ETV Bharat / science-and-technology

ಸ್ಮಾರ್ಟ್ ಪೋನ್​ನಂತೆ ಟಿವಿಯಲ್ಲಿ ಶೀಘ್ರವೇ ಯೂಟ್ಯೂಬ್​ ಶಾರ್ಟ್​ - ಟಿವಿಯಲ್ಲಿ ಶೀಘ್ರವೇ ಯೂಟ್ಯೂಬ್​ ಶಾರ್ಟ್​

ಕಿರು ವಿಡಿಯೋಗಳು ಈಗ ಜನಪ್ರಿಯವಾಗಿವೆ. ಟಿಕ್​ಟಾಕ್​ ಬಂದ ಮೇಲಂತೂ ರೀಲ್ಸ್​ಗಳ ಅಬ್ಬರ ಜೋರಾಗಿದೆ. ಸಾಮಾಜಿಕ ಮಾಧ್ಯಮವಾದ ಯೂಟ್ಯೂಬ್​, ಫೋನ್​ ಅಲ್ಲದೇ ಆ್ಯಂಡ್ರಾಯ್ಡ್​ ಟಿವಿಗಳಿಗೂ ಇದನ್ನು ವಿಸ್ತರಿಸಲು ಮುಂದಾಗಿದೆ.

youtube-shorts
ಯೂಟ್ಯೂಬ್​ ಶಾರ್ಟ್​
author img

By

Published : Aug 24, 2022, 8:51 AM IST

ನವದೆಹಲಿ: ಇದು ಶಾರ್ಟ್​ ವಿಡಿಯೋಗಳ ಅಬ್ಬರದ ಕಾಲ. ಟಿಕ್​ಟಾಕ್​, ಮೋಜೊ ಮತ್ತಿತರ ವೇದಿಕೆಗಳಲ್ಲಿ ನಾವು ಇವನ್ನು ಕಾಣಬಹುದು. ಯೂಟ್ಯೂಬ್​ ಕೂಡ ಶಾರ್ಟ್​ ವಿಡಿಯೋಗಳಿಗೆ ಪ್ಲಾರ್ಟ್​ಫಾರ್ಮ್​ ನೀಡಿದೆ. ಆದರೆ, ಸದ್ಯ ಅದು ಮೊಬೈಲ್​ನಲ್ಲಿ ಮಾತ್ರ ಸಿಗುತ್ತದೆ. ಇದನ್ನೀಗ ಸ್ಮಾರ್ಟ್​ ಟಿವಿಗಳಿಗೂ ವಿಸ್ತರಿಸಲು ಮುಂದಾಗಿದೆ.

ಗೂಗಲ್ ಮಾಲೀಕತ್ವದ ಯೂಟ್ಯೂಬ್ ಕಿರು ರೂಪದ ವೀಡಿಯೊ ಅಪ್ಲಿಕೇಶನ್ ಶಾರ್ಟ್ಸ್ ಅನ್ನು ಸ್ಮಾರ್ಟ್ ಟಿವಿಗಳಿಗೂ ಪರಿಚಯಿಸುತ್ತಿದೆ. ಇದಕ್ಕೆ ಯೂಟ್ಯೂಬ್ ಟಿವಿ ಎಂದು ಹೆಸರಿಸಲಾಗಿದೆ.

ಕಿರುಚಿತ್ರಗಳನ್ನು ಆ್ಯಂಡ್ರಾಯ್ಡ್​ ಟಿವಿ, ಗೂಗಲ್​ ಟಿವಿಗಳಲ್ಲಿ ಅಳವಡಿಸಲು ಯೂಟ್ಯೂಬ್​ ಈಗಾಗಲೇ ತನ್ನ ಸಹವರ್ತಿಗಳ ಅಭಿಪ್ರಾಯ ಕೇಳಿದೆ ಎಂದು ವರದಿಯಾಗಿದೆ.

YouTube Shorts ಈಗಾಗಲೇ 30 ಶತಕೋಟಿ ದೈನಂದಿನ ವೀಕ್ಷಣೆಗಳನ್ನು ತಲುಪಿದೆ. ಹೆಚ್ಚಿನ ಪ್ರಮಾಣದಲ್ಲಿ ಚಾಲ್ತಿಯಲ್ಲಿರುವ ಕಾರಣ ಮೊಸಾಯಿಕ್ ಮೋಡ್ ಎಂಬ ಹೊಸ ವೈಶಿಷ್ಟ್ಯವನ್ನು ತರುತ್ತಿದೆ. ಇದರ ಮೂಲಕ ವೀಕ್ಷಕರು ಟಿವಿಯಲ್ಲಿ ಏಕಕಾಲದಲ್ಲಿ ನಾಲ್ಕು ಲೈವ್ ಸ್ಟ್ರೀಮ್‌ಗಳನ್ನು ವೀಕ್ಷಿಸಬಹುದಾಗಿದೆ.

ಸ್ಮಾರ್ಟ್​ ಟಿವಿಗಳಲ್ಲಿ ಕಿರುಚಿತ್ರಗಳನ್ನು ವೀಕ್ಷಿಸುವ ಪ್ರಯತ್ನ ಇದೇ ಮೊದಲಲ್ಲ. ಟಿಕ್​ಟಾಕ್​ ಈಗಾಗಲೇ ಇದನ್ನು ಪ್ರಯೋಗ ಮಾಡಿದೆ. ಇಂಟರ್​ಫೇಸ್​ ಮೂಲಕ ಕಿರು ವಿಡಿಯೋಗಳನ್ನು ವೀಕ್ಷಿಸುವಂತೆ ಮಾಡಿತ್ತು.

ಓದಿ: ಅಂಟಾರ್ಕ್ಟಿಕಾದಲ್ಲಿ 4 ತಿಂಗಳ ಇರುಳಿನ ಬಳಿಕ ಹರಿದ ಬೆಳಕು: ನೋಡಿ ಅಪರೂಪದ ಚಿತ್ರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.