ETV Bharat / science-and-technology

ಬ್ರಹ್ಮಾಂಡದ ಆರಂಭಿಕ 700 ಗೆಲಾಕ್ಸಿಗಳನ್ನ ಪತ್ತೆ ಹಚ್ಚಿದ ಜೇಮ್ಸ್​ ವೆಬ್​ ಟೆಲಿಸ್ಕೋಪ್​ - ವೆಬ್‌ನ NIRCam

ಜೇಮ್ಸ್​ ವೆಬ್​ ಟೆಲಿಸ್ಕೋಫ್​​ ಬ್ರಹಾಂಡ ತನ್ನ ಆರಂಭಿಕ ಹಂತದಲ್ಲಿದ್ದಾಗ ಜನಿಸಿದ ಸುಮಾರು 700 ಕ್ಕೂ ಹೆಚ್ಚು ಗೆಲಾಕ್ಸಿಗಳು ಹಾಗೂ ನಕ್ಷತ್ರಗಳನ್ನು ಪತ್ತೆ ಹಚ್ಚಿದೆ.

Webb telescope finds over 700 galaxies of early universe
ಬ್ರಹ್ಮಾಂಡದ ಆರಂಭಿಕ 700 ಗೆಲಾಕ್ಸಿಗಳನ್ನ ಪತ್ತೆ ಹಚ್ಚಿದ ಜೇಮ್ಸ್​ ವೆಬ್​ ಟೆಲಿಸ್ಕೋಪ್​
author img

By

Published : Jun 10, 2023, 10:19 AM IST

ವಾಷಿಂಗ್ಟನ್: ಬ್ರಹ್ಮಾಂಡ ಆರಂಭಿಕ ಹಂತದಲ್ಲಿದ್ದಾಗ ಸುಮಾರು 700 ಗೆಲಾಕ್ಸಿಗಳಿದ್ದವು ಎಂಬ ಅಂಶವನ್ನು ಜೇಮ್ಸ್​ ವೆಬ್​ ಟೆಲಿಸ್ಕೋಪ್​ ಪತ್ತೆ ಹಚ್ಚಿದೆ. ಈ ವಿಚಾರ ಈ ಮೊದಲು ತಿಳಿದಿರಲಿಲ್ಲ ಎಂಬ ಅಂಶ ಗಮನಾರ್ಹವಾಗಿದೆ.

ಬಿಗ್ ಬ್ಯಾಂಗ್ ನಂತರ ಲಕ್ಷಾಂತರ ವರ್ಷಗಳ ಕಾಲ ಅಸ್ತಿತ್ವದಲ್ಲಿದ್ದ ಗೆಲಾಕ್ಸಿಗಳ ಬಗ್ಗೆ ವಿಜ್ಞಾನಿಗಳು ಅಧ್ಯಯನ ನಡೆಸುತ್ತಿದ್ದಾರೆ. ಇದು ರಿಯೊನೈಸೇಶನ್ ಯುಗ ಎಂದು ಕರೆಯಲ್ಪಡುವ ಕಾಲಘಟ್ಟದ ನಿರ್ಣಾಯಕ ಸಮಯವಾಗಿತ್ತು. ಮಹಾಸ್ಫೋಟದ ನಂತರ ನೂರಾರು ಮಿಲಿಯನ್ ವರ್ಷಗಳವರೆಗೆ, ಬ್ರಹ್ಮಾಂಡವು ಅನಿಲ ಮತ್ತು ಮಂಜಿನಿಂದ ತುಂಬಿತ್ತು. ಅದು ಶಕ್ತಿಯುತ ಬೆಳಕಿಗೆ ಅಪಾರದರ್ಶಕವಾಗಿತ್ತು. ಬಿಗ್ ಬ್ಯಾಂಗ್ ನಂತರ ಹಾಗೂ ಆ ಬಳಿಕದ ಒಂದು ಶತಕೋಟಿ ವರ್ಷಗಳ ಕಾಲಾನಂತರ ಮಂಜು ತೆರವುಗೊಂಡಿದ್ದರಿಂದ ಬ್ರಹ್ಮಾಂಡವು ಪಾರದರ್ಶಕವಾಯಿತು ಎನ್ನಲಾಗಿದೆ. ಹೀಗೆ ನಿರಂತರವಾಗಿ ನಡೆದ ಈ ಪ್ರಕ್ರಿಯೆಯನ್ನು ರಿಯೋನೈಸೇಶನ್ ಎಂದು ಕರೆಯಲಾಗುತ್ತದೆ ಎಂದು ವಿಜ್ಞಾನಿಗಳು ವಿವರಿಸಿದ್ದಾರೆ.

ಟಕ್ಸನ್‌ನಲ್ಲಿರುವ ಅರಿಜೋನಾ ವಿಶ್ವವಿದ್ಯಾನಿಲಯದ ಕೆವಿನ್ ಹೈನ್‌ಲೈನ್ ಮತ್ತು ಅವರ ತಂಡವು ವೆಬ್‌ನ NIRCam (ಸಮೀಪ-ಇನ್‌ಫ್ರಾರೆಡ್ ಕ್ಯಾಮೆರಾ) ಉಪಕರಣವನ್ನು ಬಳಸಿ 370 ಮಿಲಿಯನ್ ಮತ್ತು 650 ಮಿಲಿಯನ್ ವರ್ಷಗಳಷ್ಟು ಹಳೆಯದಾಗಿದ್ದ 700 ಕ್ಕೂ ಹೆಚ್ಚು ಗೆಲಾಕ್ಸಿಗಳನ್ನು ಗುರುತಿಸುವಲ್ಲಿ ಸಫಲರಾಗಿದ್ದಾರೆ.

ಇಷ್ಟೊಂದು ಗೆಲಾಕ್ಸಿಗಳನ್ನು ವೆಬ್​ ಉಡಾವಣೆಯ ಮೊದಲೇ ಗುರುತಿಸಲಾಗಿತ್ತು. ವೆಬ್​ ಉಡಾವಣೆಯಾದ ಬಳಿಕ ಸೊಗಸಾದ ರೆಸಲ್ಯೂಶನ್ ಮತ್ತು ಸೂಕ್ಷ್ಮತೆಯನ್ನು ಗುರುತಿಸುವ ಪರಿಕರಗಳ ಮೂಲಕ ದೂರದ ಗೆಲಾಕ್ಸಿಗಳ ಉತ್ತಮ ನೋಟವನ್ನು ಪಡೆಯಲು ವೆಬ್​​​ನ ಎನ್​​ಐಆರ್​ ಕ್ಯಾಮ್​ ಸಹಾಯ ಮಾಡಿತು ಎಂದು ಬಾಹ್ಯಾಕಾಶ ವಿಜ್ಞಾನಿಗಳು ಹೇಳಿದ್ದಾರೆ.

"ಈ ಹಿಂದೆ, ನಾವು ನೋಡಬಹುದಾದ ಗೆಲಾಕ್ಸಿಗಳು ದೊಡ್ಡ ದೊಡ್ಡ ನೀರಿನ ಹನಿಗಳಂತೆ ಕಾಣುತ್ತಿದ್ದವು. ಮತ್ತು ಇನ್ನೂ ಹನಿಗಳಂತೆ ಕಾಣುತ್ತಿದ್ದ ಗೆಲಾಕ್ಸಿಗಳು ಬ್ರಹ್ಮಾಂಡದ ಆರಂಭದಲ್ಲಿ ಲಕ್ಷಾಂತರ ಅಥವಾ ಶತಕೋಟಿ ನಕ್ಷತ್ರಗಳನ್ನು ಪ್ರತಿನಿಧಿಸುತ್ತವೆ" ಎಂದು ಹೈನ್‌ಲೈನ್ ಹೇಳಿದ್ದಾರೆ.

"ಈಗ ಅವುಗಳಲ್ಲಿ ಕೆಲವು ವಾಸ್ತವವಾಗಿ ಗೋಚರ ರಚನೆಯೊಂದಿಗೆ ವಿಸ್ತೃತ ವಸ್ತುಗಳಾಗಿರುವುದನ್ನು ನಾವು ನೋಡಬಹುದು. ಸಮಯದ ಆರಂಭದ ಕೆಲವೇ ನೂರು ದಶಲಕ್ಷ ವರ್ಷಗಳ ನಂತರ ನಕ್ಷತ್ರಗಳ ಗುಂಪುಗಳು ರಚನೆಯಾದವು‘‘ ಎಂದು ಅವರ ಇದೇ ವೇಳೆ ಹೇಳಿದರು.

ಈ ಅಧ್ಯಯನವು JWST ಅಡ್ವಾನ್ಸ್ಡ್ ಡೀಪ್ ಎಕ್ಸ್‌ಟ್ರಾಗ್ಯಾಲಕ್ಟಿಕ್ ಸರ್ವೆ (JADES) ಎಂಬ ಅಂತಾರಾಷ್ಟ್ರೀಯ ಸಹಯೋಗದ ಭಾಗವಾಗಿದೆ. ಇದು ಆಕಾಶದಲ್ಲಿ ಉರ್ಸಾ ಮೈನರ್ ನಕ್ಷತ್ರಪುಂಜ ಹಾಗೂ ಇನ್ನೊಂದು ಫೋರ್ನಾಕ್ಸ್ ಕ್ಲಸ್ಟರ್‌ನ ದಿಕ್ಕಿನಲ್ಲಿರುವ ನಿರ್ವಾತ ಪ್ರದೇಶದಲ್ಲಿ ರಂದ್ರಗಳ ವೀಕ್ಷಣೆ ಮಾಡಿ ಈ ಮಾಹಿತಿ ಕಲೆ ಹಾಕಿದೆ.

ಈ ಹೊಸ ಸಂಶೋಧನೆಗಳು ಮೊದಲ ಗೆಲಾಕ್ಸಿಗಳು ಮತ್ತು ನಕ್ಷತ್ರಗಳು ಹೇಗೆ ರೂಪುಗೊಂಡವು ಎಂಬುದರ ಮೇಲೆ ಬೆಳಕು ಚೆಲ್ಲುತ್ತದೆ. ಆದಾಗ್ಯೂ 93 ಪ್ರತಿಶತದಷ್ಟು ಹೊಸ ಗೆಲಾಕ್ಸಿಗಳನ್ನು ನಾವು ಹಿಂದೆಂದೂ ನೋಡಿರಲಿಲ್ಲ ಎಂದು ಸಂಶೋಧಕರು ಹೇಳಿದ್ದಾರೆ. "ಆರಂಭಿಕ ಬ್ರಹ್ಮಾಂಡದಲ್ಲಿ ನಕ್ಷತ್ರ ರಚನೆಯು ನಾವು ಯೋಚಿಸಿದ್ದಕ್ಕಿಂತ ಹೆಚ್ಚು ಜಟಿಲವಾಗಿದೆ ಎಂದು ನಾವು ಈ ಸಂಶೋಧನೆಯಿಂದ ಕಂಡುಕೊಂಡಿದ್ದೇವೆ" ಎಂದು ಟಕ್ಸನ್‌ನಲ್ಲಿರುವ ಅರಿಜೋನಾ ವಿಶ್ವವಿದ್ಯಾಲಯದ ಮಾರ್ಸಿಯಾ ರೈಕ್ ಹೇಳಿದ್ದಾರೆ.

ಇದನ್ನು ಓದಿ:ಆ್ಯಪಲ್​ iPadOS 17 ಲಾಂಚ್: ಪರ್ಸನಲೈಸ್ಡ್ ಲಾಕ್​ಸ್ಕ್ರೀನ್, ವಿಜೆಟ್ಸ್​ ಅಳವಡಿಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.