ನವದೆಹಲಿ: ವೊಡಾಫೋನ್ ಐಡಿಯಾದ ಸುಮಾರು 20 ಮಿಲಿಯನ್ ಗ್ರಾಹಕರ ಕರೆ ಡೇಟಾ ದಾಖಲೆಗಳನ್ನು ಸೈಬರ್ ಅಪರಾಧಿಗಳು ಸೋರಿಕೆ ಮಾಡಿದ್ದಾರೆ ಎಂದು ಸೈಬರ್ ಸೆಕ್ಯುರಿಟಿ ಸಂಶೋಧನಾ ಸಂಸ್ಥೆಯೊಂದು ಆರೋಪಿಸಿದೆ. ಆದರೆ ಯಾವುದೇ ಮಾಹಿತಿ ಸೋರಿಕೆಯಾಗಿಲ್ಲ ಎಂದು ಟೆಲಿಕಾಂ ಆಪರೇಟರ್ ನಿರಾಕರಿಸಿದೆ.
ಕಂಪನಿಯ ವ್ಯವಸ್ಥೆಗಳಲ್ಲಿನ ದೋಷಗಳಿಂದಾಗಿ 20.6 ಮಿಲಿಯನ್ ಪೋಸ್ಟ್‌ಪೇಯ್ಡ್ Vi ಗ್ರಾಹಕರ ಕರೆ ಡೇಟಾ ದಾಖಲೆಗಳು ಸೋರಿಕೆಯಾಗಿದೆ ಎಂದು ಸೈಬರ್ - ಸೆಕ್ಯುರಿಟಿ ಸಂಶೋಧನಾ ಸಂಸ್ಥೆ ಸೈಬರ್‌ಎಕ್ಸ್ 9 ತನ್ನ ವರದಿಯಲ್ಲಿ ಹೇಳಿಕೊಂಡಿದೆ. ಡೇಟಾ ಸೋರಿಕೆಯಾಗಿದ್ದು, ಕರೆ ಸಮಯ, ಕರೆ ಅವಧಿ, ಕರೆ ಮಾಡಿದ ಸ್ಥಳ, ಚಂದಾದಾರರ ಪೂರ್ಣ ಹೆಸರು, ವಿಳಾಸ, SMS ವಿವರಗಳು ಸೇರಿದಂತೆ ರೋಮಿಂಗ್ ವಿವರಗಳು ಸಹ ಒಳಗೊಂಡಿರುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಆರೋಪವನ್ನು ನಿರಾಕರಿಸಿದ ವೊಡಾಫೋನ್ ಐಡಿಯಾ ಕಂಪನಿ ಯಾವುದೇ ಡೇಟಾ ಸೋರಿಕೆಯಾಗಿಲ್ಲ. ‘ಸುಳ್ಳು ಮತ್ತು ದುರುದ್ದೇಶಪೂರಿತ’ ಇಂತಹ ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ. ಬಿಲ್ಲಿಂಗ್ ಸಂವಹನಗಳಲ್ಲಿ ಸಂಭವನೀಯ ಸೋರಿಕೆಯ ಬಗ್ಗೆ ಕಂಪನಿಯ ಗಮನಕ್ಕೆ ಬಂದ ಕೂಡಲೇ ಸರಿಪಡಿಸಲಾಗಿದೆ. ಯಾವುದೇ ಡೇಟಾ ಸೋರಿಕೆಯಾಗಿಲ್ಲ ಎಂದು ಹೇಳಿದೆ.
ಕಂಪತನಿ ತನ್ನ ಭದ್ರತಾ ಮೂಲಸೌಕರ್ಯ ಬಲಪಡಿಸಲು ನಿಯಮಿತವಾಗಿ ತಪಾಸಣೆ ಮತ್ತು ಲೆಕ್ಕಪರಿಶೋಧನೆಗಳನ್ನು ನಡೆಸುತ್ತದೆ ಎಂದು ವೊಡಾಫೋನ್ ಐಡಿಯಾ ಹೇಳಿದೆ. ಆದರೆ ಸೈಬರ್‌ಎಕ್ಸ್ 9 ಪ್ರಕಾರ, ಕಳೆದ ಎರಡು ವರ್ಷಗಳಲ್ಲಿ ಲಕ್ಷಾಂತರ Vi ಗ್ರಾಹಕರ ಕರೆ ದಾಖಲೆಗಳು ಮತ್ತು ಇತರ ಡೇಟಾ ಸೋರಿಕೆಯಾಗಿದೆ ಎಂದು ಹೇಳಿದೆ.
ಓದಿ: ಕಂಪನಿ ಹೆಸರಲ್ಲಿ ವಂಚಿಸುತ್ತಾರೆ ಎಚ್ಚರಿಕೆ: ಬಳಕೆದಾರರಿಗೆ ವೊಡಾಫೋನ್ ಐಡಿಯಾ ಸೂಚನೆ