ETV Bharat / science-and-technology

ಇಸ್ರೋ ಚಂದ್ರೋದಯ! 'ನಾಲ್ಕು ವರ್ಷದ ಪರಿಶ್ರಮಕ್ಕೆ ಪ್ರತಿಫಲ ಸಿಕ್ಕಿದೆ'- ಇಸ್ರೋ ಅಧ್ಯಕ್ಷ ಸೋಮನಾಥ್​ - ISRO chief S Somanath

ಚಂದ್ರಯಾನ-3 ಯೋಜನೆ​ ಯಶಸ್ಸು ಕಂಡಿದ್ದನ್ನು ಇಸ್ರೋ ಅಧ್ಯಕ್ಷ ಎಸ್​. ಸೋಮನಾಥ್​ ಅಧಿಕೃತವಾಗಿ ಪ್ರಕಟಿಸಿದರು. ನಮ್ಮ ಲ್ಯಾಂಡರ್​ ಅಂದುಕೊಂಡಂತೆ ಇಳಿಯಿತು ಎಂದು ತಿಳಿಸಿ, ಶ್ರಮಿಸಿದ ಎಲ್ಲ ವಿಜ್ಞಾನಿಗಳಿಗೂ ಧನ್ಯವಾದ ಅರ್ಪಿಸಿದರು.

ಇಸ್ರೋ ಅಧ್ಯಕ್ಷ ಸೋಮನಾಥ್
ಇಸ್ರೋ ಅಧ್ಯಕ್ಷ ಸೋಮನಾಥ್
author img

By ETV Bharat Karnataka Team

Published : Aug 23, 2023, 8:08 PM IST

Updated : Aug 23, 2023, 8:24 PM IST

ಬೆಂಗಳೂರು : ಚಂದ್ರಯಾನ-3 ಯೋಜನೆ ಸಕ್ಸಸ್​ ಕಂಡು ವಿಕ್ರಮ್​ ಲ್ಯಾಂಡರ್​ ಚಂದ್ರಸ್ಪರ್ಶವಾಗಿದೆ. ಭಾರತ ಚಂದ್ರನ ಮೇಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಮುಖ್ಯಸ್ಥ ಎಸ್.ಸೋಮನಾಥ್ ಇಂದು ಸಂಜೆ (ಬುಧವಾರ) ಘೋಷಿಸಿದರು.

ಚಂದ್ರಯಾನ-3 ಯೋಜನೆಯು ಅಭೂತಪೂರ್ವ ಯಶಸ್ಸು ಕಂಡ ಬಳಿಕ ಎಲ್ಲರಿಗೂ ಧನ್ಯವಾದ ತಿಳಿಸಿ ಮಾತನಾಡಿದ ಅವರು, ಇನ್ನು ನಾವು ಚಂದ್ರನ ಊರಿನ ಪಯಣಿಗರು. ಶಶಿಯ ಮೇಲೆ ನಮ್ಮ ನೌಕೆ ನಿಂತಿದೆ. ನಾಲ್ಕು ವರ್ಷಗಳ ಶ್ರಮ ಇಂದು ಪ್ರತಿಫಲ ಕಂಡಿತು. ಇದರ ಹಿಂದೆ ಅವಿರತವಾಗಿ ಶ್ರಮಿಸಿದ ಎಲ್ಲ ವಿಜ್ಞಾನಿಗಳಿಗೂ ಧನ್ಯವಾದಗಳು ಮತ್ತು ಅಭಿನಂದನೆಗಳು ಎಂದು ಹೇಳಿದರು.

  • #WATCH | ISRO chief S Somanath congratulates his team on the success of the Chandrayaan-3 mission, says, "Thank you everyone for the support...We learned a lot from our failure and today we succeeded. We are looking forward to the next 14 days from now for Chandrayaan-3." pic.twitter.com/Rh0t5uHhGd

    — ANI (@ANI) August 23, 2023 " class="align-text-top noRightClick twitterSection" data=" ">

ಚಂದ್ರನ ಮೇಲೆ ಲ್ಯಾಂಡರ್​ ಇಳಿದ ಬಳಿಕ ಸಹೋದ್ಯೋಗಿಗಳೊಂದಿಗೆ ಸಂಭ್ರಮಾಚರಣೆ ಮಾಡಿದ ಸೋಮನಾಥನ್​, ಹರ್ಷ ವ್ಯಕ್ತಪಡಿಸಿದರು. ಲ್ಯಾಂಡರ್ ಇಳಿದ ಬಳಿಕ ಪ್ರಧಾನಿ ಮೋದಿ ಅವರೊಂದಿಗೆ ಮಾತನಾಡಿದ ಅವರು, ಪ್ರಧಾನಿಗಳೇ ನಾವು ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಸಾಧಿಸಿದ್ದೇವೆ. ಭಾರತವು ಚಂದ್ರನ ಮೇಲಿದೆ ಎಂದು ಹೇಳಿದರು. ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಿರುವ ಪ್ರಧಾನಿ, ದಕ್ಷಿಣ ಆಫ್ರಿಕಾದಿಂದ ಚಂದ್ರಯಾನ-3 ರ ಯಶಸ್ಸನ್ನು ವಿಡಿಯೋ ಕಾನ್ಫ್​ರೆನ್ಸ್​ ಮೂಲಕ ವೀಕ್ಷಿಸಿದರು.

ಬೆಂಗಳೂರಿನ ಇಸ್ರೋ ಕೇಂದ್ರದಲ್ಲಿ ಜಮಾಯಿಸಿದ್ದ ವಿಜ್ಞಾನಿಗಳು ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಂಡರು. ಪ್ರಧಾನಿ ನರೇಂದ್ರ ಮೋದಿ ಅವರು ದಕ್ಷಿಣ ಆಫ್ರಿಕಾದಿಂದಲೇ ರಾಷ್ಟ್ರಧ್ವಜವನ್ನು ಹಾರಿಸುವ ಮೂಲಕ ದೇಶವಾಸಿಗಳೊಂದಿಗೆ ಸಂಭ್ರಮಿಸಿದರು.

ಇಸ್ರೋ ಟ್ವೀಟ್​: ಚಂದ್ರಯಾನ ಯಶಸ್ವಿಯಾದ ಬಳಿಕ ಎಕ್ಸ್​ನಲ್ಲಿ(ಹಿಂದಿನ ಟ್ವಿಟರ್​) ಹಂಚಿಕೊಂಡಿರುವ ಇಸ್ರೋ, 'ಚಂದ್ರಯಾನ-3 ಮಿಷನ್ ಚಂದ್ರನಿಂದಲೇ ಹೇಳುವಂತೆ, ಭಾರತೀಯರೇ ನಾನು ಗಮ್ಯಸ್ಥಾನವನ್ನು ತಲುಪಿದ್ದೇನೆ. ನೀವೂ ಸಹ ಇಲ್ಲಿದ್ದೀರಿ. ಚಂದ್ರಯಾನ-3 ನೌಕೆ ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಯಿತು' ಎಂದು ಬರೆದುಕೊಂಡಿದೆ.

  • Chandrayaan-3 Mission:
    'India🇮🇳,
    I reached my destination
    and you too!'
    : Chandrayaan-3

    Chandrayaan-3 has successfully
    soft-landed on the moon 🌖!.

    Congratulations, India🇮🇳!#Chandrayaan_3#Ch3

    — ISRO (@isro) August 23, 2023 " class="align-text-top noRightClick twitterSection" data=" ">

ಚಂದ್ರಯಾನ-3 ಮಿಷನ್‌ನ ಯೋಜನಾ ನಿರ್ದೇಶಕ ಪಿ.ವೀರಮುತ್ತುವೆಲ್ ಮಾತನಾಡಿ, ಚಂದ್ರನ ದಕ್ಷಿಣ ಧ್ರುವದ ಮೇಲೆ ಇಳಿದ ಮೊದಲ ದೇಶ ಭಾರತವಾಗಿದೆ. ಚಂದ್ರಯಾನ-3 ಮಿಷನ್ ಅನ್ನು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾಯಿತು. 41 ದಿನಗಳ ಸತತ ಪ್ರಯತ್ನ ಇಂದು ಕೈಗೂಡಿದೆ ಎಂದು ಹೇಳಿದರು.

ಪ್ರಧಾನಿ ಮೋದಿ ಶ್ಲಾಘನೆ: ಇಸ್ರೋದ ವಿಜ್ಞಾನಿಗಳ ಸಾಧನೆಯನ್ನು ಕೊಂಡಾಡಿದ ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿದರು. ಹೆಮ್ಮೆಯ ವಿಜ್ಞಾನಿಗಳ ಶ್ರಮದಿಂದ ಇಂದು ದೇಶ ಚಂದ್ರನಲ್ಲಿಗೆ ತಲುಪಿದೆ. ಇದು ಚಂದ್ರನ ಮೇಲೆ ಧ್ವಜ ನೆಟ್ಟಾಗಿದೆ. ಇನ್ನು ಮುಂದೆ ಆದಿತ್ಯ ಎಲ್​-1, ಮಂಗಳಯಾನ, ಮಾನವ ಸಹಿತ ಗಗನಯಾನ ಬಾಕಿ ಇವೆ. ಇವೆಲ್ಲವುಗಳಲ್ಲಿ ಭಾರತದ ವಿಜ್ಞಾನಿಗಳು ಯಶಸ್ವಿಯಾಗುತ್ತಾರೆ. ಇಸ್ರೋದ ಈ ಸಾಧನೆಯನ್ನು ಭಾರತ ಸೂರ್ಯಚಂದ್ರ ಇರುವವರೆಗೂ ನೆನಪಿಡಬೇಕು ಎಂದು ಹೇಳಿದರು.

ಇದನ್ನೂ ಓದಿ: ಚಂದ್ರನ 'ದಕ್ಷಿಣ ಪಥೇಶ್ವರ' ಭಾರತ: ಯಾರೂ ಮುಟ್ಟದ ಜಾಗದಲ್ಲಿ 'ಇಸ್ರೋ' ಹೆಜ್ಜೆಗುರುತು!

Last Updated : Aug 23, 2023, 8:24 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.