ವಾಟ್ಸ್ಆ್ಯಪ್ನ ಹೊಸ ಅಪ್ಡೇಟ್ನಲ್ಲಿ ಬಳಕೆದಾರರು ತಮ್ಮ ವಾಯ್ಸ್ ನೋಟ್ಸ್, ಫೋಟೋಗಳು ಮತ್ತು ಮೆಸೇಜ್ಗಳನ್ನು ಒಳಗೊಂಡಂತೆ ಚಾಟ್ ಹಿಸ್ಟ್ರಿಯನ್ನು ಐಒಎಸ್ ಮತ್ತು ಆ್ಯಂಡ್ರಾಯ್ಡ್ ನಡುವೆ ವರ್ಗಾವಣೆ ಮಾಡಿಕೊಳ್ಳಬಹುದು. ಆಗಸ್ಟ್ 11 ಬುಧವಾರ ಸ್ಯಾಮ್ಸಂಗ್ ಗ್ಯಾಲಕ್ಸಿ ಫೋನ್ನ ಬಿಡುಗಡೆ ಕಾರ್ಯಕ್ರಮದಲ್ಲಿ ವಾಟ್ಸ್‌ಆ್ಯಪ್ ಈ ಫೀಚರ್ ಘೋಷಣೆ ಮಾಡಿದೆ.
ಈ ಹೊಸ ಅಪ್ಡೇಟ್ ಐಒಎಸ್ ಫೋನ್ನಿಂದ ಸ್ಯಾಮ್ಸಂಗ್ ಝೆಡ್ ಫೋಲ್ಡ್ 3 ಮತ್ತು ಫ್ಲಿಪ್ 3 ಹಾಗೂ ಮುಂದೆ ಬಿಡುಗೆಯಾಗುವ ಎಲ್ಲಾ ಫೋನ್ಗಳಲ್ಲಿ ಇರಲಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಡಿವಾಯ್ಸ್ಗಳಲ್ಲಿ ಈ ಫೀಚರ್ ಅಪ್ಡೇಟ್ ಮಾಡಲು ವಾಟ್ಸ್‌ಆ್ಯಪ್ ಚಿಂತನೆ ನಡೆಸಿದೆ. ಅದರ ನಿಖರ ದಿನಾಂಕ ತಿಳಿಸಿಲ್ಲ.
ಈ ಹೊಸ ಅಪ್ಡೇಟ್ನಿಂದ ಐಒಎಸ್ ಮತ್ತು ಆಂಡ್ರಾಯ್ಡ್ ವಾಟ್ಸ್‌ಆ್ಯಪ್ ಬಳಕೆದಾರರು ಎದುರಿಸುತ್ತಿದ್ದ ಚಾಟ್ ವರ್ಗಾವಣೆಯ ದೊಡ್ಡ ಕಿರಿಕಿರಿ ತಪ್ಪಲಿದೆ. ಈ ಫೀಚರ್ ಎನೇಬಲ್ ಆಗಿರುವುದಿಲ್ಲ.
ಹೊಸ ಅಪ್ಡೇಟ್ಗಿಂತ ಮೊದಲು ಐಫೋನ್ನಲ್ಲಿ ವಾಟ್ಸ್‌ಆ್ಯಪ್ ಬಳಸುವ ವ್ಯಕ್ತಿ ಬ್ಯಾಕಪ್ ಮಾಡಿದರೆ, ಐಒಎಸ್ ಚಾಟ್ ಹಿಸ್ಟ್ರಿ ಐಕ್ಲೌಡ್ನಲ್ಲಿ ಸೇವ್ ಆಗುತ್ತಿತ್ತು. ಆಂಡಾಯ್ಡ್ ಬಳಕೆದಾರ ಬ್ಯಾಕಪ್ ಮಾಡಿದರೆ ಚಾಟ್ ಹಿಸ್ಟ್ರಿ ಗೂಗಲ್ ಡ್ರೈವ್ನಲ್ಲಿ ಸೇವ್ ಆಗುತ್ತಿತ್ತು. ಅಲ್ಲಿಂದ ವಾಟ್ಸ್‌ಆ್ಯಪ್ ಡೇಟಾವನ್ನು ಇತರ ಒಎಸ್ ಫೋನ್ಗಳಿಗೆ ವರ್ಗಾಯಿಸಲು ಬಳಕೆದಾರರಿಗೆ ಅವಕಾಶ ಇರಲಿಲ್ಲ. ಒಂದೇ ಆಪರೇಟಿಂಗ್ ಸಿಸ್ಟಮ್ ಹೊಂದಿರುವವರಿಗೆ ಮಾತ್ರ ಸಾಧ್ಯವಿತ್ತು.
ಹೊಸ ಅಪ್ಡೇಟ್ನಲ್ಲಿ ಚಾಟ್ ಹಿಸ್ಟ್ರಿಯನ್ನು ಐಒಎಸ್ ಮತ್ತು ಆಂಡ್ರಾಯ್ಡ್ ನಡುವೆ ವರ್ಗಾವಣೆ ಮಾಡಿಕೊಳ್ಳಬಹುದು.