ETV Bharat / science-and-technology

ವಿಶ್ವ ಬಾಹ್ಯಾಕಾಶ ಸಪ್ತಾಹದ ಆಚರಣೆ ಯಾವಾಗ, ಇದರ ಹಿಂದಿನ ಉದ್ದೇಶ ಏನು? - ಮಾನವನ ಅಭಿವೃದ್ಧಿಗೆ ಕಾರಣ

ವಿಶ್ವ ಬಾಹ್ಯಾಕಾಶ ಸಪ್ತಾಹದಂದು ಸಾಮಾನ್ಯ ಜನರಿಗೆ ಬಾಹ್ಯಾಕಾಶದ ಚಟುವಟಿಕೆ ಕುರಿತು ಅರಿವು ಮೂಡಿಸಲಾಗುವುದು. ಜೊತೆಗೆ ಬಾಹ್ಯಾಕಾಶ ಶಿಕ್ಷಣವನ್ನು ಈ ಸಪ್ತಾಹ ಉತ್ತೇಜಿಸುತ್ತದೆ

world-space-week-2023-know-the-importance-of-the-day

author img

By ETV Bharat Karnataka Team

Published : Oct 5, 2023, 11:10 AM IST

ಹೈದರಾಬಾದ್​: ವಿಶ್ವ ಬಾಹ್ಯಾಕಾಶ ಸಪ್ತಾಹವನ್ನು ಪ್ರತಿ ವರ್ಷ ಅಕ್ಟೋಬರ್​ 4ರಿಂದ 10ರವರೆಗೆ ಆಚರಿಸಲಾಗುತ್ತಿದೆ. ಮಾನವನ ಅಭಿವೃದ್ಧಿಗೆ ಕಾರಣವಾಗಿರುವ ವಿಜ್ಞಾನ ಮತ್ತು ತಂತ್ರಜ್ಞಾನದ ಕೊಡುಗೆ ಸ್ಮರಿಸಲು ಈ ದಿನವನ್ನು ಆಚರಿಸಲಾಗುವುದು. ವಿಶ್ವ ಬಾಹ್ಯಾಕಾಶ ಸಪ್ತಾಹವು ಜಾಗತಿಕವಾಗಿ ದೊಡ್ಡದಾದ ವಾರ್ಷಿಕ ಬಾಹ್ಯಾಕಾಶ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರವೂ ಭವಿಷ್ಯದಲ್ಲಿ ಬಾಹ್ಯಕಾಶದ ಬಗ್ಗೆ ಕಲಿಕೆಗೆ ಉತ್ಸಾಹ ನೀಡುವ ಜೊತೆಗೆ ಇದರಿಂದ ಪ್ರೇರಣೆಗೊಂಡು ದೊಡ್ಡದಾದ ಮತ್ತು ವಿಭಿನ್ನ ಹೆಜ್ಜೆ ಇಡಲು ಪ್ರೋತ್ಸಾಹ ನೀಡುತ್ತದೆ. ವಿಶ್ವ ಬಾಹ್ಯಾಕಾಶ ಸಪ್ತಾಹದಂದು ಸಾಮಾನ್ಯ ಜನರಿಗೆ ಬಾಹ್ಯಾಕಾಶದ ಚಟುವಟಿಕೆ ಕುರಿತು ಅರಿವು ಮೂಡಿಸಲಾಗುವುದು. ಜೊತೆಗೆ ಬಾಹ್ಯಾಕಾಶ ಹೋಗುವ ಮತ್ತು ಜಾಗತಿಕವಾಗಿ ಶಿಕ್ಷಣದ ಸಹಕಾರ ಉತ್ತೇಜಿಸುತ್ತದೆ

ವಿಶ್ವ ಬಾಹ್ಯಾಕಾಶ ಸಪ್ತಾಹದ ಆರಂಭ: ವಿಶ್ವ ಬಾಹ್ಯಾಕಾಶ ಸಪ್ತಾಹವನ್ನು ವಿಶ್ವ ಸಂಸ್ಥೆಯ ಸಾಮಾನ್ಯ ಸಂಸ್ಥೆಯಲ್ಲಿ 1999ರ ಡಿಸೆಂಬರ್​ 6ರಂದು ಘೋಷಿಸಲಾಯಿತು. ಈ ವಾರದ ಸಮಯದಲ್ಲೇ ಅಂದರೆ 1957ರ ಅಕ್ಟೋಬರ್ 4 ರಂದು ಮೊದಲ ಮಾನವಸಹಿತ ಉಪಗ್ರಹವಾದ ಸ್ಪುಟ್ನಿಕ್ -1 ರ ಉಡಾವಣೆ ಮತ್ತು 1967 ಅಕ್ಟೋಬರ್ 10 ರಂದು ಬಾಹ್ಯಾಕಾಶ ಒಪ್ಪಂದಕ್ಕೆ ಸಹಿ ಹಾಕುವಿಕೆ ಘಟನೆಗಳು ನಡೆದಿದ್ದವು. ಬಾಹ್ಯಕಾಶದ ಬಗ್ಗೆ ಆಸಕ್ತಿ ಹೊಂದಿರುವ ಪ್ರತಿಯೊಬ್ಬರು ಈ ವಿಶ್ವ ಬಾಹ್ಯಾಕಾಶ ಸಪ್ತಾಹದಲ್ಲಿ ಭಾಗಿಯಾಗಬಹುದಾಗಿದೆ.

ವಿಶ್ವ ಸಂಸ್ಥೆಯಲ್ಲಿ ಬಾಹ್ಯಾಕಾಶಶ ವಿಜ್ಞಾನ ಮತ್ತು ತಂತ್ರಜ್ಞಾನದ ಕುರಿತು ಬಳಕೆ ಹೆಚ್ಚುವುದರ ಜೊತೆಗೆ ಇದಕ್ಕೆ ಹೆಚ್ಚಿನ ಬೆಂಬಲ ನೀಡಲಾಗಿದೆ. 25 ವಿಶ್ವ ಸಂಸ್ಥೆಯ ಘಟಕಗಳು ಮತ್ತು ವಿಶ್ವ ಬ್ಯಾಂಕ್​ ಗ್ರೂಪ್​ಗಳು ನಿಯಮಿತವಾಗಿ ಬಾಹ್ಯಕಾಶದ ಅಪ್ಲಿಕೇಷನ್​ ಅನ್ನು ಬಳಕೆ ಮಾಡುತ್ತದೆ. ಪ್ರಮುಖ ವಿಶ್ವ ಸಮ್ಮೇಳನಗಳು ಮತ್ತು ಬಾಹ್ಯಾಕಾಶದ ಅನ್ವೇಷಣೆ ಸೇರಿದಂತೆ ವಿಶ್ವಸಂಸ್ಥೆಯ ಕೆಲಸಕ್ಕೆ ಬಾಹ್ಯಾಕಾಶ ಅಪ್ಲಿಕೇಶನ್‌ಗಳು ಪ್ರಮುಖ ಮತ್ತು ಕೆಲವೊಮ್ಮೆ ಅಗತ್ಯ ಕೊಡುಗೆಗಳನ್ನು ನೀಡುತ್ತವೆ.

ವಿಶ್ವ ಬಾಹ್ಯಾಕಾಶ ಸಪ್ತಾಹ ವಾರದ ಪ್ರಮುಖ ಗುರಿ

  • ಜಗತ್ತಿಗೆ ಬಾಹ್ಯಾಕಾಶದ ಶಿಕ್ಷಣ ಮತ್ತುನೀಡುವುದು ಜೊತೆಗೆ ಈ ಕುರಿತು ಅರಿವು ಮೂಡಿಸುವ ಉದ್ದೇಶ ಹೊಂದಿದೆ
  • ಬಾಹ್ಯಕಾಶ ಅನ್ವೇಷಣೆಗಳ ಮೂಲಕ ಜಾಗತಿಕವಾಗಿ ಜನರಲ್ಲಿ ಬಾಹ್ಯಾಕಾಶ ಶಿಕ್ಷಣದ ಅರಿವು ಮೂಡಿಸುವ ಗುರಿ ಹೊಂದಿದೆ.
  • ಯುವ ಜನತೆಯನ್ನು ವಿಜ್ಞಾನ ಮತ್ತು ತಂತ್ರಜ್ಞಾ, ಇಂಜಿನಿಯರಿಂಗ್​, ಕಲೆ ಮತ್ತು ಗಣಿತಕ್ಕೆ ಸಂಪರ್ಕ ಕಲ್ಪಿಸುವುದಾಗಿದೆ
  • ಬಾಹ್ಯಾಕಾಶ ತಲುಪುವಿಕೆ ಮತ್ತು ಶಿಕ್ಷಣದಲ್ಲಿ ಅಂತರಾಷ್ಟ್ರೀಯ ಸಹಕಾರವನ್ನು ಉತ್ತೇಜಿಸುವುದಾಗಿದೆ.

ವಿಶ್ವ ಬಾಹ್ಯಕಾಶ ಸಪ್ತಾಹದ ಧ್ಯೇಯವಾಕ್ಯ: 2023ರ ವಿಶ್ವ ಬಾಹ್ಯಾಕಾಶ ಸಪ್ತಾಹದ ಧ್ಯೇಯವಾಕ್ಯ ಬಾಹ್ಯಕಾಶ ಮತ್ತು ಉದ್ಯಮಶೀಲತೆ. ಈ ಮೂಲಕ ವಾಣಿಜ್ಯ ಬಾಹ್ಯಾಕಾಶ ಉದ್ಯಮದ ಬೆಳವಣಿಗೆಯ ಪ್ರಾಮುಖ್ಯತೆ ಗುರುತಿಸುವುದು. ಹಾಗೇ ಬಾಹ್ಯಾಕಾಶ ಉದ್ಯಮಶೀಲತೆಗಾಗಿ ಬೆಳೆಯುತ್ತಿರುವ ಅವಕಾಶಗಳು ಮತ್ತು ಬಾಹ್ಯಾಕಾಶ ಉದ್ಯಮಿಗಳು ಅಭಿವೃದ್ಧಿಯ ಪ್ರಯೋಜನ ಪಡೆಯುವುದಾಗಿದೆ.

ವಿಶ್ವ ಬಾಹ್ಯಾಕಾಶ ಸಪ್ತಾಹ 2023ಯು ಜಾಗತಿಕವಾಗಿ ಎಲ್ಲ ವಿದ್ಯಾರ್ಥಿಗಳನ್ನು ಸ್ಟೆಮ್​ ಮತ್ತು ಉದ್ಯಮಕ್ಕೆ ಪ್ರೋತ್ಸಾಹಿಸಿ, ಬಾಹ್ಯಾಕಾಶ ಕಂಪನಿಗಳಿಗೆ ವಾಣಿಜ್ಯ ಜಾಗವನ್ನು ಬೆಳೆಸಲು ಮತ್ತು ವಾಣಿಜ್ಯ ಬಾಹ್ಯಾಕಾಶ ಉದ್ಯಮಕ್ಕೆ ಅಗತ್ಯವಿರುವ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಅವಕಾಶವನ್ನು ಒದಗಿಸುತ್ತದೆ. ಪರಿಸರ ವ್ಯವಸ್ಥೆಯಲ್ಲಿನ ಬದಲಾವಣೆಗಳ ಕುರಿತು ಪ್ರಮುಖ ಚರ್ಚೆಗಳಿಗೆ ಇದು ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ಪ್ರತಿ ವರ್ಷ ವಿಶ್ವಸಂಸ್ಥೆಯು ಘೋಷಿಸುವ ವಿಷಯದ ಆಧಾರದ ಮೇಲೆ ಸ್ಪೇಸ್​ ವೀಕ್ ಇಂಟರ್ನ್ಯಾಷನಲ್ ಅಸೋಸಿಯೇಷನ್ ​​ಮತ್ತು ವಿವಿಧ ದೇಶಗಳ ಸ್ಥಳೀಯ ಸಂಯೋಜಕರ ಬೆಂಬಲದೊಂದಿಗೆ ವಿಶ್ವಸಂಸ್ಥೆಯು ಕಾರ್ಯಕ್ರಮಗಳನ್ನು ರೂಪಿಸುತ್ತದೆ.

ಇದನ್ನೂ ಓದಿ: ಶುಕ್ರನ ನೆಲದಲ್ಲಿ ಮಿಂಚು - ಗುಡುಗು ಇಲ್ಲದೇ ಇರಬಹುದು: ಅಧ್ಯಯನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.