ETV Bharat / science-and-technology

ಸಿಂಗಾಪುರದಲ್ಲಿಯೂ ಇನ್ - ಆ್ಯಪ್ ಪೇಮೆಂಟ್​ ಆರಂಭಿಸಲಿದೆ ವಾಟ್ಸ್​ಆ್ಯಪ್

author img

By

Published : May 10, 2023, 4:55 PM IST

ಭಾರತ ಮತ್ತು ಬ್ರೆಜಿಲ್ ನಂತರ ಈಗ ಸಿಂಗಾಪುರದಲ್ಲಿಯೂ ವಾಟ್ಸ್​ಆ್ಯಪ್ ಇನ್ ಆ್ಯಪ್ ಪೇಮೆಂಟ್​ಗಳನ್ನು ಆರಂಭಿಸುವುದಾಗಿ ಹೇಳಿದೆ.

whatsapp business payment in singapore WhatsApp New Features

ಸ್ಯಾನ್​ ಫ್ರಾನ್ಸಿಸ್ಕೊ : ಭಾರತ ಮತ್ತು ಬ್ರೆಜಿಲ್​ನಲ್ಲಿನ ತನ್ನ ಬಳಕೆದಾರರಿಗೆ ಇನ್​ - ಆ್ಯಪ್​ ಪೇಮೆಂಟ್​ ಸೌಲಭ್ಯ ಪರಿಚಯಿಸಿದ ನಂತರ, ಮೆಟಾ ಒಡೆತನದ ವಾಟ್ಸ್​ಆ್ಯಪ್ ಈಗ ಈ ಸೌಲಭ್ಯವನ್ನು ಸಿಂಗಾಪುರದಲ್ಲಿಯೂ ಆರಂಭಿಸಲಿದೆ. ಮೆಟಾದಲ್ಲಿ ವಾಣಿಜ್ಯ ಮತ್ತು ಹಣಕಾಸು ತಂತ್ರಜ್ಞಾನಗಳ ಮುಖ್ಯಸ್ಥ ಸ್ಟೀಫನ್ ಕ್ಯಾಸ್ರಿಯೆಲ್ ಅವರು ಮಂಗಳವಾರ ಈ ಬಗ್ಗೆ ಟ್ವೀಟ್ ಮಾಡಿದ್ದು, "ಸಿಂಗಾಪುರದಲ್ಲಿನ ವಾಟ್ಸ್​ಆ್ಯಪ್ ಬಳಕೆದಾರರು ಈಗ ಸ್ಥಳೀಯ ವ್ಯಾಪಾರಗಳಿಗೆ ಸರಕು ಮತ್ತು ಸೇವೆಗಳಿಗೆ ತಾವು ಬಯಸಿದಾಗ ಸರಳ ಮತ್ತು ಸುರಕ್ಷಿತವಾಗಿ ವಾಟ್ಸ್​ಆ್ಯಪ್ ಚಾಟ್‌ಗಳಲ್ಲಿ ಪೇಮೆಂಟ್ ಮಾಡಬಹುದು" ಎಂದು ಹೇಳಿದ್ದಾರೆ.

ಈ ಕ್ಷೇತ್ರದಲ್ಲಿ ಸೌಲಭ್ಯಗಳನ್ನು ಆರಂಭಿಸಲು ಮೆಟಾ, ಐರಿಷ್ ಅಮೆರಿಕನ್ ಹಣಕಾಸು ಕಂಪನಿ ಸ್ಟ್ರೈಪ್​ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ವಾಟ್ಸ್​ಆ್ಯಪ್ ಈ ಪೇಮೆಂಟ್ ವೈಶಿಷ್ಟ್ಯವನ್ನು ಸ್ಟ್ರೈಪ್ ಕನೆಕ್ಟ್ ಮತ್ತು ಸ್ಟ್ರೈಪ್ ಚೆಕೌಟ್ ಗಳೊಂದಿಗೆ ತಯಾರಿಸಿದೆ. ಹೀಗಾಗಿ ಆನ್ಲೈನ್ ಹಾಗೂ ಆಫ್ಲೈನ್ ಎರಡರ ಮೂಲಕವೂ ಇನ್-ಆ್ಯಪ್ ಪೇಮೆಂಟ್ ಮಾಡಬಹುದಾಗಿದೆ. ಗ್ರಾಹಕರು ಸಿಂಗಾಪುರದಲ್ಲಿ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಅಥವಾ ಪೆನಾವೊ ಫಂಡ್ ಟ್ರಾನ್ಸ್‌ಫರ್ ಸಿಸ್ಟಮ್‌ನೊಂದಿಗೆ ವ್ಯವಹಾರಗಳಿಗೆ ಪಾವತಿಸಬಹುದು ಎಂದು ವರದಿ ಹೇಳಿದೆ.

ಸಿಂಗಾಪೂರ್‌ನಲ್ಲಿ ನನಗೆ ತಿಳಿದಿರುವ ಹೆಚ್ಚಿನ ಜನರು ಪರಸ್ಪರ ಚಾಟ್ ಮಾಡಲು ವಾಟ್ಸ್​ಆ್ಯಪ್ ಅನ್ನು ಬಳಸುತ್ತಾರೆ ಎಂದು ಸ್ಟ್ರೈಪ್‌ನಲ್ಲಿನ ಆಗ್ನೇಯ ಏಷ್ಯಾದ ಪ್ರಾದೇಶಿಕ ಮುಖ್ಯಸ್ಥೆ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಸರಿತಾ ಸಿಂಗ್ ಹೇಳಿದರು. ಈಗ ಅವರು ಅಪ್ಲಿಕೇಶನ್ ಬಳಸಿ ಸ್ಥಳೀಯ ವ್ಯಾಪಾರಿಗಳಿಗೂ ಪೇಮೆಂಟ್ ಮಾಡಬಹುದು. ವಾಟ್ಸ್​​ಆ್ಯಪ್​​ ಮೂಲಕ ಪಾವತಿಗಳ ಹೊಸ ಚಾನಲ್‌ಗಳೊಂದಿಗೆ ತಮ್ಮ ಆದಾಯದ ಸ್ಟ್ರೀಮ್‌ಗಳನ್ನು ವಿಸ್ತರಿಸಲು ಮತ್ತು ವ್ಯಾಪಕವಾದ ಗ್ರಾಹಕರ ನೆಲೆಯನ್ನು ತಲುಪಲು ಸಹಾಯ ಮಾಡುತ್ತವೆ ಎಂದು ಅವರು ತಿಳಿಸಿದರು.

ಮೆಟಾ ಪ್ರಕಾರ, ವಾಟ್ಸ್​ಆ್ಯಪ್ ಮೂಲಕ ಪಾವತಿಗಳನ್ನು ಸ್ವೀಕರಿಸುವ ವೈಶಿಷ್ಟ್ಯವು ಪ್ರಸ್ತುತ ಕೆಲವು ವ್ಯವಹಾರಗಳಿಗೆ ಮಾತ್ರ ಲಭ್ಯವಿದೆ. ಮುಂಬರುವ ತಿಂಗಳುಗಳಲ್ಲಿ ಹೆಚ್ಚಿನ ವ್ಯಾಪಾರಿಗಳಿಗೆ ಲಭ್ಯತೆಯನ್ನು ವಿಸ್ತರಿಸಲು ಕಂಪನಿಯು ಯೋಜಿಸಿದೆ. ಏತನ್ಮಧ್ಯೆ, ಬಳಕೆದಾರರು ಈಗ ತನ್ನ ಬಹು ಸಾಧನ ಲಾಗಿನ್ ವೈಶಿಷ್ಟ್ಯದ ಮೂಲಕ ಒಂದಕ್ಕಿಂತ ಹೆಚ್ಚು ಫೋನ್‌ಗಳಲ್ಲಿ ಒಂದೇ ವಾಟ್ಸ್​ಆ್ಯಪ್ ಖಾತೆಯನ್ನು ಬಳಸಲು ಸಾಧ್ಯವಾಗುತ್ತದೆ ಎಂದು ವಾಟ್ಸ್​ಆ್ಯಪ್ ಘೋಷಿಸಿದೆ. ಬಳಕೆದಾರರು ಈಗ ತಮ್ಮ ಫೋನ್ ಅನ್ನು ನಾಲ್ಕು ಹೆಚ್ಚುವರಿ ಸಾಧನಗಳಲ್ಲಿ ಒಂದಾಗಿ ಲಿಂಕ್ ಮಾಡಬಹುದು.

ವಾಟ್ಸ್​ಆ್ಯಪ್ ಎಂಬುದು ಉಚಿತ ಕ್ರಾಸ್ ಪ್ಲಾಟ್‌ಫಾರ್ಮ್ ಸಂದೇಶ ಸೇವೆಯಾಗಿದೆ. ಇದು ಐಫೋನ್ ಮತ್ತು ಆ್ಯಂಡ್ರಾಯ್ಡ್​ ಸ್ಮಾರ್ಟ್‌ಫೋನ್‌ಗಳು ಮತ್ತು ಮ್ಯಾಕ್ ಮತ್ತು ವಿಂಡೋಸ್ ಪಿಸಿ ಬಳಕೆದಾರರಿಗೆ ಕರೆ ಮಾಡಲು ಮತ್ತು ಪ್ರಪಂಚದಾದ್ಯಂತ ಇತರರೊಂದಿಗೆ ಪಠ್ಯ, ಫೋಟೋ, ಆಡಿಯೋ ಮತ್ತು ವೀಡಿಯೊ ಸಂದೇಶಗಳನ್ನು ಉಚಿತವಾಗಿ ವಿನಿಮಯ ಮಾಡಿಕೊಳ್ಳಲು ಅವಕಾಶ ನೀಡುತ್ತದೆ. ಸಿಮ್ ಕಾರ್ಡ್, ಇಂಟರ್ನೆಟ್ ಸಂಪರ್ಕ ಮತ್ತು ಫೋನ್ ಸಂಖ್ಯೆಯನ್ನು ಹೊಂದಿರುವ ಯಾವುದೇ ಸ್ಮಾರ್ಟ್‌ಫೋನ್‌ನಲ್ಲಿ ವಾಟ್ಸ್​ಆ್ಯಪ್ ಅನ್ನು ಡೌನ್‌ಲೋಡ್ ಮಾಡಬಹುದು. ಒಮ್ಮೆ ಸ್ಮಾರ್ಟ್‌ಫೋನ್‌ನಲ್ಲಿ ಹೊಂದಿಸಿದರೆ, WhatsApp ಬಳಕೆದಾರರು ತಮ್ಮ ಖಾತೆಯನ್ನು ಟ್ಯಾಬ್ಲೆಟ್ ಅಥವಾ ಕಂಪ್ಯೂಟರ್‌ನಲ್ಲಿರುವ ಅಪ್ಲಿಕೇಶನ್‌ನ ಡೆಸ್ಕ್‌ಟಾಪ್ ಆವೃತ್ತಿಗೆ ಲಿಂಕ್ ಮಾಡಬಹುದು.

ಇದನ್ನೂ ಓದಿ : ಗುಪ್ತವಾಗಿ ಮೈಕ್ರೊಫೋನ್​ ಡೇಟಾ ಕದಿಯುತ್ತಿದೆಯಾ ವಾಟ್ಸ್​ಆ್ಯಪ್? ತನಿಖೆ ನಡೆಸುತ್ತೇವೆ ಎಂದ ಕೇಂದ್ರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.