ETV Bharat / science-and-technology

ಭಾರತದಲ್ಲಿ 45 ಲಕ್ಷಕ್ಕೂ ಅಧಿಕ ವಾಟ್ಸ್​ಆ್ಯಪ್ & 6.8 ಲಕ್ಷಕ್ಕೂ ಹೆಚ್ಚು ಟ್ವಿಟರ್ ಖಾತೆ ಬ್ಯಾನ್

ಮೆಟಾ ಒಡೆತನದ ವಾಟ್ಸ್​ಆ್ಯಪ್ ಹೊಸ ಐಟಿ ನಿಯಮಗಳು 2021 ರ ಅನುಸಾರವಾಗಿ ಫೆಬ್ರವರಿ ತಿಂಗಳಲ್ಲಿ ಭಾರತದಲ್ಲಿ 45 ಲಕ್ಷಕ್ಕೂ ಹೆಚ್ಚು ಖಾತೆಗಳನ್ನು ಮತ್ತು ಎಲೋನ್ ಮಸ್ಕ್ ಒಡೆತನದ ಟ್ವಿಟರ್ ಜನವರಿ 26 ಮತ್ತು ಫೆಬ್ರವರಿ 25 ರ ನಡುವೆ ಭಾರತದಲ್ಲಿ ದಾಖಲೆಯ 6.8 ಲಕ್ಷಕ್ಕೂ ಹೆಚ್ಚು ಖಾತೆಗಳನ್ನು ನಿಷೇಧಿಸಿದೆ. ಇದಕ್ಕೆ ಕಾರಣವೇನು ಗೊತ್ತೇ?

author img

By

Published : Apr 2, 2023, 9:55 AM IST

Representative image
ಪ್ರಾತಿನಿಧಿಕ ಚಿತ್ರ

ನವದೆಹಲಿ: ಹೊಸ ಐಟಿ ನಿಯಮಗಳು 2021ರ ಅನುಸಾರವಾಗಿ ಮೆಟಾ ಒಡೆತನದ ವಾಟ್ಸ್​ಆ್ಯಪ್ ಫೆಬ್ರವರಿ ತಿಂಗಳಲ್ಲಿ ಭಾರತದಲ್ಲಿ 45 ಲಕ್ಷಕ್ಕೂ ಹೆಚ್ಚು ಖಾತೆಗಳನ್ನು ನಿಷೇಧಿಸಿದೆ ಎಂದು ಕಂಪನಿ ಶನಿವಾರ ತಿಳಿಸಿದೆ. "ಫೆ.1 ರಿಂದ 28 ರ ನಡುವೆ 4,597,400 ವಾಟ್ಸ್​ಆ್ಯಪ್ ಖಾತೆಗಳನ್ನು ನಿಷೇಧಿಸಲಾಗಿದೆ ಮತ್ತು ಈ ಖಾತೆಗಳಲ್ಲಿ 1,298,000 ಬಳಕೆದಾರರಿಂದ ಯಾವುದೇ ಪ್ರತಿಕ್ರಿಯೆ ಬರುವ ಮೊದಲು ಪೂರ್ವಭಾವಿಯಾಗಿ ನಿಷೇಧಿಸಲಾಗಿದೆ" ಎಂದು ವಾಟ್ಸ್​ಆ್ಯಪ್ ತನ್ನ ಮಾಸಿಕ ಅನುಸರಣೆ ವರದಿಯಲ್ಲಿ ಮಾಹಿತಿ ನೀಡಿದೆ.

"ದೇಶದಲ್ಲಿ ಸುಮಾರು 500 ಮಿಲಿಯನ್ ಬಳಕೆದಾರರನ್ನು ಹೊಂದಿರುವ ಅತ್ಯಂತ ಜನಪ್ರಿಯ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸ್​ಆ್ಯಪ್. ಫೆಬ್ರವರಿಯಲ್ಲಿ ದೇಶದಲ್ಲಿ ದಾಖಲೆಯ 2,804 ದೂರುಗಳನ್ನು ಸ್ವೀಕರಿಸಿದೆ. ಈ ಬಳಕೆದಾರ-ಸುರಕ್ಷತಾ ವರದಿಯು ಸ್ವೀಕರಿಸಿದ ಬಳಕೆದಾರರ ದೂರುಗಳ ವಿವರಗಳನ್ನು ಮತ್ತು ವಾಟ್ಸ್​ಆ್ಯಪ್ ತೆಗೆದುಕೊಂಡ ಅನುಗುಣವಾದ ಕ್ರಮಗಳನ್ನು ಒಳಗೊಂಡಿದೆ. ಜತೆಗೆ ನಮ್ಮ ಪ್ಲಾಟ್‌ಫಾರ್ಮ್‌ನಲ್ಲಿ ನಿಂದನೆಯನ್ನು ತಡೆಗಟ್ಟುವ ಕ್ರಮಗಳನ್ನು ಒಳಗೊಂಡಿದೆ. ನಾವು ಪಾರದರ್ಶಕತೆಯೊಂದಿಗೆ ನಮ್ಮ ಕೆಲಸ ಮುಂದುವರಿಯುತ್ತೇವೆ ಮತ್ತು ಭವಿಷ್ಯದ ವರದಿಗಳಲ್ಲಿ ನಮ್ಮ ಪ್ರಯತ್ನಗಳ ಬಗ್ಗೆ ಮಾಹಿತಿಯನ್ನು ನೀಡುತ್ತೇವೆ" ಎಂದು ಕಂಪನಿಯ ವಕ್ತಾರರು ತಿಳಿಸಿದ್ದಾರೆ.

ಜಿಎಸಿ ರಚನೆ: ಈ ಮಧ್ಯೆ ಲಕ್ಷಾಂತರ ಭಾರತೀಯ ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಸಶಕ್ತಗೊಳಿಸುವ ಪ್ರಯತ್ನದಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ರಾಜ್ಯ ಖಾತೆ ಸಚಿವ ರಾಜೀವ್ ಚಂದ್ರಶೇಖರ್ ಅವರು ಇತ್ತೀಚೆಗೆ ಕುಂದುಕೊರತೆ ಮೇಲ್ಮನವಿ ಸಮಿತಿಯನ್ನು (ಜಿಎಸಿ) ರಚಿಸಿದ್ದಾರೆ. ಅದು ವಿಷಯ ಮತ್ತು ಇತರ ಸಮಸ್ಯೆಗಳ ಬಗ್ಗೆ ಪರಿಶೀಲಿಸುತ್ತದೆ.

ಹೊಸದಾಗಿ ರಚಿಸಲಾದ ಸಮಿತಿಯು ಬಿಗ್ ಟೆಕ್ ಕಂಪನಿಗಳನ್ನು ಪಳಗಿಸಲು ದೇಶದ ಡಿಜಿಟಲ್ ಕಾನೂನುಗಳನ್ನು ಬಲಪಡಿಸುವ ಕ್ರಮವಾಗಿದೆ. ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳ ನಿರ್ಧಾರಗಳ ವಿರುದ್ಧ ಬಳಕೆದಾರರ ಮನವಿಗಳನ್ನು ಪರಿಶೀಲಿಸುತ್ತದೆ. ಇತ್ತೀಚೆಗೆ ತಿದ್ದುಪಡಿ ಮಾಡಲಾದ ಐಟಿ ನಿಯಮಗಳು-2021ರ ಅಡಿಯಲ್ಲಿ ಅಗತ್ಯವಿರುವಂತೆ ಮೂರು ಜಿಎಸಿಗಳನ್ನು ಸ್ಥಾಪಿಸಲು ಐಟಿ ಸಚಿವಾಲಯ ಕಳೆದ ತಿಂಗಳು ಸೂಚನೆ ನೀಡಿದೆ. ಮುಕ್ತ, ಸುರಕ್ಷಿತ, ವಿಶ್ವಾಸಾರ್ಹ ಮತ್ತು ಉತ್ತರದಾಯಿತ್ವದ ಇಂಟರ್‌ನೆಟ್‌ನತ್ತ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯವು 'ಡಿಜಿಟಲ್ ನಾಗ್ರಿಕ್ಸ್' ಹಕ್ಕುಗಳನ್ನು ರಕ್ಷಿಸುವ ಗುರಿಯನ್ನು ಹೊಂದಿರುವ ಕೆಲವು ತಿದ್ದುಪಡಿಗಳನ್ನು ಹೊಂದಿದೆ.

6.8 ಲಕ್ಷಕ್ಕೂ ಹೆಚ್ಚು ಟ್ವಿಟರ್ ಖಾತೆ ನಿಷೇಧ: ಎಲೋನ್ ಮಸ್ಕ್ ಒಡೆತನದ ಟ್ವಿಟರ್ ಜನವರಿ 26 ಮತ್ತು ಫೆಬ್ರವರಿ 25 ರ ನಡುವೆ ಭಾರತದಲ್ಲಿ ಮಕ್ಕಳ ಲೈಂಗಿಕ ಶೋಷಣೆ ಮತ್ತು ಒಪ್ಪಿಗೆಯಿಲ್ಲದ ನಗ್ನತೆಯನ್ನು ಉತ್ತೇಜಿಸುವ ದಾಖಲೆಯ 6,82,420 ಖಾತೆಗಳನ್ನು ನಿಷೇಧಿಸಿದೆ. ಮೈಕ್ರೋ-ಬ್ಲಾಗಿಂಗ್ ಪ್ಲಾಟ್‌ಫಾರ್ಮ್ ದೇಶದಲ್ಲಿ ತನ್ನ ವೇದಿಕೆಯಲ್ಲಿ ಭಯೋತ್ಪಾದನೆಯನ್ನು ಉತ್ತೇಜಿಸುವ 1,548 ಖಾತೆಗಳನ್ನು ತೆಗೆದುಹಾಕಿದೆ.

ಟ್ವಿಟರ್ ಹೊಸ ಐಟಿ ನಿಯಮಗಳು 2021ರ ಅನುಸರಣೆಯಲ್ಲಿ ತನ್ನ ಮಾಸಿಕ ವರದಿಯಲ್ಲಿ "ಕುಂದುಕೊರತೆ ಪರಿಹಾರ ಕಾರ್ಯವಿಧಾನಗಳ ಮೂಲಕ ಅದೇ ಸಮಯದಲ್ಲಿ ಭಾರತದಲ್ಲಿನ ಬಳಕೆದಾರರಿಂದ ಕೇವಲ 73 ದೂರುಗಳನ್ನು ಸ್ವೀಕರಿಸಿದೆ ಎಂದು ಹೇಳಿದೆ. ಹೆಚ್ಚುವರಿಯಾಗಿ ಖಾತೆಯನ್ನು ಅಮಾನತುಗೊಳಿಸುವಂತೆ ಮನವಿ ಮಾಡುವ 27 ಕುಂದುಕೊರತೆಗಳನ್ನು ಟ್ವಿಟರ್ ಪ್ರಕ್ರಿಯೆಗೊಳಿಸಿದೆ. "ಪರಿಸ್ಥಿತಿಯ ನಿಶ್ಚಿತತೆಗಳನ್ನು ಪರಿಶೀಲಿಸಿದ ನಂತರ ನಾವು ಈ ಖಾತೆಗಳ 10 ಅಮಾನತುಗಳನ್ನು ರದ್ದುಗೊಳಿಸಿದ್ದೇವೆ. ಉಳಿದ ವರದಿಯಾದ ಖಾತೆಗಳನ್ನು ಅಮಾನತುಗೊಳಿಸಲಾಗಿದೆ" ಎಂದು ಕಂಪನಿ ಹೇಳಿದೆ. ಈ ವರದಿ ಮಾಡುವ ಅವಧಿಯಲ್ಲಿ ನಾವು ಟ್ವಿಟರ್ ಖಾತೆಗಳ ಕುರಿತು ಸಾಮಾನ್ಯ ಪ್ರಶ್ನೆಗಳಿಗೆ ಸಂಬಂಧಿಸಿದ 24 ವಿನಂತಿಗಳನ್ನು ಸಹ ಸ್ವೀಕರಿಸಿದ್ದೇವೆ ಎಂದು ಹೇಳಿದೆ.

ಹೊಸ ಐಟಿ ನಿಯಮಗಳು 2021 ರ ಅಡಿಯಲ್ಲಿ, 5 ಮಿಲಿಯನ್‌ಗಿಂತಲೂ ಹೆಚ್ಚು ಬಳಕೆದಾರರನ್ನು ಹೊಂದಿರುವ ದೊಡ್ಡ ಡಿಜಿಟಲ್ ಮತ್ತು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳು ಮಾಸಿಕ ಅನುಸರಣೆ ವರದಿಗಳನ್ನು ಪ್ರಕಟಿಸಬೇಕು. ಏ.1 ರಿಂದ ಟ್ವಿಟರ್ ಎಲ್ಲಾ ಲೆಗಸಿ ಪರಿಶೀಲಿಸಿದ ನೀಲಿ ಚೆಕ್ ಗುರುತುಗಳನ್ನು ತೆಗೆದುಹಾಕಲು ಸಿದ್ಧವಾಗಿದೆ ಎಂದು ವರದಿಯಾಗಿತ್ತು. ಮತ್ತು ಪರಿಶೀಲನೆಯೊಂದಿಗೆ ಬ್ಲೂ ಬ್ಯಾಡ್ಜ್ ಅನ್ನು ಮುಂದುವರೆಸಲು ಮತ್ತು ಕೆಲವು ಹೆಚ್ಚುವರಿ ಪ್ರಯೋಜನಗಳು ಟ್ವೀಟ್‌ಗಳನ್ನು ಸಂಪಾದಿಸುವ ಮತ್ತು ದೀರ್ಘವಾದ ಪಠ್ಯ/ ವಿಡಿಯೋಗಳನ್ನು ಪೋಸ್ಟ್ ಮಾಡುವ ಬಳಕೆದಾರರು ತಿಂಗಳಿಗೆ ರೂ. 900 ಅಥವಾ ವರ್ಷಕ್ಕೆ ರೂ 9,400 ಪಾವತಿಸಬೇಕಾಗುತ್ತದೆ.

ಇದನ್ನೂ ಓದಿ: ವಾಟ್ಸ್​ಆ್ಯಪ್ ಹೊಸ ಫೀಚರ್: ಕಳುಹಿಸಿದ ಮೆಸೇಜ್ ಮತ್ತೆ ಎಡಿಟ್​ ಮಾಡಬಹುದು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.