ETV Bharat / science-and-technology

50 ಸಾವಿರ ವೇತನ, 5 ಗಂಟೆ ಕೆಲಸ, ಇದು Gen Z ಇಂಟರ್ನಿಗಳ ಬೇಡಿಕೆ; ಯಾರಿವರು ಗೊತ್ತಾ? - ಕೆಲಸಕ್ಕೂ ಮುನ್ನ ಅನುಭವ ಸಂಪಾದಿಸುವ

ಪ್ರತಿಯೊಂದು ಪೀಳಿಗೆ ಉದ್ಯೋಗದ ಬಗ್ಗೆ ಹೊಂದಿರುವ ಕಲ್ಪನೆ ವಿಭಿನ್ನವಾಗಿರುತ್ತದೆ. ಅದೇ ರೀತಿ ಜೆನ್​ ಜೆಡ್​ ಅವರದ್ದು ಕೂಡ

who is  Gen Z why we called like that
who is Gen Z why we called like that
author img

By

Published : Jul 22, 2023, 12:56 PM IST

ತಂತ್ರಜ್ಞಾನ ಯುಗದಲ್ಲಿ ಹುದ್ದೆ ಸ್ವರೂಪ ಬದಲಾಗುತ್ತಿದ್ದಂತೆ, ಹುದ್ದ ಆಕಾಂಕ್ಷಿಗಳ ಬೇಡಿಕೆಗಳು ವಿಭಿನ್ನವಾಗುತ್ತಿವೆ. ಈ ಹಿಂದೆ ಕೆಲಸಕ್ಕೂ ಮುನ್ನ ಅನುಭವ ಸಂಪಾದಿಸುವ ಇಂಟರ್ನ್​ಶಿಪ್​ಗೆ ಅವಕಾಶ ಸಿಕ್ಕಿದರೆ ಸಾಕು ಎನ್ನುತ್ತಿದ್ದ ಅಭ್ಯರ್ಥಿಗಳು ಇದೀಗ ಇಂಟರ್ನ್​ಶಿಪ್​ನಲ್ಲೂ ಹೊಸ ಹೊಸ ಸೌಲಭ್ಯಗಳ ಜೊತೆ ಸಂಬಳಕ್ಕಿಂತ ದುಪ್ಪಟ್ಟು ವೇತನ ಸ್ಟೈಫಂಡ್​ ಅನ್ನು ಬೇಡುತ್ತಿದ್ದಾರೆ. ಅದರಲ್ಲೂ ಜೆನ್​ ಜೆಡ್​ (Generation Z) ಅಭ್ಯರ್ಥಿಗಳ ಬೇಡಿಕೆ ಇದೀಗ ಎಲ್ಲರನ್ನು ನಿಬ್ಬೆರಾಗಿಸುವಂತೆ ಮಾಡಿದೆ. ಈ ಕುರಿತು ಟ್ವಿಟರ್​​ ಬಳಕೆದಾರರೊಬ್ಬರು ಆಸಕ್ತಿಕರ ಸಂಗತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಪೀಪಲ್​ ಸಕ್ಸಸ್​ ಆಫ್​ ಇನ್ಫೀಡೊ ನಿರ್ದೇಶಕ ಸಮೀರಾ ಖಾನ್​ ಎನ್ನುವವರು ಇತ್ತೀಚೆಗೆ ಇಂಟರ್ನಿ ಯುವಕನ ಸಂದರ್ಶನ ನಡೆಸಿದ್ದಾರೆ. ಜೆನ್​ ಜೆಡ್​ ಅಭ್ಯರ್ಥಿ ಎಂದು ಗುರುತಿಸಿಕೊಂಡಿರುವ ಅಭ್ಯರ್ಥಿ ಸಂದರ್ಶನದಲ್ಲಿ ತಮಗೆ 50 ಸಾವಿರ ಸ್ಟೈಫಂಡ್​​ ಜೊತೆಗೆ ವರ್ಕ್​​-ಲೈಫ್​ ಸಮದೂಗಿಸಲು 5 ಗಂಟೆ ಮಾತ್ರ ಕೆಲಸದ ಅವಧಿ ನಿಗದಿಸಬೇಕು ಎಂದಿದ್ದಾರೆ.

ಅಷ್ಟೇ ಅಲ್ಲದೇ, ಅಭ್ಯರ್ಥಿ ಎಂಎನ್​ಸಿ ಸಂಸ್ಕೃತಿಯನ್ನು ಇಷ್ಟ ಪಡುವುದಿಲ್ಲ ಎಂದಿದ್ದು, ಸ್ಟಾರ್ಟ್​​ ಅಪ್​ನಲ್ಲಿ ಕೆಲಸ ಮಾಡುವ ಆದ್ಯತೆ ಹೊಂದಿರುವುದಾಗಿ ತಿಳಿಸಿದ್ದಾರೆ. ಜೊತೆಗೆ 40 ರಿಂದ 50 ಸಾವಿರ ವೇತನ ಬೇಕು ಎಂದ ಅವರನ್ನು ಭವಿಷ್ಯದ ಕೆಲಸದಲ್ಲಿ ದೇವರು ಕಾಪಾಡಲಿ ಎಂದು ಬರೆದುಕೊಂಡಿದ್ದಾರೆ ಖಾನ್​

ಈ ಪೋಸ್ಟ್​ ಬಳಿಕ ಇದೀಗ ಟ್ವಿಟರ್​ನಲ್ಲಿ ಜೆನ್​-ಜೆಡ್​ ಪೀಳಿಗೆ ಮನಸ್ಥಿತಿ ಕುರಿತು ಮತ್ತು ಅವರ ವೃತ್ತಿ- ಕೆಲಸದ ನಡುವಿನ ಸಮತೋಲನ ಕುರಿತು ಹೆಚ್ಚು ಚರ್ಚೆಯಾಗುತ್ತಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಬಳಕೆದಾರರೊಬ್ಬರು, ವಾವ್!​ ಜೆನ್​ ಜೆಡ್​ ಇಂಟರ್ನ್​​ಗಳು ಈಗಾಗಲೇ ಅಸಾಧ್ಯವಾದ ಬೇಡಿಕೆ ಇಡುವುದರಲ್ಲಿ ಪರಿಣಿತರಾಗಿದ್ದಾರೆ ಎಂದಿದ್ದಾರೆ. 5 ಗಂಟೆಗಳ ಕೆಲಸಕ್ಕೆ ನಿಮಗೆ 40-50 ಸಾವಿರ ಪಾವತಿಸುವ ಪ್ರಾರಂಭವನ್ನು ಹುಡುಕುವಲ್ಲಿ ಅದೃಷ್ಟ. ನೀವು ಅದರಲ್ಲಿರುವಾಗ ಯುನಿಕಾರ್ನ್ ಕಂಡುಬಂದರೆ ನನಗೆ ತಿಳಿಸಿ ಎಂದಿದ್ದಾರೆ.

ಮತ್ತೊಬ್ಬ ಬಳಕೆದಾರರು, ನಿಜಕ್ಕೂ ಸತ್ಯ! ಈಗಷ್ಟೆ ನನಗಿಂತ ಚಿಕ್ಕ ಕಸಿನ್​ ಬೇಟಿಯಾದೆ. ಅವರು 9-5ರ ಕೆಲಸವನ್ನು ತಿರಸ್ಕರಿಸಿದ್ದಾರೆ. ಇದಕ್ಕೆ ಕಾರಣ, ಈ ಸಮಯದ ಅವಧಿ ಅವರ ಪ್ರೈಮ್​ ಗೇಮಿಂಗ್​ ಸಮಯವನ್ನು ಹಾಳುಮಾಡುತ್ತದೆ ಅಂತೆ. ಭವಿಷ್ಯವೂ ಆಕರ್ಷಕವಾಗಿದೆ ಎಂದಿದ್ದಾರೆ.

ಇದರ ಹೊರತಾಗಿ ಕೆಲವು ಗುಂಪುಗಳ ಜನರು ಜೆನ್​ ಜೆಡ್​ನ ಈ ಕೆಲಸದ ಪರಿಕಲ್ಪನೆಗೆ ಒಪ್ಪಿಗೆ ಸೂಚಿಸಿದೆ. ಈ ಸಂಬಂಧ ಟ್ವೀಟ್​ ಮಾಡಿರುವ ಒಬ್ಬರು, ಆಸಕ್ತಿಕರ ನಡಿಗೆ! ಸತ್ಯಾಂಶವನ್ನು ಇಷ್ಟಪಡುತ್ತೇನೆ. ಅವರ ಪ್ರಾಮುಖ್ಯತೆ ಮತ್ತು ಮೌಲ್ಯಕ್ಕೆ ಅವರು ಸಮಯ ನೀಡುತ್ತಿದ್ದು, ವೃತ್ತಿ ಮತ್ತು ಕೆಲಸವನ್ನು ಸಮದೂಗಿಸಲು ನೋಡುತ್ತಿದ್ದಾರೆ. ಇದು ಬಹುತೇಕ ಭಾರತೀಯರಲ್ಲಿ ಇಲ್ಲ. ಅವರು ಸಮಯ ಕಳೆದಂತೆ ಕೆಲವನ್ನು ಕಲಿಯುತ್ತಾರೆ. ಇದರಲ್ಲಿ ನಗುವ ಅವಶ್ಯಕತೆ ಇಲ್ಲ ಎಂದಿದ್ದಾರೆ.

ಸದ್ಯ ಈ ಪೋಸ್ಟ್​ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, 6 ಸಾವಿರಕ್ಕೂ ಹೆಚ್ಚು ಲೈಕ್ಸ್​ ಪಡೆದಿದೆ.

ಯಾರಿದು ಜೆನ್​ ಜೆಡ್​: ಜನರೇಷನ್​ ಜೆಡ್​ ಅಥವಾ ಜೆಡ್​ ಪೀಳಿಗೆ ಎಂದರೆ 1990 ಅಥವಾ 1995ರ ಬಳಿಕ ಮತ್ತು 2000 ಇಸವಿ ಒಳಗೆ ಜನಿಸಿದ ಪೀಳಿಗೆ ಆಗಿದೆ. ಹೊಸ ತಂತ್ರಜ್ಞಾನವನ್ನು ಬಳಕೆ ಮಾಡುವಲ್ಲಿ ಈ ಪೀಳಿಗೆ ಹೆಚ್ಚು ಆತ್ಮವಿಶ್ವಾಸ ಮತ್ತು ಸಮರ್ಥವಾಗಿದೆ ಎಂದು ತಿಳಿಸಲಾಗಿದೆ.

ಇದನ್ನೂ ಓದಿ: iPhoneನ 5ನೇ ಅತಿದೊಡ್ಡ ಮಾರುಕಟ್ಟೆ ಭಾರತ: ಶೇ 68ರಷ್ಟು ಮಾರಾಟ ವೃದ್ಧಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.