ETV Bharat / science-and-technology

ಚಿತ್ರರಂಗಕ್ಕೆ ವಾಟ್ಸ್​​​ಆ್ಯಪ್ ಎಂಟ್ರಿ: ಸೆ.21 ರಂದು ಶಾರ್ಟ್​ಫಿಲ್ಮ್​ ಬಿಡುಗಡೆ - ಮೊದಲ ಒರಿಜಿನಲ್ ಶಾರ್ಟ್ ಫಿಲ್ಮ್ ನೈಜಾ ಓಡಿಸ್ಸಿ

ಅಂಟೆಟೊಕೊಂಪೊ ಇತ್ತೀಚೆಗೆ ವಾಟ್ಸ್​​​ಆ್ಯಪ್ ನೊಂದಿಗೆ ಜಾಹೀರಾತು ಒಪ್ಪಂದವೊಂದನ್ನು ಮಾಡಿಕೊಂಡಿದ್ದಾರೆ. ಹೀಗಾಗಿ ನೈಜಾ ಓಡಿಸ್ಸಿ ಇದು ವಾಟ್ಸ್​ ಆ್ಯಪ್ ಅನ್ನು ಪ್ರಚಾರ ಮಾಡುವ ತಂತ್ರವಾಗಿರಬಹುದು ಎನ್ನಲಾಗಿದೆ.

ವಾಟ್ಸ್​ ಆ್ಯಪ್
WhatsApp
author img

By

Published : Sep 17, 2022, 4:29 PM IST

ನವದೆಹಲಿ: ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಮೆಟಾ ಒಡೆತನದ ವಾಟ್ಸ್​ ಆ್ಯಪ್ ಚಲನಚಿತ್ರ ನಿರ್ಮಾಣ ಉದ್ಯಮಕ್ಕೆ ಕಾಲಿಡಲಿದೆ ಎಂಬ ಮಾಹಿತಿ ಬಂದಿದೆ. ವಾಟ್ಸ್​ ಆ್ಯಪ್ ತನ್ನ ಮೊದಲ ಒರಿಜಿನಲ್ ಶಾರ್ಟ್ ಫಿಲ್ಮ್ ನೈಜಾ ಓಡಿಸ್ಸಿ (Naija Odyssey) ಅನ್ನು ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ಯೂಟ್ಯೂಬ್​ಗಳಲ್ಲಿ ಬಿಡುಗಡೆ ಮಾಡಲಿದೆ. 12 ನಿಮಿಷದ ಶಾರ್ಟ್ ಫಿಲ್ಮ್ ಎನ್​ಬಿಎ ಆಟಗಾರ ಗಿಯಾನಿಸ್ ಅಂಟೆಟೊಕೊಂಪೊ ಅವರ ಕತೆಯನ್ನು ಹೇಳಲಿದೆ. ಗ್ರೀಸ್​ನಲ್ಲಿ ಹುಟ್ಟಿದ ಆಟಗಾರ ಗಿಯಾನಿಸ್ ತಂದೆ-ತಾಯಿ ನೈಜೀರಿಯಾದವರು.

ದಿ ಗ್ರೀಕ್ ಫ್ರೀಕ್. ಅದು ನಾನಲ್ಲ, ಅದರಲ್ಲಿರುವುದೆಲ್ಲ ನಾನಲ್ಲ. ನೈಜಾ ಓಡಿಸ್ಸಿ, ಗಿಯಾನಿಸ್ ಅವರ ಬಹು ಸಂಸ್ಕೃತಿಗಳ ಕತೆ. ವಾಟ್ಸ್​​ಆ್ಯಪ್ ನಿಂದ. ಸೆಪ್ಟೆಂಬರ್ 21ರಂದು ಪ್ರೈಮ್ ವಿಡಿಯೋ ಮೇಲೆ ಸ್ಟ್ರೀಮಿಂಗ್ ಎಂದು ವಾಟ್ಸ್​​ಆ್ಯಪ್ ಟ್ವೀಟ್ ಮಾಡಿದೆ.

ಅಂಟೆಟೊಕೊಂಪೊ ಇತ್ತೀಚೆಗೆ ವಾಟ್ಸ್​​ಆ್ಯಪ್ ನೊಂದಿಗೆ ಜಾಹೀರಾತು ಒಪ್ಪಂದವೊಂದನ್ನು ಮಾಡಿಕೊಂಡಿದೆ. ಹೀಗಾಗಿ ನೈಜಾ ಓಡಿಸ್ಸಿ ಇದು ವಾಟ್ಸ್​ ಆ್ಯಪ್ ಅನ್ನು ಪ್ರಚಾರ ಮಾಡುವ ತಂತ್ರವಾಗಿರಬಹುದು ಎನ್ನಲಾಗಿದೆ. ನಮ್ಮ ಬಹುಮುಖಿ ಜೀವನವನ್ನು ವಾಟ್ಸ್​​ಆ್ಯಪ್ ಹೇಗೆ ಸುಖಮಯಗೊಳಿಸುತ್ತದೆ ಎಂಬುದನ್ನು ನೈಜಾ ಓಡಿಸ್ಸಿ ಕತೆ ಹೇಳಲಿದೆ ಎನ್ನಲಾಗಿದೆ.

12 ನಿಮಿಷಗಳ ಚಲನಚಿತ್ರವು ಅದರ ಯೂಟ್ಯೂಬ್ ಚಾನೆಲ್ ಸೇರಿದಂತೆ ವಾಟ್ಸ್​​ಆ್ಯಪ್ ನ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿಯೂ ಬಿಡುಗಡೆಯಾಗಲಿದೆ.

ಇದನ್ನು ಓದಿ:ಹೊಸ ಫೀಚರ್ಸ್​ ಪರಿಚಯಿಸುತ್ತಿರುವ ಸ್ನ್ಯಾಪ್‌ಚಾಟ್‌: ವಿಶೇಷತೆ ಏನ್​ ಗೊತ್ತಾ ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.