ಡ್ ಬೈಕ್​ ಮಾರಾಟ ಮಾಡಿದ ಹಣದಲ್ಲಿ ಬಾಲಿವುಡ್​ ನಟ ಹರ್ಷವರ್ಧನ್ ರಾಣೆ ತೆಲಂಗಾಣದ ಸೈಬರಾಬಾದ್ ಪೊಲೀಸರಿಗೆ ಮೂರು ಆಮ್ಲಜನಕ ಸಾಂದ್ರಕಗಳನ್ನು ನೀಡಿದ್ದಾರೆ.

'ಹರ್ಷವರ್ಧನ್ ರಾಣೆ ಶಿರ್ಟಾಫ್ ಫೌಂಡೇಶನ್' ಪರವಾಗಿ ಅದರ ಸ್ವಯಂಸೇವಕ ಅಭಿಲಾಶ್ ಎಲಾಪ್ರೊಲು ಎಂಬವರು ಸೈಬರಾಬಾದ್ ಪೊಲೀಸರಿಗೆ ಆಮ್ಲಜನಕ ಸಾಂದ್ರಕ ಹಸ್ತಾಂತರಿಸಿದ್ದಾರೆ. "ಕೋವಿಡ್ ವಿರುದ್ಧ ಹೋರಾಡಲು ಜನರಿಗೆ ಸಹಾಯ ಮಾಡಲು ಹರ್ಷವರ್ಧನ್ ರಾಣೆ ಅವರು ತಮ್ಮ ರಾಯಲ್ ಎನ್‌ಫೀಲ್ಡ್ ಬೈಕ್​ ಮಾರಿ, ಹಣ ಸಂಗ್ರಹಿಸಿ ಆಮ್ಲಜನಕ ಸಾಂದ್ರಕಗಳನ್ನು ದಾನವಾಗಿ ನೀಡಿದ್ದಾರೆ" ಎಂದು ನಟನಿಗೆ ಟ್ವೀಟ್​ ಮಾಡಿ ಸೈಬರಾಬಾದ್ ಪೊಲೀಸರು ಕೃತಜ್ಞತೆ ಅರ್ಪಿಸಿದ್ದಾರೆ.

ಇದನ್ನೂ ಓದಿ: ವಲಸೆ ಕಾರ್ಮಿಕರಿಗೆ ಆಹಾರ ಒದಗಿಸುವ ಮೂಲಕ ಬರ್ತ್‌ಡೇ ಆಚರಣೆಗೆ ಮುಂದಾದ ಸನ್ನಿ ಲಿಯೋನ್

ಕಳೆದ ವಾರ ಹರ್ಷವರ್ಧನ್ ರಾಣೆ ತಮ್ಮ ಇನ್​​ಸ್ಟಾಗ್ರಾಮ್​ ಖಾತೆಯಲ್ಲಿ "ಕೊರೊನಾ ಎದುರಿಸಲು ಅಗತ್ಯವಿರುವ ಜನರಿಗೆ ಸಹಾಯ ಮಾಡಲು ಕೆಲವು ಆಕ್ಸಿಜನ್​ ಸಾಂದ್ರಕಗಳನ್ನು ನೀಡಲು ನನ್ನ ಬೈಕ್​ ಅನ್ನು ಮಾರಬಯಸುತ್ತೇನೆ" ಎಂದು ಹಳದಿ ಬಣ್ಣದ ರಾಯಲ್ ಎನ್‌ಫೀಲ್ಡ್ ಬೈಕ್‌ ಫೋಟೋವನ್ನು ಪೋಸ್ಟ್ ಮಾಡಿದ್ದರು.

2016ರಲ್ಲಿ 'ಸನಮ್​ ತೇರಿ ಕಸಮ್​' ಸಿನಿಮಾ ಮೂಲಕ ಬಾಲಿವುಡ್​ಗೆ ಎಂಟ್ರಿ ಕೊಟ್ಟಿದ್ದ ರಾಣೆ, ತೆಲುಗಿನ ನಾ ಇಷ್ಟಮ್, ಪ್ರೇಮಾ ಇಶ್ಕ್ ಕಾದಲ್, ಅವುನು 2, ಕವಚಮ್ ಮತ್ತು ಅನಾಮಿಕಾ ಚಿತ್ರಗಳಲ್ಲಿಯೂ ನಟಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.