ಕೊರೊನಾ ಸೋಂಕು ಜಗತ್ತನ್ನು ಕಾಡಿಸಿದ್ದು, ಎಲ್ಲಾ ವಲಯಗಳಲ್ಲೂ ಕೂಡಾ ಸಾಕಷ್ಟು ಬದಲಾವಣೆಯಾಗಿದೆ. ಎಲ್ಲಾ ವಲಯಗಳಲ್ಲೂ ಕಷ್ಟ ನಷ್ಟಗಳು ಕಾಣಿಸಿಕೊಂಡಿವೆ. ಚಿತ್ರರಂಗವೂ ಕೂಡಾ ಹೊರತಲ್ಲ. ಚಿತ್ರಮಂದಿರದಿಂದ ಪ್ರೇಕ್ಷಕ ದೂರ ಉಳಿದರೂ ಕೂಡಾ ಕೆಲವೊಂದು ಚಿತ್ರಗಳು ಪ್ರೇಕ್ಷಕನನ್ನು ಸಿನಿಮಾ ಮಂದಿರಕ್ಕೆ ಕರೆತರಲು ಯಶಸ್ವಿಯಾಗಿವೆ. ಬಾಲಿವುಡ್ನಲ್ಲಿಯೂ ಕೂಡಾ ಕೆಲವೊಂದು ಚಿತ್ರಗಳು ಸಾಂಕ್ರಾಮಿಕ ಹೊರತಾಗಿಯೂ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿವೆ. ಅಂಥಹ ಟಾಪ್ ಐದು ಬಾಲಿವುಡ್ ಚಿತ್ರಗಳು ಇಲ್ಲಿವೆ.
1.ಸೂರ್ಯವಂಶಿ
ರೋಹಿತ್ ಶೆಟ್ಟಿ ನಿರ್ದೇಶನದ ಅಕ್ಷಯ್ ಕುಮಾರ್ ಅಭಿನಯದ ಸೂರ್ಯವಂಶಿ 2021ನೇ ವರ್ಷದಲ್ಲಿ ಅತಿ ಹೆಚ್ಚು ಗಳಿಸಿದ ಬಾಲಿವುಡ್ ಸಿನಿಮಾ ಎಂಬ ಖ್ಯಾತಿಗೆ ಪಾತ್ರವಾಗಿದೆ. ಫ್ಯಾಮಿಲಿ ಎಂಟರ್ಟೇನರ್ ಸಿನಿಮಾ ಆದ ಸೂರ್ಯವಂಶಿ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಗಳಿಸಿದ್ದು, ಬರೋಬ್ಬರಿ 293.34ಕೋಟಿ ರೂಪಾಯಿ.
ರಿಲಯನ್ಸ್ ಎಂಟರ್ಟೇನ್ಮೆಂಟ್, ರೋಹಿತ್ ಶೆಟ್ಟಿ ಪಿಕ್ಚರ್ಸ್, ಧರ್ಮ ಪ್ರೊಡಕ್ಷನ್ಸ್, ಮತ್ತು ಕೇಪ್ ಆಫ್ ಗುಡ್ ಫಿಲ್ಮ್ಸ್ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದು, ಅಕ್ಷಯ್ ಕುಮಾರ್ ಜೊತೆಗೆ ಕತ್ರಿಕಾ ಕೈಫ್, ಜಾವೇದ್ ಜಾಫೆರಿ ಜೊತೆಗೆ ಅಜಯ್ ದೇವಗನ್ ಮತ್ತು ರಣವೀರ್ ಸಿಂಗ್ ಕೂಡಾ ಕಾಣಿಸಿಕೊಂಡಿದ್ದಾರೆ.
2. ಅಂತಿಮ್ : ದ ಫೈನಲ್ ಟ್ರೂಥ್
ಸೂರ್ಯವಂಶಿ ನಂತರ ಅತಿ ಹೆಚ್ಚು ಗಳಿಸಿದ ಬಾಲಿವುಡ್ ಸಿನಿಮಾ ಅಂತಿಮ್: ದ ಫೈನಲ್ ಟ್ರೂಥ್. ಈ ಸಿನಿಮಾವನ್ನು ಮಹೇಶ್ ಮಂಜ್ರೇಕರ್ ನಿರ್ಮಾಣ ಮಾಡಿದ್ದು, ಸಲ್ಮಾನ್ ಖಾನ್ , ಆಯುಷ್ ಶರ್ಮಾ, ಜಿಸ್ಸು ಸೇನ್ಗುಪ್ತ ಮತ್ತು ಮಹಿಕಾ ಮಕ್ವಾನಾ ತಾರಾಗಣವಿದೆ. ಅಂದಹಾಗೆ ಈ ಸಿನಿಮಾ ಗಳಿಸಿದ್ದು, ಸುಮಾರು 58.26 ಕೋಟಿ ರೂಪಾಯಿ.. ಸಲ್ಮಾನ್ ಖಾನ್ ಫಿಲ್ಮ್ಸ್ ಈ ಸಿನಿಮಾದ ನಿರ್ಮಾಣ ಮಾಡಿತ್ತು.
3. ಬೆಲ್ ಬಾಟಮ್
80ರ ದಶಕದಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿಗಳಿಂದ ವಿಮಾನ ಹೈಜಾಕ್ ಘಟನೆಯನ್ನು ಆಧರಿಸಿ, ರಂಜಿತ್ ಎಂ ತಿವಾರಿ ನಿರ್ದೇಶನದಲ್ಲಿ ಬೆಲ್ ಬಾಟಮ್ ಸಿನಿಮಾ ಮೂಡಿಬಂದಿತ್ತು. ಅಕ್ಷಯ್ ಕುಮಾರ್ ನಾಯಕ ನಟನಾಗಿರುವ ಈ ಸಿನಿಮಾಗೆ ಅಸೀಮ್ ಅರೋರಾ ಮತ್ತು ಪರ್ವೀಜ್ ಶೇಖ್ ಚಿತ್ರಕತೆ ಬರೆದಿದ್ದರು. ಜಾಕ್ಕಿ ಭಗ್ನಾನಿ, ವಾಸು ಭಗ್ನಾನಿ, ದೀಪ್ಷಿಖಾ ದೇಶಮುಖ್, ನಿಖಿಲ್ ಅಡ್ವಾನಿ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಅಕ್ಷಯ್ ಕುಮಾರ್ ಜೊತೆಗೆ ಲಾರಾ ದತ್ತಾ, ವಾಣಿ ಕಪೂರ್, ಹುಮಾ ಖುರೇಷಿ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ಗಳಿಸಿದ್ದು 50.58 ಕೋಟಿ ರೂಪಾಯಿ.
4.ತಡಾಪ್
ಮಿಲನ್ ಲುಥ್ರಿಯಾ ನಿರ್ದೇಶನದ ಹಾಗೂ ಸಾಜಿದ್ ನಾಡಿಯಾವಾಲಾ ನಿರ್ದೇಶನದ ತಡಾಪ್ ಕೂಡಾ ಬಾಲಿವುಡ್ನಲ್ಲಿ ಸಾಕಷ್ಟು ಹೆಸರು ಮಾಡಿತ್ತು. ನಾಲ್ಕನೇ ಅತ್ಯಂತ ಹೆಚ್ಚು ಹಣ ಗಳಿಸಿದ ಸಿನಿಮಾ ಇದಾಗಿದ್ದು, ಸುಮಾರು 33.90 ಕೋಟಿ ರೂಪಾಯಿ ತನ್ನದಾಗಿಸಿಕೊಂಡಿದೆ. ತೆಲುಗು ಸಿನಿಮಾ ಆರ್ಎಕ್ಸ್ 100 ಸಿನಿಮಾದ ರಿಮೇಕ್ ಆದ ಈ ಸಿನಿಮಾದಲ್ಲಿ ಅಹಾನ್ ಶೆಟ್ಟಿ ಮತ್ತು ತಾರಾ ಸುತಾರಿಯಾ ಅಭಿನಯಿಸಿದ್ದಾರೆ.
5. ಚಂಡೀಗಢ ಕರೇ ಆಶಿಕಿ
ಆಯುಷ್ಮಾನ್ ಖುರಾನಾ ಮತ್ತು ವಾಣಿ ಕಪೂರ್ ತಾರಾಗಣವಿರುವ ಚಂಡೀಗಢ ಕರೇ ಆಶಿಕಿ ಸಿನಿಮಾ 2021ನೇ ವರ್ಷದಲ್ಲಿ ಹಣಗಳಿಕೆಯಲ್ಲಿ ಐದನೇ ಸ್ಥಾನದಲ್ಲಿದೆ. ಅಭಿಷೇಕ್ ಕಪೂರ್ ನಿರ್ದೇಶನದ ಈ ಸಿನಿಮಾವನ್ನು ಟಿ-ಸಿರೀಸ್ ಮತ್ತು ಗಾಯ್ ಇನ್ ಸ್ಕೈ ಪಿಕ್ಚರ್ಸ್ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದು, 31.85 ಕೋಟಿ ರೂಪಾಯಿಯನ್ನು ಗಳಿಸಿದೆ.
ಇದನ್ನೂ ಓದಿ: 2022ರ ಹೊಸ್ತಿಲಲ್ಲಿ ನಾವು: 2021ರಲ್ಲಿ ನಡೆದ ಅಂತಾರಾಷ್ಟ್ರೀಯ ಘಟನೆಗಳ ಕ್ವಿಕ್ಲುಕ್ ಇಲ್ಲಿದೆ.