ETV Bharat / sitara

ಅಮೀರ್ ಖಾನ್ ಅಭಿನಯದ 'ಲಾಲ್ ಸಿಂಗ್ ಚಡ್ಡಾ' ಶೂಟಿಂಗ್​ ಪುನಾರಂಭ - ಅಮೀರ್ ಖಾನ್ ಮಗನ ಸಿನಿಮಾ

ಇಂದಿನಿಂದ ಮುಂಬೈನಲ್ಲಿ ಲಾಲ್ ಸಿಂಗ್ ಚಡ್ಡಾ ಸಿನಿಮಾ ಚಿತ್ರೀಕರಣ ಮರು ಆರಂಭವಾಗಿದೆ. ಕೋವಿಡ್​-19ನಿಂದ ಚೇತರಿಸಿಕೊಂಡಿರುವ ಬಾಲಿವುಡ್ ಸೂಪರ್​​ಸ್ಟಾರ್​ ಅಮೀರ್ ಖಾನ್, 'ಲಾಲ್ ಸಿಂಗ್ ಚಡ್ಡಾ' ಚಿತ್ರದ ಶೂಟಿಂಗ್​​ಗೆ ಮರಳಿದ್ದಾರೆ. ಲಡಾಖ್‌​ನಲ್ಲಿ ಯುದ್ಧದ ದೃಶ್ಯ ಚಿತ್ರೀಕರಿಸಲು ಯೋಜಿಸಿರುವ ಹಿನ್ನೆಲೆ, ಅದಕ್ಕೂ ಮುನ್ನ ಮುಂಬೈನಲ್ಲಿ ಕೆಲ ಸೀನ್​​ಗಳನ್ನು ಚಿತ್ರತಂಡ​ ಶೂಟ್​ ಮಾಡುತ್ತಿದೆ..

ameer
ameer
author img

By

Published : Jun 14, 2021, 3:32 PM IST

ಹೈದರಾಬಾದ್ ​​: ಇತ್ತೀಚೆಗೆ ಕೋವಿಡ್​-19ನಿಂದ ಚೇತರಿಸಿಕೊಂಡಿರುವ ಬಾಲಿವುಡ್ ಸೂಪರ್​​ಸ್ಟಾರ್​ ಅಮೀರ್ ಖಾನ್, ತಮ್ಮ ಬಹು ನಿರೀಕ್ಷಿತ ಚಿತ್ರ 'ಲಾಲ್ ಸಿಂಗ್ ಚಡ್ಡಾ' ಚಿತ್ರದ ಶೂಟಿಂಗ್ ಪುನಾರಂಭಿಸಿದ್ದಾರೆ ಎಂದು ವರದಿಯಾಗಿದೆ. ಜೂನ್ 7ರಿಂದ ಮಹಾರಾಷ್ಟ್ರ ಸರ್ಕಾರ ಎಲ್ಲಾ 5 ಹಂತದ ಅನ್‌ಲಾಕ್ ಆರಂಭಿಸಿದ ಕೂಡಲೇ, ಚಲನಚಿತ್ರ ಮತ್ತು ಟಿವಿಗಳು ಸಂಜೆ 5 ಗಂಟೆಯ ಸಮಯ ಮಿತಿಯೊಂದಿಗೆ ಚಿತ್ರೀಕರಣ ಪ್ರಾರಂಭಿಸಿವೆ.

ವರದಿ ಪ್ರಕಾರ ಇಂದಿನಿಂದ ಮುಂಬೈನಲ್ಲಿ ಲಾಲ್‌ ಸಿಂಗ್ ಚಡ್ಡಾ ಸಿನಿಮಾ ಚಿತ್ರೀಕರಣ ಮರು ಆರಂಭವಾಗಿದೆ. ಆದಷ್ಟು ಕಡಿಮೆ ಅವಧಿಯಲ್ಲಿ ಸಿನಿಮಾ ಶೂಟಿಂಗ್​ ಮುಗಿಸಲು ಚಿತ್ರತಂಡ ನಿರ್ಧರಿಸಿದೆ. ಲಡಾಖ್‌​​ನಲ್ಲಿ ಯುದ್ಧದ ದೃಶ್ಯ ಚಿತ್ರೀಕರಿಸಲು ಯೋಜಿಸಿರುವ ಹಿನ್ನೆಲೆ, ಅದಕ್ಕೂ ಮುನ್ನ ಮುಂಬೈನಲ್ಲಿ ಕೆಲವು ಸೀನ್​​ಗಳನ್ನು ಚಿತ್ರತಂಡ​ ಶೂಟ್​ ಮಾಡುತ್ತಿದೆ. ಅಗತ್ಯ ಕೊರೊನಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಆದಷ್ಟು ಕಡಿಮೆ ಸಿಬ್ಬಂದಿ ಬಳಸಿ ಚಿತ್ರೀಕರಣ ಮಾಡಲಾಗುತ್ತಿದೆ.

ಕಳೆದ ವಾರ, ಅಮೀರ್ ಅವರ ಪುತ್ರ ಜುನೈದ್ ಖಾನ್ ಮುಂಬೈನಲ್ಲಿ ತಮ್ಮ ಚೊಚ್ಚಲ ಚಿತ್ರ ಮಹಾರಾಜ ಚಿತ್ರೀಕರಣ ಪುನಾರಂಭಿಸಿದರು. ಅಮೀರ್ ಸೆಟ್‌ಗಳಿಗೆ ಮರಳಿದ ನಂತರ, ಅಕ್ಷಯ್ ಕುಮಾರ್ ಕೂಡ ಆನಂದ್ ಎಲ್ ರಾಯ್ ಅವರ ರಕ್ಷಾ ಬಂಧನ್ ಚಿತ್ರದ ಚಿತ್ರೀಕರಣ ಕಿಕ್‌ಸ್ಟಾರ್ಟ್ ಮಾಡಲಿದ್ದು, ಇದರಲ್ಲಿ ಭೂಮಿ ಪಡ್ನೇಕರ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

'ಲಾಲ್ ಸಿಂಗ್ ಚಡ್ಡಾ'ದಲ್ಲಿ ಕರೀನಾ ಕಪೂರ್ ಖಾನ್ ಮತ್ತು ತೆಲುಗು ನಟ ನಾಗಚೈತನ್ಯ ಪ್ರಮುಖ ಪಾತ್ರಗಳಲ್ಲಿದ್ದಾರೆ. 2021ರ ಕ್ರಿಸ್​ಮಸ್​ಗೆ ಕ್ರಿಸ್‌ಮಸ್ ಸಿನಿಮಾ ಬಿಡುಗಡೆ ಮಾಡಲು ಪ್ಲ್ಯಾನ್​ ಮಾಡಲಾಗಿದೆ. ಆದರೆ, ಈಗಾಗಲೇ ಕೊರೊನಾ ಮತ್ತು ಮತ್ತಿತರ ಕಾರಣಕ್ಕೆ 2 ಬಾರಿ ಶೂಟಿಂಗ್​ ಸ್ಥಗಿತಗೊಂಡಿರುವುದರಿಂದ ಈ ಸಿನಿಮಾ ಡಿಸೆಂಬರ್​​ಗೆ ಬಿಡುಗಡೆಯಾಗುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.