ETV Bharat / sitara

ಹಣಕ್ಕಾಗಿ ಬಂಗಾಳಿ ನಟಿಗೆ ಬೆದರಿಕೆ ಹಾಕಿದ್ದ ನಕಲಿ ನಿರ್ದೇಶಕನ ಬಂಧಿಸಿದ ಮುಂಬೈ ಪೊಲೀಸರು - fake director cheating on a Bengali actress

ಬೆದರಿಕೆ ಹಾಕಿದ ಓಂಪ್ರಕಾಶ್​ ವಿರುದ್ಧ ಬಂಗಾಳಿ ನಟಿ ಮುಂಬೈ ಪೊಲೀಸರಿಗೆ ದೂರು ನೀಡಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ದೂರು ದಾಖಲಾದ 48 ಗಂಟೆಯೊಳಗೆ ಆರೋಪಿಯನ್ನು ಬಂಧಿಸಿದ್ದಾರೆ.

actress
ನಕಲಿ ನಿರ್ದೇಶಕ
author img

By

Published : Jan 11, 2022, 12:38 PM IST

ಮುಂಬೈ: ಹಿಂದಿ ಸಿನಿಮಾ ಅಥವಾ ವೆಬ್​ ಸಿರೀಸ್​ನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ವಂಚಿಸಿದ ನಕಲಿ ನಿರ್ದೇಶಕನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಓಂಪ್ರಕಾಶ್​ ತಿವಾರಿ(24) ಬಂಧಿತ ಆರೋಪಿ.

ಬಂಗಾಳಿ ನಟಿಯೊಬ್ಬರು ಓಂಪ್ರಕಾಶ್​​ ತಿವಾರಿಯನ್ನು ಸಾಮಾಜಿಕ ಮಾಧ್ಯಮದ ಮೂಲಕ ಪರಿಚಯ ಮಾಡಿಕೊಂಡಿದ್ದರು. ತಾನೊಬ್ಬ ಸಿನಿಮಾ ನಿರ್ದೇಶಕನಾಗಿದ್ದು, ಸಿನಿಮಾದಲ್ಲಿ ಕೆಲಸ ಕೊಡಿಸುವೆ ಎಂದು ಬಂಗಾಳಿ ನಟಿಯನ್ನು ನಂಬಿಸಿದ್ದ.

ಬಳಿಕ ಆರೋಪಿ ಓಂಪ್ರಕಾಶ್​ ಬಂಗಾಳಿ ನಟಿಯ ಹಾಟ್​ ಫೋಟೋಗಳನ್ನು ತರಿಸಿಕೊಂಡಿದ್ದಾನೆ. ಇದಲ್ಲದೇ, ನನ್ನನ್ನು ಮುಂಬೈಗೆ ಬಂದು ಭೇಟಿ ಮಾಡು ಎಂದು ತಿಳಿಸಿದ್ದಾನೆ. ಇದೆಲ್ಲವನ್ನು ನಟಿ ನಂಬಿದ್ದಳು. ಬಳಿಕ ಆರೋಪಿ ಓಂಪ್ರಕಾಶ್​ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಹಣ ನೀಡದಿದ್ದರೆ ನಿನ್ನ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವೆ ಎಂದು ಬೆದರಿಸಿದ್ದಾನೆ.

ಬೆದರಿಕೆ ಹಾಕಿದ ಓಂಪ್ರಕಾಶ್​ ವಿರುದ್ಧ ಬಂಗಾಳಿ ನಟಿ ಮುಂಬೈ ಪೊಲೀಸರಿಗೆ ದೂರು ನೀಡಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ದೂರು ದಾಖಲಾದ 48 ಗಂಟೆಯೊಳಗೆ ಆರೋಪಿಯನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ರಿಯಲ್​ ಅಲ್ದೇ ರೀಲ್​ನಲ್ಲೂ ಜೋಡಿಯಾಗಲಿದ್ದಾರಾ ವಿಕ್ಯಾಟ್​.. ಜೀ ಲೆ ಜರಾ ಸಿನಿಮಾದಲ್ಲಿ ಕತ್ರಿನಾಗೆ ವಿಕ್ಕಿ ಕೌಶಲ್​ ನಾಯಕ?

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.