ವಾಶಿಂಗ್ಟನ್ (ಅಮೆರಿಕ): ವಾಟ್ಸ್ ಆ್ಯಪ್ ಬಳಕೆದಾರರು ತಮ್ಮ ವಾಟ್ಸ್ ಆ್ಯಪ್ ಖಾತೆಯನ್ನು ಮತ್ತೊಂದು ಸೆಕೆಂಡರಿ ಫೋನ್ ಹಾಗೂ ಆ್ಯಂಡ್ರಾಯ್ಡ್ ಟ್ಯಾಬ್ಲೆಟ್ಗೆ ಲಿಂಕ್ ಮಾಡುವ ಸೌಲಭ್ಯವನ್ನು ನೀಡಲಿದೆ. ಸದ್ಯಕ್ಕೆ ಈ ಫೀಚರ್ ಬೀಟಾ ಯೂಸರ್ಸ್ಗೆ ಮಾತ್ರ ಲಭ್ಯವಿದೆ. ಮಾಧ್ಯಮ ವರದಿಯ ಪ್ರಕಾರ ಹೊಸ ವಾಟ್ಸ್ ಆ್ಯಪ್ ಬೀಟಾ ಆ್ಯಂಡ್ರಾಯ್ಡ್ ವರ್ಷನ್ 2.22.24.18 ನಲ್ಲಿ ಕಂಪ್ಯಾನಿಯನ್ ಮೋಡ್ ಇರಲಿದ್ದು, ಇದರ ಮೂಲಕ ಬಳಕೆದಾರರು ತಮ್ಮ ಪ್ರೈಮರಿ ಅಕೌಂಟಿಗೆ ಸೆಕೆಂಡರಿ ಫೋನ್ ಅನ್ನು ಕನೆಕ್ಟ್ ಮಾಡಬಹುದಾಗಿದೆ.
ವಾಟ್ಸ್ ಆ್ಯಪ್ ಬಳಕೆದಾರರು ತಮ್ಮ ಪ್ರಾಥಮಿಕ ಖಾತೆಗೆ ನಾಲ್ಕು ಆ್ಯಂಡ್ರಾಯ್ಡ್ ಫೋನ್ಗಳನ್ನು ಲಿಂಕ್ ಮಾಡಲು ಸಾಧ್ಯವಾಗಲಿದೆ ಮತ್ತು ಹೀಗೆ ಲಿಂಕ್ ಮಾಡಲಾದ ಎಲ್ಲ ಫೋನ್ಗಳಲ್ಲಿ ಎಲ್ಲ ಸಾಮಾನ್ಯ ಆ್ಯಂಡ್ರಾಯ್ಡ್ ಫೀಚರ್ಗಳನ್ನು ಪಡೆಯಬಹುದು ಮತ್ತು ಎಲ್ಲ ಮೆಸೇಜ್ ಎನ್ಕ್ರಿಪ್ಷನ್ ಆಗಿರುತ್ತವೆ. ಹೊಸ ಫೀಚರ್ನ ಬೀಟಾ ಬಳಕೆದಾರರು ರಜಿಸ್ಟ್ರೇಶನ್ ಸ್ಕ್ರೀನ್ ಮೇಲಿರುವ ಆಯ್ಕೆಗಳ ಮೆನುಗೆ ಹೋಗಿ ಮತ್ತು ಡ್ರಾಪ್ಡೌನ್ ಮೆನುವಿನಿಂದ 'Link a device' ಅನ್ನು ಆಯ್ಕೆ ಮಾಡುವ ಮೂಲಕ ಕಂಪ್ಯಾನಿಯನ್ ಮೋಡ್ ಅನ್ನು ಸಕ್ರಿಯಗೊಳಿಸಬಹುದು ಎಂದು ವರದಿ ತಿಳಿಸಿದೆ.
ಸದ್ಯಕ್ಕೆ ಈ ಫೀಚರ್ ಕೆಲವೇ ಬೀಟಾ ಯೂಸರ್ಸ್ಗೆ ನೀಡಲಾಗಿದೆ. ಇದು ವ್ಯಾಪಕವಾಗಿ ಲಭ್ಯವಾಗಲು ಕೆಲ ಸಮಯ ಬೇಕಾಗಲಿದೆ. ಈ ಹೊಸ ವಾಟ್ಸ್ ಆ್ಯಪ್ ಬೀಟಾ ಫೀಚರ್ ಆ್ಯಂಡ್ರಾಯ್ಡ್ ಟ್ಯಾಬ್ಲೆಟ್ ಅನ್ನು ಲಿಂಕ್ ಮಾಡುವ ಸೌಲಭ್ಯ ಕೂಡ ತರಲಿದೆ. ಈ ಪೇರಿಂಗ್ ಪ್ರೊಸೆಸ್ ತುಂಬಾ ಸರಳವಾಗಿದ್ದು, ಕೇವಲ ಕ್ಯೂಆರ್ ಕೋಡ್ ಸ್ಕ್ಯಾನ್ ಮೂಲಕ ಇದನ್ನು ಮಾಡಬಹುದು.
ತನ್ನ ಮುಂದಿನ ಅಪ್ಡೇಟ್ಗಳೊಂದಿಗೆ ಹೊಸ ಕಂಪ್ಯಾನಿಯನ್ ಮತ್ತು ಲಿಂಕ್ ಟ್ಯಾಬ್ಲೆಟ್ ಫೀಚರ್ಗಳನ್ನು ಬಳಕೆದಾರರಿಗೆ ಪರಿಚಯಿಸಲು ವಾಟ್ಸ್ಆ್ಯಪ್ ಯೋಜನೆ ಹಾಕಿಕೊಂಡಿದೆ ಎನ್ನಲಾಗಿದೆ. ಈಗ ವಾಟ್ಸ್ ಆ್ಯಪ್ ಬಳಕೆದಾರರು ಒಂದೇ ಸ್ಮಾರ್ಟ್ ಫೋನ್ನಲ್ಲಿ ತಮ್ಮ ಅಕೌಂಟ್ ಬಳಸಬಹುದಾಗಿದೆ. ಆದರೆ ಹೊಸ ಫೀಚರ್ ಬಂದ ನಂತರ ಲ್ಯಾಪ್ಟಾಪ್ ಹಾಗೂ ಟ್ಯಾಬ್ಲೆಟ್ ಸೇರಿದಂತೆ ಒಟ್ಟು ನಾಲ್ಕು ಡಿವೈಸ್ಗಳಲ್ಲಿ ಅಕೌಂಟ್ ಅನ್ನು ಬಳಸಬಹುದಾಗಿದೆ. ಹೊಸ ಫೀಚರ್ನಿಂದ ಜನರು ಎರಡು ಫೋನ್ಗಳಲ್ಲಿ ಒಂದೇ ವಾಟ್ಸಾಪ್ ಸಂಖ್ಯೆಗೆ ಲಾಗ್ ಇನ್ ಮಾಡಬಹುದು.
ಇದನ್ನೂ ಓದಿ: ಭಾರತದಲ್ಲಿ ಬರೋಬ್ಬರಿ 26.85 ಲಕ್ಷ WhatsApp ಖಾತೆ ಬ್ಯಾನ್!