ನವದೆಹಲಿ: ಸೂಪರ್‌ಸ್ಟಾರ್ ಅಕ್ಷಯ್ ಕುಮಾರ್ ಅವರ ಮುಂಬರುವ 'ಬಚ್ಚನ್ ಪಾಂಡೆ' ಚಿತ್ರತಂಡಕ್ಕೆ ನಟ ಅಭಿಮನ್ಯು ಸಿಂಗ್ ಸೇರಿದ್ದಾರೆ.
ಭಾರತೀಯ ಚಲನಚಿತ್ರ ವಿಮರ್ಶಕ ಮತ್ತು ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ್ ಅವರ ಪ್ರಕಾರ, ಅಭಿಮನ್ಯು ಚಿತ್ರದಲ್ಲಿ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
"ಅಭಿಮನ್ಯು ಸಿಂಗ್ ಅಕ್ಷಯ್ ಕುಮಾರ್ ವಿರುದ್ಧ ಖಳನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ" ಎಂದು ತರಣ್ ಟ್ವೀಟ್ ಮಾಡಿದ್ದಾರೆ.
ಕೃತಿ ಸನೋನ್ ನಾಯಕಿಯಾಗಿ ನಟಿಸಲಿರುವ ಈ ಚಿತ್ರವನ್ನು ಫರ್ಹಾದ್ ಸಂಜಿ ನಿರ್ದೇಶಿಸುತ್ತಿದ್ದು, ಸಾಜಿದ್ ನಾಡಿಯಾಡ್ವಾಲಾ ನಿರ್ಮಿಸುತ್ತಿದ್ದಾರೆ. ಇದು ಜನವರಿ 26, 2022ರಂದು ರಿಲೀಸ್ ಆಗಲಿದೆ. ಅಕ್ಷಯ್, ಅಭಿಮನ್ಯು ಮತ್ತು ಕೃತಿ ಅಲ್ಲದೇ ಈ ಚಿತ್ರದಲ್ಲಿ ಜಾಕ್ವೆಲಿನ್ ಫರ್ನಾಂಡೀಸ್ ಮತ್ತು ಅರ್ಷದ್ ವಾರ್ಸಿ ಕೂಡ ಕಾಣಿಸಿಕೊಳ್ಳಲಿದ್ದಾರೆ.