ವಾಶಿಂಗ್ಟನ್(ಅಮೆರಿಕ): 2020 ರಲ್ಲಿ ಕಣ್ಮರೆಯಾಗುವ ಸಂದೇಶಗಳ (disappearing messages) ವೈಶಿಷ್ಟ್ಯ ಪರಿಚಯಿಸಿದ ಸೇರಿಸಿದ ನಂತರ ವಾಟ್ಸ್‌ಆ್ಯಪ್ ಈಗ ಇದರ ಮುಂದಿನ ಹಂತದ ಮೇಲೆ ಕೆಲಸ ಮಾಡುತ್ತಿದೆ. ಸಂದೇಶ ಕಣ್ಮರೆಯಾಗುವ ಅವಧಿಯನ್ನು ಆರಂಭದಲ್ಲಿ ವಾಟ್ಸ್‌ಆ್ಯಪ್ 7 ದಿನ ಮಾತ್ರ ಇಟ್ಟಿತ್ತು. ಆದರೆ ನಂತರ ಅದನ್ನು 24 ಗಂಟೆಯಿಂದ 90 ದಿನಗಳವರೆಗೆ ಅವಧಿಯನ್ನು ಸೆಟಿಂಗ್ ಮಾಡುವ ಆಯ್ಕೆಯನ್ನು ನೀಡಿದೆ.
ಆದರೆ ಈಗ ಒಂದು ಬಾರಿ ಓದಿದ ನಂತರ ಮೆಸೇಜ್ ಕಾಣೆಯಾಗುವ ಫೀಚರ್ ಅನ್ನು ವಾಟ್ಸ್‌ಆ್ಯಪ್ ಪರಿಚಯಿಸಲಿದೆ ಎನ್ನಲಾಗಿದೆ. ಹೊಸ ಫೀಚರ್ ಆ್ಯಂಡ್ರಾಯ್ಡ್ ವಾಟ್ಸ್ ಆ್ಯಪ್ ಬೀಟಾ ವರ್ಷನ್ 2.22.25.20 ನಲ್ಲಿ ಪರಿಚಯಿಸಲಾಗಿದೆ. ಒಂದು ಬಾರಿ ಇಂಥ ಮೆಸೇಜ್ ಕಳುಹಿಸಿದ ನಂತರ ಮೆಸೇಜ್ ಪಡೆದವರು ಅದನ್ನು ಶೇರ್ ಮಾಡಲು ಅಥವಾ ಫಾರ್ವರ್ಡ್ ಮಾಡಲು ಸಾಧ್ಯವಿಲ್ಲ.
ವಾಟ್ಸ್‌ಆ್ಯಪ್ ಈಗಾಗಲೇ ಫೋಟೋಗಳು ಮತ್ತು ವಿಡಿಯೊಗಳಿಗಾಗಿ ಈ ವೈಶಿಷ್ಟ್ಯವನ್ನು ಹೊಂದಿದೆ. ಬಳಕೆದಾರರು ವೀವ್ ಒನ್ಸ್ ಫೋಟೊ ಅಥವಾ ವಿಡಿಯೋವನ್ನು ಕಳುಹಿಸಿದಾಗ, ಇನ್ನೊಂದು ತುದಿಯಲ್ಲಿರುವ ವ್ಯಕ್ತಿಯು ಅದರ ಸ್ಕ್ರೀನ್‌ಶಾಟ್ ತೆಗೆದುಕೊಳ್ಳಲು ಸಾಧ್ಯವಿಲ್ಲ; ಬಹುಶಃ ಮೆಸೇಜ್ಗಳಿಗಾಗಿ ಸಹ ಇದೇ ತಂತ್ರಜ್ಞಾನವನ್ನು ಬಳಸಲಾಗುತ್ತದೆ.
ಇದನ್ನೂ ಓದಿ: Facebookನಲ್ಲಿ ಬೆತ್ತಲಾಗಿ ಹಣ ಕೀಳ್ತಾರೆ ಚೆಂದುಳ್ಳಿ ಚೆಲುವೆಯರು; ಬೆಳಗಾವಿಯಲ್ಲಿ Online ಹನಿಟ್ರ್ಯಾಪ್ ಗ್ಯಾಂಗ್!