ಮುಂಬೈ: ಇನ್ನು ಮುಂದೆ ನಾನು ರೊಮ್ಯಾಂಟಿಕ್ ಸೀನ್ಗಳಲ್ಲಿ ನಟಿಸುವುದಿಲ್ಲ, ಅದಕ್ಕೆ ಕಾರಣನೂ ಇದೆ ಅಂತಾರೆ ಅಭಿಷೇಕ್, ಯಾಕೆ ಗೊತ್ತೇ?.
ಅಭಿಷೇಕ್ ಬಚ್ಚನ್ ಸಂಪೂರ್ಣ ಕೌಟುಂಬಿಕ ವ್ಯಕ್ತಿ. ಮಗಳು ಆರಾಧ್ಯ ಬೆಳೆಯುತ್ತಿದ್ದಾಳೆ. ಭವಿಷ್ಯದಲ್ಲಿ ನಾನು ನಟಿಸಿರುವ ತೀರಾ ಹಸಿ-ಬಿಸಿ ದೃಶ್ಯಗಳನ್ನು ಆಕೆ ನೋಡುವುದರಿಂದ ಅದು ಆಕೆಗೆ ಸರಿ ಕಾಣದೆ ಇರಬಹುದು. ಹಾಗಾಗಿ, ಜೀವನದಲ್ಲಿ ನಾನು 'ನೋ ಇಂಟಿಮೇಟ್ ಸೀನ್ ಪಾಲಿಸಿ'ಯನ್ನು ಹಾಕಿಕೊಂಡಿದ್ದೇನೆ ಎನ್ನುತ್ತಾರೆ.
- " class="align-text-top noRightClick twitterSection" data="
">
ಸಂದರ್ಶನವೊಂದರಲ್ಲಿ ನಟನಾಗಿ ಪೋಷಕತ್ವವನ್ನೇನಾದ್ರೂ ಬದಲಾಯಿಸಿದ್ದೀರಾ? ಎಂದು ಕೇಳಿದಾಗ, ಹೌದು, ಇದೊಂದು ವಿಷಯವನ್ನು ನಾನು ಬದಲಿಸಿಕೊಂಡಿದ್ದೇನೆ. ಕೆಲವು ಚಲನಚಿತ್ರಗಳಲ್ಲಿ ಈ ರೀತಿಯ ದೃಶ್ಯಗಳಿವೆ. ಆದ್ರೆ ನಾನು ಇನ್ಮುಂದೆ ಅಂತಹ ಸೀನ್ ಮಾಡಲು ಬಯಸುವುದಿಲ್ಲ. ಅಂತಹ ದೃಶ್ಯಗಳನ್ನು ಆಕೆ ಕಂಡರೆ ಇಲ್ಲೇನು ನಡಿಯುತ್ತಿದೆ ಎಂದು ಮುಂದೊಂದು ದಿನ ಪ್ರಶ್ನಿಸಬಹುದು ಅಂತಾರೆ ಬಚ್ಚನ್.
- " class="align-text-top noRightClick twitterSection" data="
">
ಆದಾಗ್ಯೂ, ನನಗೆ ರೊಮ್ಯಾಂಟಿಕ್ ಸೀನ್ಗಳೆಂದರೆ ಅಷ್ಟಕ್ಕಷ್ಟೇ. ನಾನು ನನಗಾಗಿ ಈ ರೀತಿಯ ಕಟ್ಟುನಿಟ್ಟಿನ ನಿಯಮ ಹಾಕಿಕೊಂಡಿರುವುದರಿಂದ ಇಂತಹ ಸೀನ್ಗಳಿಂದ ಹೊರಗುಳಿಯುವುದು ನನಗೆ ಸಾಧ್ಯವಾಗುತ್ತದೆ ಎಂದಿದ್ದಾರೆ.
ಚಿತ್ರದಲ್ಲಿ ಸಾಕಷ್ಟು ದೈಹಿಕ ಅನ್ಯೋನ್ಯತೆಯನ್ನು ದೃಶ್ಯಗಳಿದ್ದರೆ ನಾನು ನಟಿಸಲು ಸಿದ್ಧನಿಲ್ಲ ಎಂದು ಚಿತ್ರಗಳಿಗೆ ಸಹಿ ಹಾಕುವ ಮುನ್ನ ನಿರ್ದೇಶಕರಿಗೆ ಹೇಳುತ್ತೇನೆ. ರೋಮ್ಯಾಂಟಿಕ್ ಸೀನ್ಗಳಿಂದಾಗಿಯೇ ಹಲವಾರು ಚಿತ್ರಗಳನ್ನು ಕೈಬಿಟ್ಟಿದ್ದೇನೆ. ಇದರ ಬಗ್ಗೆ ನನಗೆ ಯಾವುದೇ ರೀತಿಯ ಪಶ್ಚಾತ್ತಾಪವಿಲ್ಲ ಎಂದು ಅಭಿಷೇಕ್ ಹೇಳುತ್ತಾರೆ.
ಈ ತಿಂಗಳಾಂತ್ಯದ ವೇಳೆಗೆ ಉದ್ಯಮದಲ್ಲಿ 20 ವರ್ಷಗಳನ್ನು ಪೂರೈಸಲು ಸಜ್ಜಾಗಿರುವ ಈ ನಟ, ಅಮೆಜಾನ್ ಪ್ರೈಮ್ ವೆಬ್ ಸರಣಿ ಬ್ರೀಥ್: ಇನ್ ಟು ದಿ ಶಾಡೋಸ್ ಮೂಲಕ ಡಿಜಿಟಲ್ ಮಾಧ್ಯಮಕ್ಕೆ ಚೊಚ್ಚಲ ಪ್ರವೇಶಕ್ಕೆ ಸಜ್ಜಾಗಿದ್ದಾರೆ.