ETV Bharat / science-and-technology

ವಾಟ್ಸ್​ಆ್ಯಪ್ ಹೊಸ ಫೀಚರ್: ಕಳುಹಿಸಿದ ಮೆಸೇಜ್ ಮತ್ತೆ ಎಡಿಟ್​ ಮಾಡಬಹುದು!

ವಾಟ್ಸ್​ಆ್ಯಪ್​ನಲ್ಲಿ ಒಮ್ಮೆ ಕಳುಹಿಸಲಾದ ಮೆಸೇಜನ್ನು ಮತ್ತೆ ಎಡಿಟ್ ಮಾಡುವ ಸೌಲಭ್ಯ ಇನ್ನು ಮುಂದೆ ಸಿಗಲಿದೆ. ವಾಟ್ಸ್​ಆ್ಯಪ್ ಇದಕ್ಕಾಗಿ ಹೊಸ ಅಪ್ಡೇಟ್​ ಒಂದನ್ನು ನೀಡಲಿದೆ.

WhatsApp to soon allow users to edit their messages even after it is sent;

author img

By

Published : Mar 28, 2023, 6:27 PM IST

ನವದೆಹಲಿ : ವಾಟ್ಸ್​ಆ್ಯಪ್​ ಬಳಕೆದಾರರು ಶೀಘ್ರದಲ್ಲೇ ತಾವು ಕಳುಹಿಸಿದ ಮೆಸೇಜುಗಳನ್ನು ಎಡಿಟ್​ ಮಾಡುವ ವೈಶಿಷ್ಟ್ಯ ಪಡೆಯಲಿದ್ದಾರೆ. ಈ ವೈಶಿಷ್ಟ್ಯಕ್ಕಾಗಿ ಬಳಕೆದಾರರು ಬಹಳ ಸಮಯದಿಂದಲೂ ಕಾಯುತ್ತಿದ್ದರು. iOS 23.6.0.74 ಅಪ್‌ಡೇಟ್‌ಗಾಗಿ ಇತ್ತೀಚಿನ WhatsApp ಬೀಟಾ ಹೊಸ ಅಲರ್ಟ್ ನೀಡುವ ವ್ಯವಸ್ಥೆಯೊಂದನ್ನು ತಯಾರಿಸುತ್ತಿದೆ. ಬಳಕೆದಾರರು ತಾವು ಮೆಸೇಜ್ ಒಂದನ್ನು ಎಡಿಟ್ ಮಾಡಿದಾಗ ಹಾಗೂ ಅದು ಚಾಟ್​ನಲ್ಲಿರುವ ಎಲ್ಲರಿಗೂ ತಲುಪಿದೆ ಎಂಬುದನ್ನು ತಿಳಿಸಲಿದೆ ಈ ಅಲರ್ಟ್. ಈ ವಾಟ್ಸ್​ಆ್ಯಪ್ ವೈಶಿಷ್ಟ್ಯವು ಯಾವುದೇ ತಪ್ಪುಗಳನ್ನು ತ್ವರಿತವಾಗಿ ಮತ್ತು ಸುಲಭವಾಗಿ ಸರಿಪಡಿಸಲು ಬಳಕೆದಾರರಿಗೆ ಅವಕಾಶ ನೀಡಲಿದೆ.

ವರದಿಯ ಪ್ರಕಾರ, ಬಳಕೆದಾರರು ತಮ್ಮ ಮೆಸೇಜ್​ಗಳನ್ನು ಕಳುಹಿಸಿದ 15 ನಿಮಿಷಗಳಲ್ಲಿ ಎಡಿಟ್ ಮಾಡಲು ಸಾಧ್ಯವಾಗಲಿದೆ ಮತ್ತು ಎಡಿಟ್ ಮಾಡಿದ ಮೆಸೇಜುಗಳನ್ನು ಬಬಲ್‌ನಲ್ಲಿ ಎಡಿಟೆಡ್ (edited) ಲೇಬಲ್‌ನೊಂದಿಗೆ ಗುರುತಿಸಲಾಗುತ್ತದೆ. ಇದು ಮೆಸೇಜ್​ಗಳಲ್ಲಿ 'ಫಾರ್ವರ್ಡ್ ಮಾಡಲಾದ' (Forwarded) ಟ್ಯಾಗ್ ಅನ್ನು ಹೋಲುತ್ತದೆ. ಆದಾಗ್ಯೂ, ಈ ವೈಶಿಷ್ಟ್ಯ ಬಳಸಲು ಒಂದು ಷರತ್ತಿದೆ. ಈ ವೈಶಿಷ್ಟ್ಯವು ವಾಟ್ಸ್​ಆ್ಯಪ್​​ನ ಇತ್ತೀಚಿನ ಆವೃತ್ತಿಯಲ್ಲಿರುವ ಬಳಕೆದಾರರಿಗೆ ಮಾತ್ರ ಲಭ್ಯವಿರುತ್ತದೆ.

ಹಳೆಯ ಆವೃತ್ತಿಯನ್ನು ಬಳಸುತ್ತಿರುವವರು ಈ ವೈಶಿಷ್ಟ್ಯದೊಂದಿಗೆ ಹೊಂದಿಕೊಳ್ಳುವ ಇತ್ತೀಚಿನ ಆವೃತ್ತಿಗೆ ಅಪ್‌ಗ್ರೇಡ್ ಮಾಡುವವರೆಗೆ ಎಡಿಟೆಡ್​ ಮೆಸೇಜುಗಳನ್ನು ನೋಡಲು ಸಾಧ್ಯವಾಗುವುದಿಲ್ಲ. ಅಂದರೆ ನಿಮ್ಮ ಫೋನ್‌ನಲ್ಲಿ ಈ ಹೊಸ ವೈಶಿಷ್ಟ್ಯವು ಸಕ್ರಿಯವಾಗಿದ್ದರೂ ಸಹ, ಮೆಸೇಜನ್ನು ಸ್ವೀಕರಿಸುವವರು ಅಪ್ಲಿಕೇಶನ್‌ನ ನವೀಕರಿಸಿದ ಆವೃತ್ತಿಯನ್ನು ಹೊಂದಿದ್ದರೆ ಮಾತ್ರ ತಿದ್ದುಪಡಿ ಮಾಡಿದ್ದು ಕಾಣಿಸುತ್ತದೆ.

ವಾಟ್ಸ್​ಆ್ಯಪ್ ಇತ್ತೀಚೆಗೆ ವಿಂಡೋಸ್ ಬಳಕೆದಾರರಿಗಾಗಿ ಹೊಸ ಅಪ್ಲಿಕೇಶನ್ ಒಂದನ್ನು ಘೋಷಿಸಿದೆ. ವಿಂಡೋಸ್ ಡೆಸ್ಕ್‌ಟಾಪ್ ಅಪ್ಲಿಕೇಶನ್‌ನ ಈ ಹೊಸ ಆವೃತ್ತಿಯು ವೇಗವಾಗಿ ಲೋಡ್ ಆಗುತ್ತದೆ ಮತ್ತು ವಾಟ್ಸ್​ ಆ್ಯಪ್ ಮತ್ತು ವಿಂಡೋಸ್ ಬಳಕೆದಾರರಿಗೆ ಬಳಸಲು ಸುಲಭವಾಗಿರುವಂತೆ ಇಂಟರ್‌ಫೇಸ್‌ನೊಂದಿಗೆ ನಿರ್ಮಿಸಲಾಗಿದೆ. ಬಳಕೆದಾರರು 8 ಜನರೊಂದಿಗೆ ಗ್ರೂಪ್ ವೀಡಿಯೊ ಕರೆಗಳನ್ನು ಮತ್ತು 32 ಜನರೊಂದಿಗೆ ಆಡಿಯೊ ಕರೆಗಳನ್ನು ಹೋಸ್ಟ್ ಮಾಡಬಹುದು. ಕಾಲಾನಂತರದಲ್ಲಿ ಈ ಮಿತಿಗಳನ್ನು ಹೆಚ್ಚಿಸಲಾಗುವುದು ಎಂದು ವಾಟ್ಸ್​ಆ್ಯಪ್ ಹೇಳಿದೆ.

ವಾಟ್ಸ್​ಆ್ಯಪ್​ನಲ್ಲಿ ಮತ್ತಷ್ಟು ಹೊಸ ಫೀಚರ್​ಗಳು: ಆ್ಯಂಡ್ರಾಯ್ಡ್​, iOS ಮತ್ತು ವಿಂಡೋಸ್ ಸಾಧನಗಳಲ್ಲಿನ ಬಳಕೆದಾರರಿಗಾಗಿ ವಾಟ್ಸ್​ಆ್ಯಪ್ ಹಲವಾರು ಹೊಸ ವೈಶಿಷ್ಟ್ಯಗಳನ್ನು ಸೇರಿಸಿದೆ. ಮೆಟಾ ಮಾಲೀಕತ್ವದ ತ್ವರಿತ ಸಂದೇಶ ಪ್ಲಾಟ್​ಫಾರ್ಮ್ ಆಗಿರುವ ವಾಟ್ಸ್​ಆ್ಯಪ್ ಬಳಕೆದಾರರ ಅನುಭವವನ್ನು ಸುಧಾರಿಸಲು ಮತ್ತು ಪ್ಲಾಟ್‌ಫಾರ್ಮ್‌ನಲ್ಲಿ ಸಂವಹನವನ್ನು ಉತ್ತಮಗೊಳಿಸಲು ಹೊಸ ಅಪ್‌ಗ್ರೇಡ್ ಅನ್ನು ಹೊರತಂದಿದೆ.ಇದರ ಮುಂದುವರಿದ ಭಾಗವಾಗಿ ವಾಟ್ಸ್​ಆ್ಯಪ್ ಐಫೋನ್ ಬಳಕೆದಾರರಿಗಾಗಿ ಹೊಸ ವೈಶಿಷ್ಟ್ಯವನ್ನು ಅಭಿವೃದ್ಧಿಪಡಿಸುತ್ತಿದೆ. ಅದು ಪರಸ್ಪರ ಸಂಕ್ಷಿಪ್ತ ವೀಡಿಯೊ ಚಾಟ್‌ಗಳನ್ನು ಕಳುಹಿಸಲು ಅನುವು ಮಾಡಿಕೊಡಲಿದೆ.

ಕ್ಯಾಮರಾ ಬಟನ್ ಅನ್ನು ಒತ್ತುವ ಮೂಲಕ, ವಾಟ್ಸ್​ಆ್ಯಪ್​ನ ಹೊಸ ವೀಡಿಯೊ ಸಂದೇಶದ ವೈಶಿಷ್ಟ್ಯದ ಬಳಕೆದಾರರು ತಮ್ಮ ಸ್ನೇಹಿತರಿಗೆ 60 ಸೆಕೆಂಡುಗಳವರೆಗೆ ಇರಬಹುದಾದ ಸಂಕ್ಷಿಪ್ತ ವೀಡಿಯೊಗಳನ್ನು ಕಳುಹಿಸಲು ಸಾಧ್ಯವಾಗುತ್ತದೆ. ಇದು ಟೆಲಿಗ್ರಾಮ್‌ನ ವೀಡಿಯೊ ನೋಟ್ಸ್ ಮಾದರಿಯಲ್ಲಿ ಕೆಲಸ ಮಾಡಲಿದೆ. ಮೂಲಗಳ ಪ್ರಕಾರ, ಈ ಕಾರ್ಯವನ್ನು ಪ್ರಸ್ತುತ ವಾಟ್ಸ್​ಆ್ಯಪ್ iOS ಅಪ್ಲಿಕೇಶನ್‌ಗಾಗಿ ತಯಾರು ಮಾಡಲಾಗುತ್ತಿದೆ ಮತ್ತು ವಾಟ್ಸ್​ಆ್ಯಪ್​​ನ ಮುಂದಿನ ಬಿಡುಗಡೆಗಳಲ್ಲಿ ಮತ್ತು ಪರೀಕ್ಷೆಗಾಗಿ ಎಲ್ಲರಿಗೂ ಲಭ್ಯವಾಗುವಂತೆ ಮಾಡಲಾಗುವುದು.

ಇದನ್ನೂ ಓದಿ: ತಾನಾಗಿಯೇ ಇಂಟರ್ನೆಟ್​ ಬ್ರೌಸ್​ ಮಾಡುತ್ತೆ ಚಾಟ್​ಜಿಪಿಟಿ: ಹೊಸ ಪ್ಲಗಿನ್ ಕೈಚಳಕ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.